ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾ ಶಂಕರ್‌ರನ್ನು ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಡಿಎಸ್ಎಸ್ ಸಂಘಟನೆಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸಂವಿಧಾನವನ್ನು ಅಂಬೇಡ್ಕರ್ ಅವರು ಒಬ್ಬರೆ ರಚಿಸಿಲ್ಲ, ವಿವಿಧ ಜಾತಿ, ಧರ್ಮ, ಮತ, ಬುಡಕಟ್ಟಿಗೆ ಸೇರಿದಂತ ಅನೇಕ ಪುರುಷ ಮತ್ತು ಮಹಿಳೆಯರು ಸೇರಿ ರಚಿಸಿದ್ದಾರೆ. ಇದು ಸಾಮೂಹಿಕ ಪ್ರಯತ್ನದ ಫಲವಾಗಿದೆ ಎಂದು ಕೈಪಿಡಿ ಮುದ್ರಿಸಿ ಬಿಡುಗಡೆಗೊಳಿಸಿರುವ ಉಮಾಶಂಕರ್ ವಿರುದ್ಧ ಡಿಎಸ್‌ಎಸ್ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರಿಗೆ ಪಾದಯಾತ್ರೆ ಕೈಗೊಂಡ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಗಾಂಧಿ ವೃತ್ತದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಉಮಾ ಶಂಕರ ಪ್ರತಿಕೃತಿ ದಹನ ಮಾಡಿದರು.