ETV Bharat / state

ವಿಜಯಪುರ ರಸ್ತೆ ಸುಧಾರಣೆಗೆ ಅಧಿಕಾರಿಗಳ ಜತೆ ಡಿಸಿ ಸಭೆ

author img

By

Published : Mar 27, 2021, 6:46 AM IST

ಡಿಯುಎಲ್‍ಟಿ (ಡೈರೆಕ್ಟೋರೇಟ್ ಆಫ್ ಅರ್ಬನ್​ ಲ್ಯಾಂಡ್ ಟ್ರಾನ್ಸ್​​ಪೋರ್ಟ್) ಯೋಜನೆಯಡಿ ಗೋದಾವರಿ ಹೋಟೆಲ್​ನಿಂದ ಸಿಂದಗಿ ನಾಕಾವರೆಗಿನ ಮುಖ್ಯ ರಸ್ತೆ ನಿರ್ಮಿಸುವ ಕುರಿತು ವಿಶೇಷ ಅಧಿಕಾರಿ, ಲೋಕೋಪಯೋಗಿ, ಮಹಾನಗರ ಪಾಲಿಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ವಿಜಯಪುರ ಜಿಲ್ಲಾಧಿಕಾರಿ ಚರ್ಚೆ ನಡೆಸಿದರು.

vijaypur road
ಮುಖ್ಯ ರಸ್ತೆ ಸುಧಾರಣೆ ಕುರಿತು ಜಿಲ್ಲಾಧಿಕಾರಿ ಅಧಿಕಾರಿಗಳೊಂದಿಗೆ ಚರ್ಚೆ

ವಿಜಯಪುರ: ನಗರದ ಗೋದಾವರಿ ಹೋಟೆಲ್​ನಿಂದ ಮಹಿಳಾ ವಿಶ್ವವಿದ್ಯಾಲಯ ಹಾಗೂ ಸಿಂದಗಿ ನಾಕಾವರೆಗಿನ ಮುಖ್ಯ ರಸ್ತೆ ಸುಧಾರಣೆ ಕುರಿತು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿಯುಎಲ್‍ಟಿ (ಡೈರೆಕ್ಟೋರೇಟ್ ಆಫ್ ಅರ್ಬನ್​ ಲ್ಯಾಂಡ್ ಟ್ರಾನ್ಸ್​​ಪೋರ್ಟ್) ಯೋಜನೆಯಡಿ ಗೋದಾವರಿಯಿಂದ ಸಿಂದಗಿ ನಾಕಾವರೆಗಿನ ಮುಖ್ಯ ರಸ್ತೆ ನಿರ್ಮಿಸುವ ಕುರಿತು ವಿಶೇಷ ಅಧಿಕಾರಿ, ಲೋಕೋಪಯೋಗಿ, ಮಹಾನಗರ ಪಾಲಿಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಭಾರತ ಸರ್ಕಾರದ ಡಲ್ಟ್ ಯೋಜನೆಯಡಿ ಈ ರಸ್ತೆ ಸುಧಾರಣೆಗಾಗಿ ಗರಿಷ್ಠ ಪ್ರಮಾಣದ ಅನುದಾನ ಮಂಜೂರಾತಿಗೆ ಪ್ರಯತ್ನಿಸುವಂತೆ ಡಲ್ಟ್ ಯೋಜನೆಯ ವಿಶೇಷ ಅಧಿಕಾರಿಗಳು ಮತ್ತು ಜಂಟಿ ನಿರ್ದೇಶಕಿ ಮೋನಿಕಾ ಕಶ್ಕರಿಗೆ ಜಿಲ್ಲಾಧಿಕಾರಿ ಸಲಹೆ ನೀಡಿದರು.

ಈ ಯೋಜನೆಯಡಿ ಉನ್ನತ ದರ್ಜೆಯ ರಸ್ತೆ ನಿರ್ಮಿಸುವ ಗುರಿಯಿದ್ದು, ಬಸ್​ ಸೇರಿದಂತೆ ಇತರೆ ವಾಹನ ಹಾಗೂ ಬೈಸಿಕಲ್ ಮತ್ತು ಟಾಂಗಾಗಳಿಗೆ ಪ್ರತ್ಯೇಕ ರಸ್ತೆ ರೂಪಿಸುವ ಯೋಜನೆ ಇದೆ. ರಸ್ತೆ ಸುಧಾರಣೆಯ ಯೋಜನೆಯ ಬಗ್ಗೆ ಆರಂಭಿಕ ಚರ್ಚೆ ಇದಾಗಿದೆ ಎಂದರು.

ವಿಜಯಪುರ ನಗರದ ಸಿಂದಗಿ ರಸ್ತೆಯಿಂದ ಗೋಲ್​ಗುಂಬಜ್, ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್, ಗಾಂಧಿಚೌಕ್, ವಾಟರ್ ಟ್ಯಾಂಕ್, ಸರ್ಕಾರಿ ಆಸ್ಪತ್ರೆ ಹಾಗೂ ಅಲ್ ಆಮೀನ್ ಕಾಲೇಜ್‍ವರೆಗೆ ರಸ್ತೆ ಸುಧಾರಣೆ ಬಗ್ಗೆ ಪರಿಶೀಲನೆ ನಡೆಸಿದ್ದು, ಮುಂಬರುವ ದಿನಗಳಲ್ಲಿ ನಗರದಲ್ಲಿ ಬಸ್ ಪ್ರಾಧಾನ್ಯತೆ ಮಾರ್ಗ ಅಳವಡಿಸುವ ಸೇರಿದಂತೆ ಇತರೆ ರಸ್ತೆಗಳ ಯೋಜನೆ ಕುರಿತು ಸಭೆಯಲ್ಲಿ ಮಾತುಕತೆ ನಡೆಸಲಾಯ್ತು.

ನಗರದ ಗೋದಾವರಿಯಿಂದ ಇಟಗಿ ಪೆಟ್ರೋಲ್ ಬಂಕ್‍ವರೆಗೆ ರಸ್ತೆ ನಿರ್ಮಾಣಕ್ಕಾಗಿ ಈಗಾಗಲೇ ಚಾಲನೆ ದೊರೆತಿದ್ದು, ಮಹಿಳಾ ವಿಶ್ವವಿದ್ಯಾಲಯದವರೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣಗೊಳ್ಳುವ ಹಿನ್ನೆಲೆ ಡಲ್ಟ್ ಯೋಜನೆಯಡಿ ಸಿಂದಗಿ ನಾಕಾವರೆಗಿನ ರಸ್ತೆಗೂ ಹೆಚ್ಚಿನ ಪ್ರಾಧಾನ್ಯತೆ ಮತ್ತು ಅನುದಾನ ಒದಗಿಸಲು ಭಾರತ ಸರ್ಕಾರದ ಡಲ್ಟ್ ಯೋಜನೆಯಡಿಯ ವಿಶೇಷ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಲಹೆ ನೀಡಿದರು.

ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರ ಪಾಟೀಲ ಉಪಸ್ಥಿತರಿದ್ದರು.

ಇದನ್ನೂ ಓದಿ:'ದೊಡ್ಡ ಬಾಂಬ್​​ ಸ್ಫೋಟ ಮಾಡುತ್ತೇನೆ'... ಆಡಿಯೋ ವೈರಲ್​ ಬೆನ್ನಲ್ಲೇ ಜಾರಕಿಹೊಳಿ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.