ವಿಜಯಪುರ: ಗಣೇಶ ಹಬ್ಬಕ್ಕೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ಮಾಡಿ ಬಸನಗೌಡ ಪಾಟೀಲ ಯತ್ನಾಳ್ಗೆ ತಿಳಿಸಿದ್ದಾರೆ. ಈ ಕುರಿತು ಯತ್ನಾಳ್ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಸಿಎಂ ಬೊಮ್ಮಾಯಿ ನನಗೆ ಕರೆ ಮಾಡಿ, ಗಜಾನನ ಉತ್ಸವಕ್ಕೆ ಹೇರಲಾದ ನಿರ್ಬಂಧಗಳನ್ನು ಸಡಿಲಿಸಿ ನೇರವಾಗಿ ಆಯಾಯ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದೇವೆ. ಯಾವುದೇ ಕಾರಣಕ್ಕೂ ಉತ್ಸವಕ್ಕೆ ತಡೆಯಾಗದಂತೆ ಶೀಘ್ರ ಸೂಚನೆ ನೀಡಲಾಗುವುದು. ನಿಮ್ಮ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ನನಗೆ ತಿಳಿಸಿದರು.
ಕರೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳು ಎಂದು ಶಾಸಕ ಯತ್ನಾಳ್ ಫೇಸ್ಬುಕ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ನಿಯಮಗಳನ್ನು ಸ್ವಲ್ಪ ಸಡಿಲಿಕೆ ಮಾಡಿ ಹಬ್ಬಕ್ಕೆ ಅವಕಾಶ: ಅಶ್ವತ್ಥ ನಾರಾಯಣ