ವಿಜಯಪುರ: ಕೊರೊನಾ ವೈರಸ್ ಹಾಗೂ ಹಕ್ಕಿ ಜ್ವರದ ಭೀತಿ ಹಿನ್ನೆಲೆ ಸಾವಿರಾರು ಕೋಳಿಗಳ ಮಾರಣ ಹೋಮ ನಡೆದ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಯಕ್ಕುಂಡಿಯಲ್ಲಿ ನಡೆದಿದೆ.
ಗುಡೇಸಾಬ್ ಜಮಾದಾರ ಎಂಬಾತ 2,500ಕ್ಕೂ ಹೆಚ್ಚು ಕೋಳಿಗಳನ್ನು ತನ್ನ ಜಮೀನಿನಲ್ಲಿ ಹಳ್ಳ ತೋಡಿ ಅದರಲ್ಲಿ ಕೋಳಿಗಳನ್ನು ಹೂತಿಟ್ಟು ಮಾರಣಹೋಮ ನಡೆಸಿದ್ದಾನೆ.
ಈ ಮಾರಣ ಹೋಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋಳಿಗಳ ಮಾರಣ ಹೋಮ ಮಾಡಿದ ಗುಡೇಸಾಬ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.