ETV Bharat / state

ವಿಚ್ಛೇದನ ಬಯಸಿದ್ದ ದಂಪತಿಗೆ ಲೋಕ್​ ಅದಾಲತ್​ನಿಂದ ಮರುದಾಂಪತ್ಯ ಭಾಗ್ಯ!!

ಬಸವನಬಾಗೇವಾಡಿ ಪಟ್ಟಣದ ಸಿವಿಲ್ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ಇದೀಗ ಲೋಕ ಅದಾಲತ್​ ಮಧ್ಯಸ್ಥಿಕೆಯಿಂದಾಗಿ ವಿಚ್ಛೇದನ ನಿರ್ಧಾರ ಕೈ ಬಿಟ್ಟು ಮತ್ತೆ ಒಂದಾಗಿದ್ದಾರೆ.

author img

By

Published : Mar 28, 2021, 11:53 AM IST

couple withdraw divorce case in lok adalat
ವಿಚ್ಛೇದನ ಬಯಸಿದ್ದ ದಂಪತಿಗೆ ಮರುದಾಂಪತ್ಯ ಭಾಗ್ಯ

ವಿಜಯಪುರ: ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ಬರೋಬ್ಬರಿ 6 ವರ್ಷದ ನಂತರ 9 ವರ್ಷದ ಮಗಳ ಸಮ್ಮುಖದಲ್ಲಿ ಭಿನ್ನಾಭಿಪ್ರಾಯ ಮರೆತು ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪ್ರಕರಣ ಹಿನ್ನೆಲೆ:

ಬಸವನಬಾಗೇವಾಡಿ ಪಟ್ಟಣದ ಸಿವಿಲ್ ನ್ಯಾಯಾಲಯದಲ್ಲಿ 6 ವರ್ಷಗಳ ಹಿಂದೆ ಯೋಧ ವಿಜಯ ಮಹಾಂತೇಶ ಕುಬಸದ ಹಾಗೂ ಅವರ ಪತ್ನಿ ಸೌಮ್ಯ ಕುಬಸದ ಸಂಸಾರಿಕ ಭಿನ್ನಾಭಿಪ್ರಾಯದಿಂದ ಪರಸ್ಪರ ಒಪ್ಪಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ಹಲವು ವರ್ಷಗಳಿಂದ ನಡೆಯುತ್ತಲೇ ಬಂದಿತ್ತು. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಲವಡಿ ಗ್ರಾಮದ ಯೋಧ ವಿಜಯ ಮಹಾಂತೇಶ ಚನ್ನಬಸಪ್ಪ ಕುಬಸದ ವಿಜಯಪುರ‌ ಜಿಲ್ಲೆಯ ಕೊಲ್ಹಾರದ ಸೌಮ್ಯ ರಾಜಶೇಖರ ರಶ್ಮಿ ಅವರ ವಿವಾಹ 2009ರಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟದಲ್ಲಿ ನೇರವೇರಿತ್ತು. 2015ರಲ್ಲಿ ದಂಪತಿಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಬಸವನ ಬಾಗೇವಾಡಿ ಸಿವಿಲ್ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕಳೆದ 6 ವರ್ಷಗಳಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅಲೆಯುತ್ತಿದ್ದರು. ಇವರಿಗೆ ಹೆಣ್ಣು ಮಗು ಸಹ ಇತ್ತು. ಇವರಿಬ್ಬರ ಮನಸ್ತಾಪ ಆ ಹೆಣ್ಣು ಮಗುವಿನ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು.

ಲೋಕ ಅದಾಲತ್​ನಲ್ಲಿ ಇತ್ಯರ್ಥ:

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ವಿಜಯಮಹಾಂತೇಶ ಹಾಗೂ ಸೌಮ್ಯ ದಂಪತಿಯನ್ನು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಶಿವರಾಜು ಎಚ್.ಎಸ್ ವಿಚಾರಣೆ ನಡೆಸಿದರು. ಇಬ್ಬರ ನಡುವಿನ ಭಿನ್ನಾಭಿಪ್ರಾಯ ಆಲಿಸಿದರು. ನಂತರ ಅವರ 9 ವರ್ಷದ ಹೆಣ್ಣು ಮಗಳ ಭವಿಷ್ಯದ ಬಗ್ಗೆ ತಿಳುವಳಿಕೆ ಹೇಳಿ ಇಬ್ಬರಿಗೂ ವಿಚ್ಛೇದನಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯುವಂತೆ ಮನವೊಲಿಸಿದರು. ನಂತರ ಅವರ ಸಮ್ಮುಖದಲ್ಲಿ ದಂಪತಿ ತನ್ನ ಮಗಳ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಾಯಿಸುವ ಮೂಲಕ ಮರು ದಾಂಪತ್ಯಕ್ಕೆ ಕಾಲಿಟ್ಟರು. ಇವರ ಮರು ದಾಂಪತ್ಯಕ್ಕೆ ನ್ಯಾಯಾಧೀಶರು ಸೇರಿ ವಕೀಲರ ಸಂಘದ ಅಧ್ಯಕ್ಷ ಎನ್.ಎಸ್. ಪಾಟೀಲ, ವಕೀಲರಾದ ಮಲ್ಲಿಕಾರ್ಜುನ ದೇವರಮನಿ, ಎಚ್. ಖಾಸನೀಸ್, ರಾಚಯ್ಯ ಗಣಕುಮಾರಮಠ ಸೇರಿ ಹಲವು ವಕೀಲರು ಸಾಕ್ಷಿಯಾದರು.

3038 ಪ್ರಕರಣ ಇತ್ಯರ್ಥ:

ಲೋಕ ಅದಾಲತ್ ಮೂಲಕ ಸಿವಿಲ್ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ 3038 ಪ್ರಕರಣಗಳನ್ನು ಇತ್ಯರ್ಥ ಗೊಳಿಸಲಾಯಿತು.‌ 713 ಸಿವಿಲ್ ಹಾಗೂ 2325 ಕ್ರಿಮಿನಲ್ ಪ್ರಕರಣಗಳು ಒಂದೇ ದಿನ ಇತ್ಯರ್ಥವಾಗಿದ್ದು, ರಾಜ್ಯದಲ್ಲಿ ದಾಖಲೆಯ ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥವಾಗಿರುವುದಕ್ಕೆ ವಿಜಯಪುರ ಸಾಕ್ಷಿಯಾಯಿತು.

ಇದನ್ನೂ ಓದಿ:ಗದಗ: ಲೋಕ್ ಅದಾಲತ್​ನಲ್ಲಿ ಮತ್ತೆ ಒಂದಾದ ಜೋಡಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.