ಮುದ್ದೇಬಿಹಾಳ (ವಿಜಯಪುರ): ತಾಲೂಕಿನ ಶಿರೋಳ ಗ್ರಾಮದ ಹೊರವಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಶವ ದೊರೆತಿದೆ. ಮೃತಳನ್ನು ಮುದ್ದೇಬಿಹಾಳ ಪಟ್ಟಣದ ಹೊರಪೇಟೆ ನಿವಾಸಿ ಪವಿತ್ರಾ ಗಿರೀಶ್ ಹಡಪದ (16) ಎಂದು ಗುರುತಿಸಲಾಗಿದೆ.
![muddebihala](https://etvbharatimages.akamaized.net/etvbharat/prod-images/12254568_th.jpg)
ಘಟನಾ ಸ್ಥಳದಲ್ಲಿ ಮೊಬೈಲ್ ಜಜ್ಜಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಮಾಹಿತಿ ದೊರೆತಿದೆ. ಪ್ರಕರಣ ಆತ್ಮಹತ್ಯೆಯೋ, ಕೊಲೆಯೋ ಎಂಬುದು ತನಿಖೆ ಬಳಿಕ ತಿಳಿಯಬೇಕಿದೆ. ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪಿಎಸ್ಐ ಎಂ.ಬಿ.ಬಿರಾದಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಗಳ ಸಾವಿನ ಬಗ್ಗೆ ಸಂಶಯವಿದ್ದು, ಸೂಕ್ತ ತನಿಖೆ ನಡೆಸುವಂತೆ ಕೋರಿ ದೂರು ದಾಖಲಿಸುವುದಾಗಿ ಬಾಲಕಿಯ ತಂದೆ ಗಿರೀಶ್ ಹಡಪದ ತಿಳಿಸಿದ್ದಾರೆ.
ಇದನ್ನು ಓದಿ: Online ಕ್ಲಾಸ್ಗಾಗಿ ಬೆಟ್ಟ ಏರಿದ ವಿದ್ಯಾರ್ಥಿಗಳು: ನೆಟ್ವರ್ಕ್ ಭಾಗ್ಯ ಕಲ್ಪಿಸುವಂತೆ ಮನವಿ