ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಟ್ಟು 17 ಪಾಸಿಟಿವ್ ಪ್ರಕರಣಗಳು ಇಲ್ಲಿಯವರೆಗೆ ಪತ್ತೆಯಾಗಿದ್ದು, ಇದರಲ್ಲಿ ಪೊಲೀಸ್ ಪೇದೆ ಹಾಗೂ ಅವರ ತಂದೆಯೂ ಸೇರಿದ್ದಾರೆ.
ಇದುವರೆಗೂ ಎರಡು ಕುಟುಂಬಗಳಿಗೆ ಸೀಮಿತವಾಗಿದ್ದ ಪಾಸಿಟಿವ್ ಪ್ರಕರಣ ಮೂರನೇ ಕುಟುಂಬಕ್ಕೂ ಕಾಲಿಟ್ಟಿದೆ. ಮೂರನೇ ಕುಟುಂಬದ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ವಿಜಯಪುರದ ಮೊಟ್ಟ ಮೊದಲ ಕೊರೊನಾ ಸೋಂಕಿತ ವೃದ್ಧೆಯಿಂದ ಮೂರನೇ ಕುಟುಂಬಕ್ಕೆ ಕೊರೊನಾ ಹರಡಿದೆ.
221 ರೋಗಿ ಮೂಲಕ ಮೂರನೇ ಕುಟುಂಬದ ಇಬ್ಬರಿಗೆ ಪಾಸಿಟಿವ್ ದೃಢವಾಗಿದೆ. 221 ರೋಗಿ ಜೊತೆಗೆ ಕಳೆದ ಮಾರ್ಚ್ 26 ರಂದು ಮಹಾರಾಷ್ಟ್ರದ ಇಚಲಕರಂಜಿಗೆ ತೆರಳಿದ್ದರು. ಈ ಮೂಲಕ ಮೂರನೇ ಕುಟುಂಬಕ್ಕೂ ಕೊರೊನಾ ಸುತ್ತಿಕೊಂಡಿದೆ.
ಪೊಲೀಸ್ ಕುಟುಂಬ:
P308 ಎಂಬ 37ವರ್ಷದ ಪೊಲೀಸ್ ಪೇದೆ ಹಾಗೂ P 306 ಪೇದೆಯ ತಂದೆಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಪೊಲೀಸ್ ಪೇದೆಯ ತಂದೆಯೇ ಮಹಾರಾಷ್ಟ್ರದ ಇಚಲಕರಂಜಿಗೆ ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳಿದ್ರು.
P221ನಿಂದ ಮೂರನೇ ಕುಟುಂಬದ ವ್ಯಕ್ತಿಗೆ ಹಾಗೂ ಆತನಿಂದ ಪೊಲೀಸ್ ಪೇದೆಯಾಗಿರುವ ಮಗನಿಗೆ ಬಂದಿದೆ. ಡಿಎಆರ್ ವಿಭಾಗದ ಪೊಲೀಸ್ ಪೇದೆ ಪ್ರಸ್ತುತ ಡಿ ಸಿ ಆರ್ ಇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.