ವಿಜಯಪುರ: ಮಗ ಹಾಗೂ ಮಗಳ ಮದುವೆಯನ್ನು ಒಂದೇ ಬಾರಿಗೆ ನಿಶ್ಚಯಿಸಿದ್ದು, ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಬೈಕ್ನಲ್ಲಿ ಹೋಗುತ್ತಿದ್ದ ದಂಪತಿಗೆ ಸಿಡಿಲು ಬಡಿದು ತೀವ್ರ ಗಾಯಗಳಾದ ಘಟನೆ ವಿಜಯಪುರ ತಾಲೂಕಿನ ಡೋಣಿ ನದಿ ಬಳಿ ಇರುವ ಹಳ್ಳಿ ಕ್ರಾಸ್ ಬಳಿ ಸಂಜೆ ನಡೆದಿದೆ.
ಬೈಕ್ ಮೇಲೆ ವಿಜಯಪುರಕ್ಕೆ ಬರುವಾಗ ಈ ಅವಘಡ ಸಂಭವಿಸಿದೆ. ವಿಜಯಪುರ ನಿವಾಸಿಗಳಾದ ಶರಣಯ್ಯ ಸಂಗಮದ(45) ಹಾಗೂ ಪತ್ಮಿ ಕವಿತಾ ಸಂಗಮದ(40) ಗಾಯಗೊಂಡ ದಂಪತಿ. ಇವರನ್ನು ವಿಜಯಪುರದ ಭಾಗ್ಯವಂತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಹಿಟ್ ಅಂಡ್ ರನ್ ರೀತಿ ನಡೆದುಕೊಳ್ತಿದ್ದಾರೆ: ಸಚಿವ ಹಾಲಪ್ಪ
ಎರಡು ಎತ್ತುಗಳ ಸಾವು: ಭಾರಿ ಮಳೆ ಗಾಳಿಗೆ ಎರಡು ಎತ್ತುಗಳು ಪ್ರತ್ಯೇಕ ಪ್ರಕರಣದಲ್ಲಿ ಸಾವನ್ನಪ್ಪಿವೆ. ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಶರಣಪ್ಪ ಎಂಬುವರಿಗೆ ಸೇರಿದ ಎತ್ತು ಹಾಗೂ ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ರೈತನೊಬ್ಬ ಎತ್ತುಗಳು ಸಿಡಿಲು ಬಡಿದು ಸಾವನ್ನಪ್ಪಿವೆ.