ವಿಜಯಪುರ: ಕೊರೊನಾ ಶಂಕಿತರ ಗಂಟಲು ದ್ರವ ಪರೀಕ್ಷೆ ಮಾಡಲು ಬಳಸುವ ಅತ್ಯಾಧುನಿಕ ಕ್ಯಾಬಿನ್ಗಳನ್ನು, ಜಿಲ್ಲಾ ಆಸ್ಪತ್ರೆಯ ಸರ್ವೇಕ್ಷಣಾ ಅಧಿಕಾರಿಗಳ ಕಚೇರಿಯಲ್ಲಿ ವೈದ್ಯರ ಬಳಕೆಗಾಗಿ ನೀಡಿಲಾಯಿತು. ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರ ಫೌಂಡೇಶನ್ ವತಿಯಿಂದ, ಎರಡು ಕ್ಯಾಬಿನ್ಗಳನ್ನು ನೀಡಲಾಯಿತು. ಇವು 'ಡಿಆರ್ಡಿಓ'ಗಾಗಿ ಸಿದ್ಧಪಡಿಸಿದ ಘಟಕಗಳಾಗಿದ್ದು, ವಿಧಾನ ಪರಿಷತ್ ಸದಸ್ಯ ಸುನಿಲ್ಗೌಡ ಅವರ ಒತ್ತಾಯದ ಮೇರೆಗೆ ಈಗಾಗಲೇ ವಿಜಯಪುರ ಜಿಲ್ಲೆಗೆ ಕಳುಹಿಸಲಾಗಿದೆ.
₹ 1.35 ಲಕ್ಷ ಮೌಲ್ಯದ ಈ ಘಟಕವನ್ನು ಜಿಲ್ಲಾಸ್ಪತ್ರೆಯ ಬಳಿ ಒಂದು ಹಾಕಿದರೆ, ಇನ್ನೊಂದನ್ನು ಬಿಎಲ್ಡಿಇ ಆಸ್ಪತ್ರೆಯ ಬಳಿ ಇಡಲಾಗಿದೆ. ಇನ್ನು ಜಿಲ್ಲಾಡಳಿತ ಇನ್ನೊಂದರ ಬೇಡಿಕೆ ಸಲ್ಲಿಸಿದ ಹಿನ್ನೆಲೆ, ಇನ್ನೊಂದು ಪೂರೈಸುವ ವ್ಯವಸ್ಥೆ ಮಾಡಲಾಗುವುದು ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಇನ್ನು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾತನಾಡಿ, ಇದೊಂದು ಉತ್ತಮವಾದ ಘಟಕವಾಗಿದ್ದು, ಇದನ್ನು ಸ್ವ್ಯಾಬ್ ಟೆಸ್ಟ್ ಮಾಡುವ ವೈದ್ಯರಿಗೆ ಯಾವುದೇ ಭೀತಿ ಇರದ ಹಾಗೆ ಸಿದ್ಧಪಡಿಸಿದ್ದಾರೆ. ಇದು ಜಿಲ್ಲಾಡಳಿತಕ್ಕೆ ಹೆಚ್ಚಿನ ಉಪಯೋಗವಾಗಲಿದೆ ಎಂದರು.