ETV Bharat / state

ಜಿಲ್ಲೆಗಳನ್ನು ಲಾಕ್​ಡೌನ್​ ಮಾಡುವ ಪ್ರಸ್ತಾಪವಿಲ್ಲ : ಡಿಸಿಎಂ ಗೋವಿಂದ ಕಾರಜೋಳ - ಲಾಕ್​ಡೌನ್​ ಪರಿಣಾಮಗಳು

ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗಿ ಕಂಡು ಬಂದ ವಲಯಗಳನ್ನು ಸೀಲ್​ ಡೌನ್​ ಮಾಡಲಾಗುವುದೇ ಹೊರತು ಜಿಲ್ಲೆಗಳನ್ನು ಲಾಕ್​ಡೌನ್​ ಮಾಡುವುದಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

dcm-govinda-karajola-statement-of-districts-lockdown
ಡಿಸಿಎಂ ಗೋವಿಂದ ಕಾರಜೋಳ
author img

By

Published : Jul 13, 2020, 4:11 PM IST

Updated : Jul 13, 2020, 7:46 PM IST

ವಿಜಯಪುರ: ಕೊರೊನಾ ಭೀತಿ ತಗ್ಗಿಸಲು ಪಾಸಿಟಿವ್ ಬಂದ್ ಪ್ರದೇಶದಲ್ಲಿ ಮಾತ್ರ ಸೀಲ್ ಡೌನ್ ಮಾಡಲಾಗುವುದು. ಉಳಿದ ಜಿಲ್ಲೆಗಳನ್ನು ಯಾವುದೇ ಕಾರಣಕ್ಕೂ ಲಾಕ್​​ಡೌನ್ ಮಾಡುವ ವಿಚಾರವಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.

ಜಿಲ್ಲೆಗಳನ್ನು ಲಾಕ್​ಡೌನ್​ ಮಾಡುವ ಕುರಿತು ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯೆ

ವಿಮಾನ ನಿಲ್ದಾಣ ಕಾಮಗಾರಿ ಕುರಿತು ಸ್ಥಳ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಬೆಂಗಳೂರು ಮಾದರಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿಯೂ ಲಾಕ್​​ಡೌನ್ ಮಾಡುವ ಅಭಿಪ್ರಾಯ ಸಾರ್ವಜನಿಕರಿಂದ ಬಂದಿರಬಹುದು. ಆದರೆ ಸರ್ಕಾರದ ಮುಂದೆ ಯಾವುದೇ ಲಾಕ್​​ಡೌನ್ ಪ್ರಸ್ತಾಪವಿಲ್ಲ. ಕೇವಲ ಸೀಲ್ ಡೌನ್ ಕೆಲಸ ಮಾತ್ರ ಮುಂದುವರೆಯಲಿದೆ ಎಂದರು.

ವಿಜಯಪುರದಲ್ಲಿ ಈಗಾಗಲೇ 758 ಪ್ರಕರಣಗಳು ದಾಖಲಾಗಿವೆ. ಆದರೆ ಲಾಕ್​​ಡೌನ್ ಮಾಡುವ ವಿಚಾರವಿಲ್ಲ. ರಾಜ್ಯದಲ್ಲಿ ಅಗತ್ಯವಿರುವ ಜಿಲ್ಲೆಯಲ್ಲಿ ಮಾತ್ರ ಲಾಕ್​​ಡೌನ್ ಮಾಡಲು ಮುಖ್ಯಮಂತ್ರಿಗಳು ಒಲವು ತೋರಿದ್ದಾರೆ ಎಂದು ತಿಳಿಸಿದರು.

Last Updated : Jul 13, 2020, 7:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.