ETV Bharat / state

ಸೈಕ್ಲಿಂಗ್ ವೆಲೋಡ್ರೋಮ್​ ಕಾಮಗಾರಿ ಕುಂಠಿತ ಆರೋಪ..ನಿರಾಸೆಗೊಂಡ ಸೈಕ್ಲಿಸ್ಟ್​​ಗಳು! - ವಿಜಯಪುರ ಸೈಕ್ಲಿಂಗ್ ವೆಲೋಡ್ರೋಮ್

ರಾಜ್ಯ ಸರ್ಕಾರದ ಕ್ರೀಡಾ ಇಲಾಖೆ ಭೂತನಾಳ ಕೆರೆ ಸಮೀಪದಲ್ಲಿ 8.10ಕೋಟಿ ರೂ. ವೆಚ್ಚದಲ್ಲಿ 2015ರಲ್ಲಿಯೇ ಸೈಕ್ಲಿಂಗ್ ವೆಲೋಡ್ರೋಮ್ (Cycling Velodrome) ನಿರ್ಮಾಣಕ್ಕೆ ಚಾಲನೆ ನೀಡಿತ್ತು. ಆರು ವರ್ಷ ಆದರೂ ಕಾಮಗಾರಿ ಮುಗಿಯದಿರುವುದು ಸೈಕ್ಲಿಸ್ಟ್​​ಗಳ (cyclists) ನಿರಾಸೆಗೆ ಕಾರಣವಾಗಿದೆ.

Cycling Velodrome Works is not completed at vijayapura
ಸೈಕ್ಲಿಂಗ್ ವೆಲೋಡ್ರೋಮ್​ ಕಾಮಗಾರಿ ಕುಂಠಿತ
author img

By

Published : Nov 12, 2021, 10:09 AM IST

ವಿಜಯಪುರ: ಸೈಕ್ಲಿಸ್ಟ್​​ಗಳ ತವರೂರಿನಲ್ಲಿ ನಿರ್ಮಿಸುತ್ತಿರುವ ಸೈಕ್ಲಿಂಗ್ ವೆಲೋಡ್ರೋಮ್(Cycling Velodrome) ಕಾಮಗಾರಿ ಆರು ವರ್ಷ ಆದರೂ ಕಾಮಗಾರಿ ಮುಗಿಯದಿರುವುದು ಸೈಕ್ಲಿಸ್ಟ್​​ಗಳ (cyclists) ನಿರಾಸೆಗೆ ಕಾರಣವಾಗಿದೆ.

ಸೈಕ್ಲಿಂಗ್ ವೆಲೋಡ್ರಮ್ ಕಾಮಗಾರಿ ಕುಂಠಿತ ಆರೋಪ-ಪ್ರತಿಕ್ರಿಯೆ

ರಾಜ್ಯದಲ್ಲಿ ಸೈಕ್ಲಿಂಗ್ ಕ್ರೀಡಾಕೂಟ(Cycling Games)ಕ್ಕೆ ಹೆಸರಾಗಿರುವ ವಿಜಯಪುರ(vijayapura) ಜಿಲ್ಲೆಯಲ್ಲಿ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಿಸಬೇಕು ಎನ್ನುವುದು ಸೈಕ್ಲಿಸ್ಟ್​​ಗಳ ಕನಸು. ಸೈಕ್ಲಿಂಗ್ ಅಭ್ಯಾಸಕ್ಕೆ ರಾಜ್ಯ ಹೆದ್ದಾರಿಯನ್ನು ನಂಬಿಕೊಂಡಿದ್ದ ಸೈಕ್ಲಿಸ್ಟ್​​ಗಳ ಪೈಕಿ ಸಾಕಷ್ಟು ಜನರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಮನಗಂಡು ರಾಜ್ಯ ಸರ್ಕಾರದ ಕ್ರೀಡಾ (sports department)ಇಲಾಖೆ ನಗರದ ಹೊರವಲಯದ ಭೂತನಾಳ ಕೆರೆ ಸಮೀಪದಲ್ಲಿ 8.10ಕೋಟಿ ರೂ. ವೆಚ್ಚದಲ್ಲಿ 2015ರಲ್ಲಿಯೇ ವೆಲೋಡ್ರೋಮ್ ನಿರ್ಮಾಣಕ್ಕೆ ಚಾಲನೆ ನೀಡಿತ್ತು.

ತಾಂತ್ರಿಕ ಕಾರಣ ಹೇಳಿ ಕಾಮಗಾರಿಗೆ ತಡೆ

ಆದರೆ, ತಾಂತ್ರಿಕ ದೋಷದ ನೆಪ ಹೇಳಿ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಕಾಮಗಾರಿಗೆ ನಿಗದಿ ಪಡಿಸಿದ್ದ ಅನುದಾನದಲ್ಲಿ ಅರ್ಧದಷ್ಟು ಹಣ ವೆಚ್ಚ ಮಾಡಿದ್ದರೂ ಸಹ ಕಾಮಗಾರಿ ಮಾತ್ರ ಅರ್ಧ ಸಹ ಪೂರ್ಣಗೊಂಡಿಲ್ಲ.

ಇದನ್ನೂ ಓದಿ: ಕತ್ತೆ ಸಾವು: ಸಾಂಪ್ರದಾಯಿಕವಾಗಿ ಮಣ್ಣು ಮಾಡಿ, ತಿಥಿ ಕಾರ್ಯ ನೆರವೇರಿಸಿದ ಗ್ರಾಮಸ್ಥರು

ಸೈಕ್ಲಿಂಗ್ ವೆಲೋಡ್ರೋಮ್ ಪೂರ್ಣಗೊಳಿಸುವಂತೆ ಸೈಕ್ಲಿಸ್ಟ್​​ಗಳ ಒತ್ತಡದ ಕಾರಣ ತಜ್ಞರ ( ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ) ಸಿಎಫ್​​ಐ ತಂಡ ಎರಡು ಬಾರಿ ಆಗಮಿಸಿ ಪರಿಶೀಲನೆ ನಡೆಸಿದೆ. ಆದರೆ, ಕಾಮಗಾರಿಯಲ್ಲಿ ತಾಂತ್ರಿಕ ದೋಷವಿದೆ ಎಂಬ ಕಾರಣಕ್ಕೆ ಕಾಮಗಾರಿ ಆರಂಭಿಸಲು ಅನುಮತಿ ನೀಡಿಲ್ಲ. ಇದರ ಜತೆ ಜಿಲ್ಲಾಡಳಿತಕ್ಕೆ ಇದರ ವರದಿಯನ್ನು ಸಹ ನೀಡಿಲ್ಲ.

ಸೈಕ್ಲಿಂಗ್ ವೆಲೋಡ್ರೋಮ್ ಈಗಾಗಲೇ ದೇಶದ ಪಟಿಯಾಲಾ, ಹೈದರಾಬಾದ್​ಗಳಲ್ಲಿದೆ. ಅದೇ ರೀತಿ ವಿಜಯಪುರದಲ್ಲಿ ಪೂರ್ಣಗೊಂಡರೆ ಇಲ್ಲಿನ ಸೈಕ್ಲಿಸ್ಟ್​​ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪದಕ ಗಳಿಸಬಹುದು. ಈ ಬಗ್ಗೆ ಜಿಲ್ಲಾಡಳಿತ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.