ETV Bharat / state

ಕೊರೊನಾ ಭೀತಿ: ವಿಜಯಪುರದಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್​ಗಳ ಸಂಚಾರ ಸ್ಥಗಿತ

author img

By

Published : Mar 19, 2020, 6:38 PM IST

ಕೊರೊನಾ ಭೀತಿಯಿಂದಾಗಿ ವಿಜಯಪುರದಿಂದ ಮಹಾರಾಷ್ಟ್ರಕ್ಕೆ ಇಂದಿನಿಂದ ಸಂಚರಿಸುವ ಬಸ್​ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಿಸಿ ವೈ.ಎಸ್.ಪಾಟೀಲ‌ ತಿಳಿಸಿದ್ದಾರೆ.

DC Y.S Patil
ವೈ.ಎಸ್ ಪಾಟೀಲ‌

ವಿಜಯಪುರ: ಕೊರೊನಾ ಭೀತಿಯಿಂದಾಗಿ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಹೋಗುವ ಎಲ್ಲಾ ಖಾಸಗಿ ಹಾಗೂ ಸಾರಿಗೆ ಸಂಸ್ಥೆ ಬಸ್​ಗಳ ಸಂಚಾರವನ್ನು ಮಾರ್ಚ್ 31ರವರೆಗೆ ಸ್ಥಗಿತಗೊಳಿಸಿರುವುದಾಗಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ‌ ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿ ಸಭಾಭವನದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕೊರೊನಾ ಶಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಇಂದು ಸಂಜೆಯಿಂದ ಮಹಾರಾಷ್ಟ್ರಕ್ಕೆ ಸಂಚರಿಸುವ ಬಸ್​ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.

ಡಿಸಿ ವೈ.ಎಸ್.ಪಾಟೀಲ‌

ನಿನ್ನೆಯಿಂದ ಇವತ್ತಿನವರೆಗೂ ವಿದೇಶದಲ್ಲಿದ್ದ 11 ಜನರು ಜಿಲ್ಲೆಗೆ ವಾಪಸಾಗಿದ್ದಾರೆ. ಅವರಿಗೆ ಹೋಮ್ ಕ್ವಾರಂಟೈನ್​​​ ಮಾಡುವ ವ್ಯವಸ್ಥೆ ಮಾಡಲಾಗಿದೆ.‌ ಜಿಲ್ಲೆಗೆ ಮರಳಿದ ಒಟ್ಟು 266 ಜನರಲ್ಲಿ 11 ಜನರು ಹೋಮ್ ಕ್ವಾರಂಟೈನ್​​​ ಹಾಗೂ ಅಬ್ಸರ್ವೇಶನ್​ ಮುಗಿಸಿದ್ದು, 85 ಜನರು ರಿಪೋರ್ಟಿಂಗ್ ಪರೇಡ್​​ನಲ್ಲಿದ್ದಾರೆ. 165 ಜನರನ್ನ ಹೋಮ್ ಕ್ವಾರಂಟೈನ್​​​ನಲ್ಲಿ ಇಡಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.