ಮುದ್ದೇಬಿಹಾಳ(ವಿಜಯಪುರ): ಮೊದಲ ಹಂತದ ಗ್ರಾಪಂ ಚುನಾವಣಾ ಮತದಾನ ಪ್ರಕ್ರಿಯೆಯಲ್ಲಿ ಹಲವು ವಿಶೇಷತೆಗಳು ಕಂಡು ಬಂದಿವೆ. ತಾಲೂಕಿನ ಕವಡಿಮಟ್ಟಿ ಗ್ರಾಪಂನಲ್ಲಿ ಪಿಪಿಇ ಕಿಟ್ ಧರಿಸಿಕೊಂಡು ಬಂದು ಕೊರೊನಾ ಸೋಂಕಿತರೊಬ್ಬರು ಮತದಾನ ಮಾಡಿದ್ದಾರೆ.
ಕವಡಿಮಟ್ಟಿ ಗ್ರಾಮದ ಬೂತ್ ಸಂಖ್ಯೆ 47/Aನಲ್ಲಿ ಕವಡಿಮಟ್ಟಿ ಗ್ರಾಮದ ಕೋವಿಡ್-19 ರೋಗಿ ಸಂಖ್ಯೆ 2,561 ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವೋಟ್ ಮಾಡಿದ್ದಾರೆ. ಸಂಜೆ 5 ಗಂಟೆಗೆ ಬಂದು ಮತ ಚಲಾಯಿಸಿದ್ದಾರೆ.
ಷಾಯಿ ಹಚ್ಚಲು ನಡುಗಿದ ಚುನಾವಣಾ ಸಿಬ್ಬಂದಿ:
ಪಿಪಿಇ ಕಿಟ್ ಧರಿಸಿಕೊಂಡು ಮತ ಚಲಾವಣೆಗೆ ಮತಗಟ್ಟೆಗೆ ಆಗಮಿಸಿದಾಗ ಮತಪತ್ರ ತೆಗೆದುಕೊಂಡ ಕೋವಿಡ್ ಸೋಂಕಿತನಿಗೆ ಶಾಯಿ ಹಚ್ಚಲು ಚುನಾವಣಾ ಸಿಬ್ಬಂದಿ ಕೈಗಳು ನಡುಗಿದವು. ಈ ವೇಳೆ ಗರಸಂಗಿ ಪಿಹೆಚ್ಸಿ ವೈದ್ಯಾಧಿಕಾರಿ ಡಾ. ಎಂ.ಎಸ್.ಪಾಟೀಲ ಅವರು ಕೊರೊನಾ ಸೋಂಕಿತನಿಗೆ ಶಾಯಿ ಹಚ್ಚುವ ಮೂಲಕ ನೆರವಿಗೆ ಬಂದರು. ಗರಸಂಗಿ ಪಿಹೆಚ್ಸಿಯ ಎಂಎಲ್ಎಚ್ಪಿ ಅರುಲ್ ಪಾಂಡಿ, ಸಿಎಚ್ಒ ಅರ್ಪಿತಾ ಆರ್., ಆಶಾ ಕಾರ್ಯಕರ್ತೆಯರಾದ ಭಾರತಿ ಮುರಾಳ, ಸವಿತಾ ಹೊಕ್ರಾಣಿ ಇದ್ದರು.
ಇದನ್ನೂ ಓದಿ: ಈ ಬಾರಿಯೂ ಮಾರ್ಚ್ನಲ್ಲಿ ನಡೆಯಲ್ಲ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ
ಕವಡಿಮಟ್ಟಿ ಬೂತ್ ಸಂಖ್ಯೆಯಲ್ಲಿ ಕಮಲಾ ಭೀಮಪ್ಪ ಹೊಕ್ರಾಣಿ ಅವರ ಮತವನ್ನು ಕಮಲಾ ಬೀರಪ್ಪ ಹೊಕ್ರಾಣಿ ಎಂಬುವರು ಚಲಾಯಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮೂಲ ಮತದಾರರಿಗೆ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಯಿತು.