ETV Bharat / state

ಬಾಣಂತಿ ಸಾವಿಗೆ ಕಾರಣರಾದ ವೈದ್ಯೆ, ನರ್ಸ್‌ಗೆ 15 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕ ಆಯೋಗ - ಹೆರಿಗೆ ಬಳಿಕ ನಿರ್ಲಕ್ಷ್ಯ

ಬಾಣಂತಿ ಸಾವಿಗೆ ಕಾರಣರಾದ ವೈದ್ಯೆ ಮತ್ತು ನರ್ಸ್​ಗೆ ಗ್ರಾಹಕ ಆಯೋಗ 15 ಲಕ್ಷ ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಗ್ರಾಹಕ ಆಯೋಗ
ಗ್ರಾಹಕ ಆಯೋಗ
author img

By

Published : Aug 24, 2022, 10:02 PM IST

ವಿಜಯಪುರ: ಹೆರಿಗೆ ಬಳಿಕ ನಿರ್ಲಕ್ಷ್ಯ ವಹಿಸಿ ಬಾಣಂತಿ ಸಾವಿಗೆ ಕಾರಣರಾದ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಗ್ರಾಹಕ ಆಯೋಗವು 15 ಲಕ್ಷ ರೂ. ದಂಡ ವಿಧಿಸಿತು. ಜಿಲ್ಲೆಯ ತಿಕೋಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ಮೆಡಿಕಲ್ ಆಸ್ಪತ್ರೆ ಡಾ.ನಂದಿನಿ ಬನ್ನೂರ, ಜ್ಯೋತಿ ಹೊಸಮನಿ ಹಾಗೂ ಸುನೀತಾ ಬಾವಿಮನಿ ಇವರಿಗೆ ದಂಡ ಹಾಕಲಾಗಿದೆ. ಈ ಪೈಕಿ ಡಾ. ನಂದಿನಿ ಅವರಿಗೆ 11 ಲಕ್ಷ ರೂ. ದಂಡ ತೆರಬೇಕಿದೆ.

ಘಟನೆಯ ಹಿನ್ನೆಲೆ: ಗರ್ಭಿಣಿಯಾಗಿದ್ದ ಜಯಶ್ರೀ 2018 ಜೂ. 3ರಂದು ಹೆರಿಗೆಗಾಗಿ ತಿಕೋಟಾ ಪ್ರಾಥಮಿಕ‌ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ನರ್ಸ್ ರೇಣುಕಾ ಬನ್ನೂರ ತಾವೇ ದಾಖಲು‌ ಮಾಡಿಕೊಂಡಿದ್ದರು. ಬಹಳ ಹೊತ್ತು ವೈದ್ಯರು ಬಾರದ ಕಾರಣ ಸಿಬ್ಬಂದಿ ಜ್ಯೋತಿ ಹೊಸಮನಿ ಹಾಗೂ ಸುನೀತಾ ಭಾವಿಮನಿ ಅವರೇ ಹೆರಿಗೆ ಮಾಡಿಸಿದ್ದರು.

ಜಯಶ್ರೀ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಗರ್ಭಕೋಶ ಹೊರಬಂದಿತ್ತು. ಬೇರೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇಲೆ ವಿಜಯಪುರದ ಬಿಎಲ್​ಡಿಇ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಜಯಶ್ರೀ ಮೃತಪಟ್ಟಿದ್ದರು.‌ ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದರು.

ಈ ಪ್ರಕರಣ ಸಂಬಂಧ 2019ರಲ್ಲಿ ಅಥಣಿ ತಾಲೂಕಿನ ಹಣಮಾಪುರದ ಸುರೇಶ ಮಜ್ಜಗಿ ಹಾಗೂ ಅವರ ಮಗಳು ಸುಮೀತಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಆಯೋಗ ನಾಲ್ವರ ವಿರುದ್ಧ ನೋಟಿಸ್ ಜಾರಿಗೊಳಿಸಿತ್ತು. ಇದಕ್ಕೆ ಉತ್ತರ ನೀಡದ ಹಿನ್ನೆಲೆಯಲ್ಲಿ 15 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದರಲ್ಲಿ ಡಾ. ನಂದಿನಿ ಅವರೇ 11 ಲಕ್ಷ ರೂ ಭರಿಸಬೇಕಾಗಿದೆ. ಇನ್ನುಳಿದ ನಾಲ್ವರು 4 ಲಕ್ಷ ರೂ. ಭರಿಸಬೇಕು. ದೂರು ದಾಖಲಾದ ದಿನದಿಂದ ಶೇ. 9 ರಷ್ಟು ಬಡ್ಡಿ ಸಹ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯ ಆರೋಪ - ತಾಯಿ ಸಾವು, ಅನಾಥವಾದ ನವಜಾತ ಶಿಶು!

ರೇಣುಕಾ ಬನ್ನೂರ, ಜ್ಯೋತಿ ಹೊಸಮನಿ, ಸುನೀತಾ ಬಾವಿಮನಿ ಒಟ್ಟಿಗೆ ಇಲ್ಲವೇ ಪ್ರತ್ಯೇಕ ಮಾಸಿಕ 25 ಸಾವಿರ ರೂ. ಹಾಗೂ ದೂರಿನ ಖರ್ಚಾಗಿ 10 ಸಾವಿರ ರೂ. ಪಾವತಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ ಆಯೋಗದ ಅಧ್ಯಕ್ಷರಾದ ಅಂಬಾದಾಸ ಕುಲಕರ್ಣಿ, ಸದಸ್ಯೆ ವಿ.ಬಿ‌.ಮುತಾಲಿಕ ದೇಸಾಯಿ ಹಾಗೂ ಕಮಲಕಿಶೋರ ಜೋಶಿ ಒಳಗೊಂಡ ಆಯೋಗ ಈ ಆದೇಶ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.