ETV Bharat / state

ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರ: ಗೋವು ಸಾಕಿದ್ದೀರಾ? ಸೆಗಣಿ, ಉಚ್ಚೆ ತೆಗೆದಿದ್ದಾರಾ? ಸ್ವಾಮೀಜಿಗಳಿಗೆ ಪಾಟೀಲ್ ಗಣಿಹಾರ್ ಪ್ರಶ್ನೆ

ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಕೆಂದ ಸ್ವಾಮೀಜಿಗಳ ಕುರಿತು ಕೆಪಿಸಿಸಿ ವಕ್ತಾರ ಎಸ್ ಎಂ ಪಾಟೀಲ್ ಗಣಿಹಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪಾಟೀಲ್ ಗಣಿಹಾರ್ ಪ್ರಶ್ನೆ
ಪಾಟೀಲ್ ಗಣಿಹಾರ್ ಪ್ರಶ್ನೆ
author img

By

Published : Jul 18, 2023, 11:43 AM IST

ಕೆಪಿಸಿಸಿ ವಕ್ತಾರ ಎಸ್ ಎಂ ಪಾಟೀಲ್ ಗಣಿಹಾರ್ ಹೇಳಿಕೆ ನೀಡುತ್ತಿರುವುದು

ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದು ಹಲವು ನಿಯಮಗಳನ್ನು ಘೋಷಿಸಿದೆ. ಅದರಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವುದರ ಕುರಿತಂತೆ ರಾಜ್ಯದೆಲ್ಲಡೆ ಪರ-ವಿರೋಧ ಚರ್ಚೆ ನಡೆಯುತ್ತಲೇ ಇದೆ. ಇದೀಗ ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ನಿರ್ಧಾರದ ಕುರಿತು ಸ್ವಾಮೀಜಿಗಳು ಸಭೆ ನಡೆಸಿದ್ದು, ಈ ಸಭೆಯ ವಿಚಾರವಾಗಿ ಕೆಪಿಸಿಸಿ ವಕ್ತಾರ ಎಸ್ ಎಂ ಪಾಟೀಲ್ ಗಣಿಹಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಟಿ ನಡೆಸಿದ ಗಣಿಹಾರ್ ಒಬ್ಬ ಸ್ವಾಮೀಜಿಗಳಾದರೂ ಗೋವು ಸಾಕಿದ್ದೀರಾ? ಸೆಗಣಿ, ಉಚ್ಚೆ(ಮೂತ್ರ) ತೆಗೆದಿದ್ದಾರಾ? ಅಂತ ಪ್ರಶ್ನಿಸುವ ಮೂಲಕ ವಿವಾದ ಮೈಮೇಲೆ ಕಳೆದುಕೊಂಡಿದ್ದಾರೆ. 20 ಸ್ವಾಮೀಜಿಗಳು ವಿಶ್ವ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದವರನ್ನು ಅಕ್ಕಪಕ್ಕ ಕೂರಿಸಿಕೊಂಡು ಸಭೆ ಮಾಡಿದರು.

ಆರ್ ಎಸ್ ಎಸ್​, ಬಿಜೆಪಿಯ ಪುಂಗಿ ಬಾರಿಸಲಿಕ್ಕೆ ಸ್ವಾಮೀಜಿಗಳು ಕುಳಿತುಕೊಂಡಿದ್ದಾರೆ‌. ಭಾರತ ದೇಶದಲ್ಲಿ ಖಾವಿ ತೊಟ್ಟವರ ಬಗ್ಗೆ ಇರುವ ಪವಿತ್ರ ಭಾವನೆ ಯಾರಿಗೂ ಇಲ್ಲ. ಆದರೆ ಖಾವಿ ತೊಟ್ಟುಕೊಂಡು ಸ್ವಾಮೀಜಿಗಳು ರಾಜಕಾರಣ ಮಾಡುತ್ತಿದ್ದಾರೆ. ಅರಿಷಡ್ವರ್ಗಗಳ ಬಿಟ್ಟವ ಸನ್ಯಾಸಿ ಆಗುತ್ತಾರೆ, ಆಗ ಅವರಿಗೆ ಖಾವಿ ಪಟ್ಟ ಬರುತ್ತದೆ. ಅದನ್ನು ಹಾಕಿಕೊಳ್ಳಲು ಶಕ್ತಿ ಬರುತ್ತದೆ. ಆದರೆ ಎಲ್ಲಾ ಕಲ್ಮಶ, ವಿಷದ ಭಾವನೆ ಇಟ್ಟುಕೊಂಡು ನೀವು ಸನ್ಯಾಸಿ ಆಗುತ್ತೀರಾ ಎಂದು ಎಸ್ ಎಂ ಪಾಟೀಲ್ ಗಣಿಹಾರ ಸ್ವಾಮೀಜಿಗಳ ವಿರುದ್ಧ ಹರಿಹಾಯ್ದಿದ್ದಾರೆ.

ಮುಂದುವರೆದು, ಎಷ್ಟು ಗೋ ಶಾಲೆಗಳನ್ನು ಬಿಜೆಪಿಯವರು ನಡೆಸುತ್ತಿದ್ದಾರೆ?, ಎಷ್ಟು ಗೋವುಗಳಿದ್ದಾವೆ? ಆ ಗೋವುಗಳು ಸತ್ತ ಬಳಿಕ ಅವುಗಳ ಅಂತ್ಯಕ್ರಿಯೆ ಯಾವ ತರ ಮಾಡುತ್ತಾರೆ?, ಗೋ ಶಾಲೆಗಳ ಉದ್ದೇಶ ಈಡೇರಿದೆಯಾ?, ಅವುಗಳಿಗೆ ಆಹಾರ ಸರಿಯಾಗಿ ನೀಡಿದ್ದಾರಾ?, ಲಕ್ಷ ಲಕ್ಷ ಗೋವುಗಳು ಆಹಾರವಿಲ್ಲದೇ ಸಾವನ್ನಪ್ಪಿದ್ದಾವೆ. ಬಿಜಾಪುರದಲ್ಲೇ ಅಲ್ಲಿ ಇಲ್ಲಿ ಗೋವುಗಳು ಬಿದ್ದಿರುತ್ತವೆ. ಅವುಗಳು ಕೂಡ ಗೋಮಾತೆಯೇ.

ವಾಸ್ತವವಾಗಿ ಮುಸ್ಲಿಂರು ಅವುಗಳನ್ನು ಮುಟ್ಟಿದ ಕೂಡಲೇ ಅದು ಗೋ ಮಾತೆ ಆಗಿ ಬಿಡುತ್ತದೆ. ಇಲ್ಲವಾದರೆ ಅವುಗಳೆಲ್ಲ ಬಿಡಾಡಿ ದನಗಾಳಿಗಿಯೇ ಇರುತ್ತವೆ. ಅದನ್ನು ನಗರ ಕಮಿಷನರ್​ಗಳು ಕೂಡ ಬಿಡಾಳಿ ದನಗಳೆಂದೇ ಕರೆಯುತ್ತಾರೆ. ಪ್ರಕಟಣೆಗಳಲ್ಲಿಯೂ ಹಾಕುತ್ತಾರೆ ಬಿಡಾಳಿ ದನಗಳನ್ನು ಬಿಡಬೇಡಿ ಎಂದು. ಯಾಕೆ ಬಿಡಾಳಿ ದನಗಳೆಂದು ಹೆಸರಿಡುತ್ತೀರಿ. ಗೋಮಾತೆ ಎಂದು ಕರೆಯಿರಿ. ದನಗಳು ಸತ್ತಾಗ ಅದನ್ನು ಮಣ್ಣು ಮಾಡಲು ದಲಿತರು ಬೇಕು. ಸ್ವಂತ ತಾಯಿಗೆ ಹೇಗೆ ಅಂತ್ಯಸಂಸ್ಕಾರ ಮಾಡುತ್ತೀರಿ. ಅದೇ ರೀತಿಯಲ್ಲಿ ಗೋವುಗಳಿಗೂ ಮಾಡಿ. ಅವುಗಳಿಗಾಗಿ ಎಷ್ಟು ಆಹಾರ ಒದಗಿಸಿದ್ದೀರಿ?, ಎಷ್ಟು ಗೋವುಗಳನ್ನು ಸಾಕಿದ್ದೀರಿ. ಅದನ್ನು ಹೇಳಿ. ಬದಲಾಗಿ ಪೋಟೋದಲ್ಲಿ ಗೋ ಮಾತ ಅನ್ನುವುದಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ:ಗೋ ಹತ್ಯೆ ನಿಷೇಧ ಕಾಯ್ದೆ ವಿಷಯ ರೈತರಿಗೆ ಬಿಟ್ಟುಬಿಡಿ: ಕೋಡಿಹಳ್ಳಿ ಚಂದ್ರಶೇಖರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.