ETV Bharat / state

ಕೊರೊನಾ, ಪ್ರವಾಹದ ಎಫೆಕ್ಟ್​ನಿಂದ ಬೆಳೆಗಾರರಿಗೂ ಹುಳಿಯಾದ ದ್ರಾಕ್ಷಿ

ಈ ವರ್ಷ ಅತಿಯಾದ ಮಳೆ, ಹವಾಮಾನ ವೈಪರೀತ್ಯದಿಂದ ಶೇ. 90ರಷ್ಟು ದ್ರಾಕ್ಷಿ ಬೆಳೆ ವಿವಿಧ ರೋಗಕ್ಕೆ ತುತ್ತಾಗಿದೆ. ಉಳಿದ ದ್ರಾಕ್ಷಿ ಎಲೆ ಚಿಗುರಲಿ ಎಂದು ಕಟಿಂಗ್ ಮಾಡಬೇಕು ಎನ್ನುವ ವೇಳೆ ಪ್ರವಾಹ ಅದನ್ನು ಹಾಳು ಮಾಡಿದೆ.

Corona, Flood Effect Destruction of Grape Crop In Vijayapur district
ಕೊರೊನಾ, ಮಹಾ ಪ್ರವಾಹದ ಎಫೆಕ್ಟ್​ನಿಂದ ಬೆಳೆಗಾರರಿಗೂ ಹುಳಿಯಾದ ದ್ರಾಕ್ಷಿ
author img

By

Published : Oct 27, 2020, 8:54 AM IST

ವಿಜಯಪುರ: ರಾಜ್ಯದಲ್ಲಿಯೇ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆ ವಿಜಯಪುರ. ಈ ವರ್ಷ ಅತಿಯಾದ ಮಳೆ, ಹವಾಮಾನ ವೈಪರೀತ್ಯದಿಂದ ಶೇ. 90ರಷ್ಟು ದ್ರಾಕ್ಷಿ ಬೆಳೆ ವಿವಿಧ ರೋಗಕ್ಕೆ ತುತ್ತಾಗಿದೆ. ಉಳಿದ ದ್ರಾಕ್ಷಿ ಎಲೆ ಚಿಗುರಲಿ ಎಂದು ಕಟಿಂಗ್ ಮಾಡಬೇಕು ಎನ್ನುವ ವೇಳೆ ಪ್ರವಾಹ ಅದನ್ನು ಹಾಳು ಮಾಡಿದೆ. ಪ್ರತಿ ವರ್ಷ ವಿದೇಶಕ್ಕೆ ರಫ್ತು ಆಗುತ್ತಿದ್ದ ದ್ರಾಕ್ಷಿ ಈ ಬಾರಿ ಬೆಳೆಗಾರರಿಗೂ ಹುಳಿಯಾಗಿದೆ.

ಕೊರೊನಾ, ಪ್ರವಾಹದ ಎಫೆಕ್ಟ್​ನಿಂದ ಬೆಳೆಗಾರರಿಗೂ ಹುಳಿಯಾದ ದ್ರಾಕ್ಷಿ

ಜಿಲ್ಲೆ ಬರದ ನಾಡು ಆಗಿದ್ದರೂ ಸಹ ತೋಟಗಾರಿಕೆ ಬೆಳೆಯಲ್ಲಿ ತನ್ನದೇ ವೈಶಿಷ್ಟ್ಯ ಕಾಪಾಡಿಕೊಂಡು ಬಂದಿದೆ. ಲಿಂಬೆ, ಸೀತಾಫಲ, ದಾಳಿಂಬೆ, ದ್ರಾಕ್ಷಿ ಸೇರಿದಂತೆ ಅನೇಕ ತೋಟಗಾರಿಕೆ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 14,500 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿತ್ತು. ಹಲವು ನೀರಾವರಿ ಯೋಜನೆ ಯಶಸ್ವಿಯಾದ ಕಾರಣ ದ್ರಾಕ್ಷಿ ಬೆಳೆಗಾರರಿಗೆ ಹುಮ್ಮಸ್ಸು ಮೂಡಿತ್ತು. ಆದರೆ ಕಟಿಂಗ್ ಮಾಡಿ ಎಲೆ ಸಂರಕ್ಷಿಸುವ ವೇಳೆ ವಿಪರೀತ ಮಂಜು ಕವಿದ ವಾತವರಣ, ಹವಾಮಾನ ವೈಪರೀತ್ಯ ಹಾಗೂ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ದ್ರಾಕ್ಷಿ ಎಲೆಗಳಿಗೆ ಹಳದಿ ರೋಗ, ಬಾಡು ರೋಗ ತಗುಲಿ ಚಿಗುರಬೇಕಾಗಿದ್ದ ಎಲೆ ಬಾಡಿ ಉದುರುತ್ತಿದೆ.

ಮುಖ್ಯವಾಗಿ ದ್ರಾಕ್ಷಿ ಬೆಳೆಗೆ ವಿವಿಧ ರೋಗ ತಗುಲಿದಾಗ ಅದಕ್ಕೆ ತಕ್ಷಣ ಔಷಧಿ ಸಿಂಪಡಿಸಬೇಕಾಗಿತ್ತು. ಮೊದಲ ಕಟಿಂಗ್ ಬಂದಾಗ ಕೊರೊನಾ ವ್ಯಾಪಕವಾಗಿ ಹರಡಿರುವ ಕಾರಣ ಔಷಧಿ ದೊರೆಯಲಿಲ್ಲ. ಹಾಗಾಗಿ ದ್ರಾಕ್ಷಿಗೆ ಸರಿಯಾದ ವೇಳೆ ಔಷಧಿ ಸಿಂಪಡಿಸದ ಕಾರಣ ಎಲೆ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿ ಎಲೆ ಉದುರಿ ದ್ರಾಕ್ಷಿ ಬೆಳೆ ಸಂಪೂರ್ಣ ಕೈ ಕೊಟ್ಟಿದೆ.

ತಡವಾಗಿ ದ್ರಾಕ್ಷಿ ಬೆಳೆದಿದ್ದ ಬೆಳೆಗಾರರು ಅಲ್ಪಸ್ವಲ್ಪ ದ್ರಾಕ್ಷಿ ಬೆಳೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಪ್ರವಾಹದಿಂದ ಇದ್ದ ದ್ರಾಕ್ಷಿ ಬೆಳೆಯು ಸಹ ಕೊಚ್ಚಿಕೊಂಡು ಹೋಗಿದೆ. ದ್ರಾಕ್ಷಿ ಬೆಳೆಯುವ ಪ್ರತಿ ಬೆಳೆಗಾರರು ವಿಮೆ ಮಾಡಿಸಿಕೊಂಡಿರುತ್ತಾರೆ. ಜಿಲ್ಲೆಯಲ್ಲಿ 3,500 ಬೆಳೆಗಾರರು ವಿಮೆ ಮಾಡಿಸಿದ್ದು, ಪರಿಹಾರದ ಹಣ ನೀಡುವಂತೆ ಮನವಿ ಮಾಡಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.