ETV Bharat / state

ನವಜೀವನಕ್ಕೆ ಕಾಲಿಟ್ಟ ದಂಪತಿ ದುಶ್ಚಟಗಳನ್ನು ತ್ಯಜಿಸಿ ಸಹಬಾಳ್ವೆ ನಡೆಸಿ: ನಿಡಗುಂದಿ ಶ್ರೀ

ವಿಜಯಪುರ ತಾಲೂಕಿನ ಶಿರೋಳ ಗ್ರಾಮದಲ್ಲಿ ದ್ಯಾಮಣ್ಣ ಮುತ್ಯಾ ಹಾಗೂ ಶಿವಮೂರ್ತಿ ಮುತ್ಯಾರವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಿಡಗುಂದಿ ರುದ್ರಮುನಿ ಶ್ರೀಗಳು ಆಶೀರ್ವಚನ ನೀಡಿದರು.

author img

By

Published : Dec 3, 2019, 9:53 AM IST

ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ
ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ವಿಜಯಪುರ: ನಿಕೋಟಿನ್ ಅಂಶವಿರುವ ತಂಬಾಕು ಸೇವನೆ ಆರೋಗ್ಯಕ್ಕೆ ಮಾರಕ. ಈ ಹಿನ್ನಲೆಯಲ್ಲಿ ನವ ಜೀವನಕ್ಕೆ ಕಾಲಿಡುವ ದಂಪತಿಗಳು ಅವುಗಳನ್ನು ತ್ಯಜಿಸಿ ಸಹಬಾಳ್ವೆ ನಡೆಸಬೇಕು ಎಂದು ನಿಡಗುಂದಿ ರುದ್ರಮುನಿ ಶ್ರೀಗಳು ಹೇಳಿದರು.

ತಾಲೂಕಿನ ಶಿರೋಳ ಗ್ರಾಮದಲ್ಲಿ ದ್ಯಾಮಣ್ಣ ಮುತ್ಯಾ ಹಾಗೂ ಶಿವಮೂರ್ತಿ ಮುತ್ಯಾರವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಈ ಕುರಿತು ಮಾತನಾಡಿದರು.

ಇನ್ನು ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಮನುಷ್ಯನಾಗಿ ಹುಟ್ಟಿದ ಮೇಲೆ ದಾನಧರ್ಮ ಗುಣವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದರು.

ದ್ಯಾಮಣ್ಣ ಮುತ್ಯಾ ಆರಾಧಕ ಎನ್.ಸಿ.ಪಾಟೀಲ(ಅಸ್ಕಿ), ಮುತ್ತಣ್ಣ ನಾವದಗಿ, ಗರಂಸಗಿಯ ಷಡಕ್ಷರಯ್ಯ ಹಿರೇಮಠ, ವೇ.ಚನ್ನವೀರಯ್ಯ ಶಿವಯೋಗಿಮಠ, ಬೆಕಿನಾಳದ ಮಹೇಶ ಮುತ್ಯಾ, ಕುಂಟೋಜಿಯ ಬಳ್ಳಾರಿ ಶ್ರೀ, ಅಸ್ಕಿಯ ಅನಂತ ಮುತ್ಯಾ, ಕವಡಿಮಟ್ಟಿ ಗ್ರಾಪಂ ಅಧ್ಯಕ್ಷೆ ಕಮಲಾ ಲಮಾಣಿ, ಜಾತ್ರಾ ಕಮಿಟಿ ಅಧ್ಯಕ್ಷ ಆರ್.ಬಿ.ರಾಜನಾಳ, ಪಿಡಿಓ ಪಿ.ಎಸ್.ಕಸನಕ್ಕಿ, ಸಮಾಜ ಕಲ್ಯಾಣ ಇಲಾಖೆಯ ಎಸ್.ಜಿ.ವಾಲೀಕಾರ, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಅಚನೂರ, ಬಾಗಲಕೋಟ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕ ಅಧೀಕ್ಷಕಿ ಗಿರಿಜಾ ಬಂಡಿ, ಅರವಿಂದ ಯಳಮೇಲಿ, ಯುವ ಕಾಂಗ್ರೆಸ್ ಅಧ್ಯಕ್ಷ ರಫೀಕ ಶಿರೋಳ,ನೀಲಾಬಾಯಿ ಶಿರೋಳಕರ ಉಪಸ್ಥಿತರಿದ್ದರು.

ಅದ್ಧೂರಿ ಪಲ್ಲಕ್ಕಿ ಮೆರವಣಿಗೆ:
ಬೆಳಗ್ಗೆ ಗ್ರಾಮದ ಗಂಗಸ್ಥಳದಿಂದ ದ್ಯಾಮಣ್ಣ ಮುತ್ಯಾ ದೇವಸ್ಥಾನದವರೆಗೆ ಪಲ್ಲಕ್ಕಿಯ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ ಮಾಂಗಲ್ಯ ದಾನ ಮಾಡಿದ ಬಾಗಲಕೋಟೆಯ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕ ಅಧೀಕ್ಷಕಿ ಗಿರಿಜಾ ಬಂಡಿ, ನೀಲಾಬಾಯಿ ಶಿರೋಳಕರ ಅವರನ್ನು ಸಮಿತಿಯ ಪರವಾಗಿ ಸನ್ಮಾನಿಸಲಾಯಿತು. ಇನ್ನು ಎಂಟು ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Intro:ವಿಜಯಪುರ Body:ಮುದ್ದೇಬಿಹಾಳ : ಸಾಮೂಹಿಕ ವಿವಾಹಗಳಲ್ಲಿ ನವಜೀವನಕ್ಕೆ ಕಾಲಿರಿಸುವ ದಂಪತಿಗಳು ದುಶ್ಚಟಗಳನ್ನು ತೃಜಿಸಿ ಸಹಬಾಳ್ವೆಯ ಜೀವನ ಸಾಗಿಸಬೇಕು ಎಂದು ನಿಡಗುಂದಿ ರುದ್ರಮುನಿ ಶ್ರೀಗಳು ಹೇಳಿದರು.
          ತಾಲೂಕಿನ ಶಿರೋಳ ಗ್ರಾಮದಲ್ಲಿ ದ್ಯಾಮಣ್ಣ ಮುತ್ಯಾ ಹಾಗೂ ಶಿವಮೂರ್ತಿ ಮುತ್ಯಾರವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ತಂಬಾಕು ಸೇವನೆಯಿಂದ ಯುವಕರಲ್ಲಿ ಸಂತಾನಫಲದ ಕೊರತೆ ಕಾಡುತ್ತದೆ. ನಿಕೋಟಿನ್ ಅಂಶವಿರುವ ತಂಬಾಕು ಸೇವನೆ ಆರೋಗ್ಯಕ್ಕೆ ಮಾರಕವಾಗಿದ್ದು ಅದನ್ನು ಇಂದಿನಿಂದಲೇ ನವಜೀವನಕ್ಕೆ ಕಾಲಿರಿಸಿರುವ ಪುರುಷರು ತೃಜಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಮನುಷ್ಯನಾಗಿ ಹುಟ್ಟಿದ ಮೇಲೆ ದಾನಧರ್ಮ ಗುಣವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು.ಜೀವನದಲ್ಲಿ ಹೆಚ್ಚು ಗಳಿಸಬೇಕು. ನಾಲ್ಕು ಜನರ ಸತ್ಪಾತ್ರಕ್ಕೆ ಸಲ್ಲುವ ಕಾರ್ಯಗಳಿಗೆ ದಾನ ಮಾಡಬೇಕು ಎಂದರು. ಎಪಿಎಂಸಿ ಅಧ್ಯಕ್ಷ ಗುರು ತಾರನಾಳ, ಪಡೇಕನೂರದ ಮಲ್ಲಿಕಾರ್ಜುನ ಶ್ರೀಗಳು, ದಲಿತ ಮುಖಂಡ ಡಿ.ಬಿ.ಮುದೂರ ಮಾತನಾಡಿದರು.
          ದ್ಯಾಮಣ್ಣ ಮುತ್ಯಾ ಆರಾಧಕ ಎನ್.ಸಿ.ಪಾಟೀಲ(ಅಸ್ಕಿ),ಮುತ್ತಣ್ಣ ನಾವದಗಿ,ಗರಂಸಗಿಯ ಷಡಕ್ಷರಯ್ಯ ಹಿರೇಮಠ,ವೇ.ಚನ್ನವೀರಯ್ಯ ಶಿವಯೋಗಿಮಠ,ಬೆಕಿನಾಳದ ಮಹೇಶ ಮುತ್ಯಾ,ಕುಂಟೋಜಿಯ ಬಳ್ಳಾರಿ ಶ್ರೀ,ಅಸ್ಕಿಯ ಅನಂತ ಮುತ್ಯಾ,ಕವಡಿಮಟ್ಟಿ ಗ್ರಾಪಂ ಅಧ್ಯಕ್ಷೆ ಕಮಲಾ ಲಮಾಣಿ,ಜಾತ್ರಾ ಕಮೀಟಿ ಅಧ್ಯಕ್ಷ ಆರ್.ಬಿ.ರಾಜನಾಳ,ಪಿಡಿಓ ಪಿ.ಎಸ್.ಕಸನಕ್ಕಿ,ಸಮಾಜ ಕಲ್ಯಾಣ ಇಲಾಖೆಯ ಎಸ್.ಜಿ.ವಾಲೀಕಾರ,ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಅಚನೂರ,ಬಾಗಲಕೋಟ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕ ಅಧೀಕ್ಷಕಿ ಗಿರಿಜಾ ಬಂಡಿ,ಅರವಿಂದ ಯಳಮೇಲಿ,ಯುವ ಕಾಂಗ್ರೇಸ್ ಅಧ್ಯಕ್ಷ ರಫೀಕ ಶಿರೋಳ,ನೀಲಾಬಾಯಿ ಶಿರೋಳಕರ ಇದ್ದರು.ಸಂಗಮೇಶ ಶಿವಣಗಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.ರಮೇಶ ಕಂಠಿ ಸ್ವಾಗತಿಸಿದರು.ಕಲಾವಿದ ಗೋಪಾಲ ಹೂಗಾರ ನಿರೂಪಿಸಿದರು.ಒಟ್ಟು ಎಂಟು ಜೋಡಿಗಳು ನವಜೀವನಕ್ಕೆ ಕಾಲಿರಿಸಿದವು.
ಪಲ್ಲಕ್ಕಿ ಅದ್ದೂರಿ ಮೆರವಣಿಗೆ:
ಬೆಳಗ್ಗೆ ಗ್ರಾಮದ ಗಂಗಸ್ಥಳದಿಂದ ದ್ಯಾಮಣ್ಣ ಮುತ್ಯಾ ದೇವಸ್ಥಾನದವರೆಗೆ ಪಲ್ಲಕ್ಕಿಯ ಮೆರವಣಿಗೆ ನಡೆಸಲಾಯಿತು. ಬಳಿಕ ಅಸ್ಕಿಯ ನಂದಪ್ಪಮುತ್ಯಾ ಪಾಟೀಲ ಅವರಿಂದ ಹೇಳಿಕೆಗಳು ನಡೆದವು.ಮಾಂಗಲ್ಯ ದಾನ ಮಾಡಿದ ಬಾಗಲಕೋಟೆಯ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕ ಅಧೀಕ್ಷಕಿ ಗಿರಿಜಾ ಬಂಡಿ , ನೀಲಾಬಾಯಿ ಶಿರೋಳಕರ ಅವರನ್ನು ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.