ETV Bharat / state

ಅಗೆದು ಹಾಗೆ ಬಿಟ್ಟಿದ್ದ ರಸ್ತೆ ದುರಸ್ತಿ: ಇದು 'ಈಟಿವಿ ಭಾರತ' ಫಲಶ್ರುತಿ

ರಸ್ತೆ ಅಗೆದು ಅದನ್ನು ದುರಸ್ತಿ ಮಾಡದ ಕಾರಣ ಮುದ್ದೇಬಿಹಾಳ ತಾಲೂಕಿನ ಮಲಗಲದಿನ್ನಿಗೆ ತೆರಳಲು ಗ್ರಾಮಸ್ಥರು ಸಂಕಷ್ಟಪಡುತ್ತಿದ್ದರು. ಈ ವಿಚಾರವಾಗಿ ಈಟಿವಿ ಭಾರತದ ವರದಿ ನೋಡಿದ ಅಧಿಕಾರಿಗಳು ತಕ್ಷಣ ಸ್ಪಂದಿಸಿ ರಸ್ತೆಯನ್ನು ದುರಸ್ತಿಪಡಿಸಿದ್ದಾರೆ.

author img

By

Published : May 30, 2020, 8:59 PM IST

Updated : May 30, 2020, 9:41 PM IST

Digged Road Repair muddebuhala ETV bharat impact
ಅಗೆದಿದ್ದ ರಸ್ತೆ ದುರಸ್ತಿ, ಪ್ರಯಾಣಿಕರ ಸಮಯ-ಹಣ ಉಳಿತಾಯ: ಇದು ‘ಈಟಿವಿ ಭಾರತ’ ಫಲಶ್ರುತಿ

ಮುದ್ದೇಬಿಹಾಳ(ವಿಜಯಪುರ): ತಾಲೂಕಿನ ಮಲಗಲದಿನ್ನಿಗೆ ತೆರಳುವ ರಸ್ತೆ ಮಧ್ಯೆ ಅಗೆದಿದ್ದ ಗುಂಡಿಯನ್ನು ಕೊನೆಗೂ ಗುತ್ತಿಗೆದಾರರು ದುರಸ್ತಿ ಪಡಿಸಿದ್ದಾರೆ.

ಕಳೆದ ಒಂದು ತಿಂಗಳ ಕಾಲ ರಸ್ತೆ ಅಗೆದು ಹಾಗೆ ಬಿಟ್ಟಿದ್ದ, ಗುತ್ತಿಗೆದಾರರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ‘ಈಟಿವಿ ಭಾರತ’ ದಲ್ಲಿ ಮೇ 23 ರಂದು ‘15 ಮೀಟರ್ ರಸ್ತೆ ದಾಟಲು ಒಂದೂವರೆ ಕಿ.ಮೀ ಸಂಚರಿಸಬೇಕು’ ಎಂಬ ಶೀರ್ಷಿಕೆಯಡಿ ವರದಿ ಬಿತ್ತರಿಸಲಾಗಿತ್ತು. ಇದನ್ನು ಗಮನಿಸಿದ ಕೆಬಿಜೆಎನ್‌ಎಲ್ ಅಧಿಕಾರಿ ಎಂ.ಸಿ.ಡೊಳ್ಳಿ ಅವರು ಗುತ್ತಿಗೆದಾರರಿಗೆ ಸೂಚಿಸಿ ಕಾಲುವೆಗೆ ಎರಡು ದೊಡ್ಡ ಸಿಮೆಂಟ್ ಪೈಪ್‌ಗಳನ್ನು ಹಾಕಿ ರಸ್ತೆಯನ್ನು ದುರಸ್ತಿ ಮಾಡಿಸಿದ್ದಾರೆ.

ಇದನ್ನೂ ಓದಿ: 15 ಮೀಟರ್ ರಸ್ತೆ ದಾಟಲು ಒಂದೂವರೆ ಕಿ. ಮೀ ಸಂಚರಿಸಬೇಕು..!

ಇದರಿಂದ ಗ್ರಾಮಸ್ಥರು ಸುತ್ತು ಹಾಕಿ ಬರುವ ಶ್ರಮ ಹಾಗೂ ಹೆಚ್ಚುವರಿಯಾಗಿ ವ್ಯರ್ಥವಾಗುತ್ತಿದ್ದ ಹಣ-ಸಮಯ ಉಳಿತಾಯವಾದಂತಾಗಿದೆ. ಅಗೆದಿದ್ದ ರಸ್ತೆ ದುರಸ್ತಿ ಆಗಿದ್ದಕ್ಕೆ ಆ ಭಾಗದ ಗ್ರಾಮಸ್ಥರು ಈಟಿವಿ ಭಾರತಕ್ಕೆ ಅಭಿನಂದನೆ ತಿಳಿಸಿದ್ದಾರೆ.

Last Updated : May 30, 2020, 9:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.