ETV Bharat / state

ವಿಜಯಪುರ: ಭಕ್ತರಿಗೆ ದರ್ಶನ ನೀಡಿದ ಸಿದ್ದೇಶ್ವರ ಸ್ವಾಮೀಜಿ - ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಇಂದು ಭಕ್ತರಿಗೆ ದರ್ಶನ ನೀಡಿದರು.

ಸಿದ್ದೇಶ್ವರ ಸ್ವಾಮೀಜಿ
ಸಿದ್ದೇಶ್ವರ ಸ್ವಾಮೀಜಿ
author img

By

Published : Dec 30, 2022, 9:23 PM IST

ವಿಜಯಪುರ: ಸಿದ್ದೇಶ್ವರ ಸ್ವಾಮೀಜಿ ಚೇತರಿಸಿಕೊಂಡಿದ್ದಾರೆ. ಸದ್ಯ ಆರೋಗ್ಯವಾಗಿದ್ದು, ಭಕ್ತರಿಗೆ ದರ್ಶನ ಕೊಡುತ್ತಿದ್ದಾರೆ. ಯಾವುದೇ ವದಂತಿಗಳಿಗೆ ಭಕ್ತರು ಕಿವಿಕೊಡಬಾರದು ಎಂದು ಜ್ಞಾಜಯೋಗಾಶ್ರಮ ಪ್ರಕಟಣೆ ಹೊರಡಿಸಿದೆ.

ಇಲ್ಲಿನ ಜ್ಞಾನಯೋಗಾಶ್ರಮದ ಮೊದಲ‌ ಮಹಡಿಯಿಂದಲೇ ಮಧ್ಯಾಹ್ನ 1 ಮತ್ತು ಸಾಯಂಕಾಲ 5ಗಂಟೆಗೆ ಸ್ವಾಮೀಜಿ ದರ್ಶನ ನೀಡಿದ್ದರು. ಆದ್ರೆ ಸಂಜೆ ಭಕ್ತರು ಹೆಚ್ಚಿಗೆ ಬಂದ ಕಾರಣ ಸ್ವಾಮೀಜಿ ಮತ್ತೆ ಸಂಜೆ 7ಕ್ಕೆ ದರ್ಶನ ನೀಡಿದರು. ಸ್ವಾಮೀಜಿ ಕಂಡ ಕೂಡಲೇ ಭಕ್ತರು ಚಪ್ಪಾಳೆ ಹೊಡೆದು ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಸ್ವಾಮೀಜಿ ಆಶೀರ್ವಾದ ಮಾಡಿದರು. ನಾಳೆಯಿಂದ ಭಕ್ತರು ಮಧ್ಯಾಹ್ನ ಮಾತ್ರ ದರ್ಶನ ಪಡೆಯಬೇಕೆಂದು ಆಶ್ರಮದ‌ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಮನವಿ ಮಾಡಿದರು.

ಮೊದಲ‌ ಮಹಡಿಯಿಂದ ನೆಲ ಮಹಡಿಗೆ ಲಿಫ್ಟ್ ಮೂಲಕ ವ್ಹೀಲ್​​ ಚೇರ್​ನಲ್ಲಿ ಸ್ವಾಮೀಜಿ ಆಗಮಿಸಿ, ಕೆಲಕಾಲ ವಿಹರಿಸಿದ್ದಾರೆ. ನಾಳೆಯಿಂದ ಎಂದಿನಂತೆ ‌ಪೂಜೆ ನೆರವೇರಲಿದೆ ಎಂದು ಬಸವಲಿಂಗ ಸ್ವಾಮೀಜಿ ತಿಳಿಸಿದರು. ಇತ್ತೀಚೆಗೆ ಕೆಲ ದಿನಗಳಿಂದ ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯದಿಂದ ಬಳಲುತ್ತಿದ್ದರು. ಸದ್ಯ ಚೇತರಿಸಿಕೊಂಡಿದ್ದು, ಇಂದಿನಿಂದ ಭಕ್ತರಿಗೆ ದರ್ಶನ ಕೊಡುತ್ತಿದ್ದಾರೆ.

(ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಮುರುಗೇಶ ನಿರಾಣಿ )

ETV Bharat Logo

Copyright © 2025 Ushodaya Enterprises Pvt. Ltd., All Rights Reserved.