ವಿಜಯಪುರ : 27 ವರ್ಷದ ಪಿ- 511 ಕೊರೊನಾ ಸೋಂಕು ಧೃಡ ಪಟ್ಟ ಹಿನ್ನೆಲೆ ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸರು ಆತನ ಟ್ರ್ಯಾವೆಲ್ ಹಿಸ್ಟರಿ ಹಿಡಿದು ಮಾಹಿತಿ ಕಲೆಹಾಕುತ್ತಿದ್ದಾರೆ.
ನಗರ ಬಾರಾಕಮಾನ್ ಏರಿಯಾದ ಬಡವಾಣೆಯಲ್ಲಿ ನಿನ್ನೆ 27 ವರ್ಷದ ಯುವಕನಿಗೆ ಕೋವಿಡ್ 19 ವೈರಸ್ ಧೃಡಪಟ್ಟ ಬೆನ್ನಲ್ಲೇ ಇಂದು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಶಿಫಾ ಆಸ್ಪತ್ರೆಯ ಗಲ್ಲಿಯಲ್ಲಿ ಆತ ಯಾರ ಜೊತೆಗೆ ಸಂಪರ್ಕ ಹೊಂದಿದ್ದ, ಆತನಿಗೆ ಸೋಂಕು ಹೇಗೆ ತಗುಲಿತು, ಹಾಗೂ ಎಲ್ಲಿಗೆ ಹೋಗಿ ಬಂದಿದ್ದಾನೆ ಎಂಬುದರ ಕುರಿತು ಇಂದು ಕೂಡಾ ಕೊರೊನಾ ವಾರಿರ್ಯಸ್ ಆತ ವಾಸವಿದ್ದ ಬಡವಾಣೆಯಲ್ಲಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬೆಳಗಿನಿಂದಲೂ ಅಧಿಕಾರಿಗಳು ಪಿ-511 ಕುರಿತಾಗಿ ಮಾಹಿತಿ ಕಲೆ ಹಾಕುತ್ತಿದ್ದು, ಆತನ ಸಂಪರ್ಕದಲ್ಲಿ ಎಷ್ಟು ಜನರು ಇದ್ದರು ಎನ್ನುವ ಕುರಿತು ಅಧಿಕಾರಿಗಳು ಬಾರಾಕಮಾನ್ ಬಡಾವಣೆಯಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.