ವಿಜಯಪುರ: ಕೊರೊನಾ ಎಮರ್ಜೆನ್ಸಿ ಹಿನ್ನೆಲೆ ನಿಗಾದಲ್ಲಿಟ್ಟಿದ್ದವರ ಮನೆಗಳಿಗೆ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಸೋಮವಾರ ದುಬೈನಿಂದ ವಾಪಸ್ಸಾಗಿದ್ದ 44 ಜನರ ಮನೆಗಳನ್ನು ನಿಗಾದಲ್ಲಿ ಇರಿಸಲಾಗಿತ್ತು. ಆದರೂ, ಕೆಲ ಜನ ಬೇರೆ ಬೇರೆ ಕಡೆ ಸುತ್ತಾಡಲು ತೆರಳಿದ್ದರು ಎಂಬ ಸುದ್ದಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ನಿನ್ನೆ ರಾತ್ರಿ ಕೊರೊನಾ ಶಂಕಿತ ನಿಗಾದಲ್ಲಿಟ್ಟಿದ್ದವರ ಮನೆಗಳಿಗೆ ಭೇಟಿ ನೀಡಿದ್ದಾರೆ.
ಇದೇ ವೇಳೆ, ಮುಂದಿನ 14 ದಿನ ಮನೆ ಬಿಟ್ಟು ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ವಿದೇಶ ಪ್ರವಾಸದಿಂದ ಮರಳಿದವರಿಗೆ ಕೊರೊನಾ ಗಂಭೀರತೆ ಬಗ್ಗೆ ಜಿಲ್ಲಾಧಿಕಾರಿ ತಿಳಿ ಹೇಳಿದರು.