ETV Bharat / state

ವಿಜಯಪುರದಲ್ಲಿ 6 ಕೋಟಿ ವೆಚ್ಚದ ಹಾಕಿ ಮೈದಾನ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

author img

By

Published : Sep 30, 2022, 9:36 PM IST

ಈ ಹಿಂದೆ ಕಾಂಗ್ರೆಸ್ ಭಾರತ ತೋಡೋ ಮಾಡಿದೆ. ಎರಡು ದೇಶಗಳನ್ನ ಬೇರ್ಪಡಿಸಿ ಭಾರತ ತೋಡೋ ಮಾಡಿದೆ. ಈಗ ಕಾಂಗ್ರೆಸ್ ಜೋಡೋ ಯಾತ್ರೆ ಮಾಡ್ತಿರೋದು ವಿಪರ್ಯಾಸ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

6 ಕೋಟಿ ವೆಚ್ಚದ ಹಾಕಿ ಮೈದಾನ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ವಿಜಯಪುರ: ನಗರದ‌ ಸೈನಿಕ್ ಶಾಲಾ ಆವರಣದಲ್ಲಿ 6 ಕೋಟಿ ವೆಚ್ಚದಲ್ಲಿ ನಿರ್ಮಿಸ‌ಲಾದ ಹಾಕಿ ಮೈದಾನದಲ್ಲಿ ಗೋಲ್​ ಮಾಡುವ ಮೂಲಕ ನೂತನ ಮೈದಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಿ‌ದರು.

ಇದೇ ವೇಳೆ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ, ದಿವಂಗತ ಉಮೇಶ್ ಕತ್ತಿ ಅವರನ್ನು ನೆನೆದು ಅವರು ಕಂಡ ಕನಸುಗಳನ್ನು‌ ನನಸು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು. ಇದೇ ವೇಳೆ ಪಿಎಫ್ಐ ಐದು ವರ್ಷ ಬ್ಯಾನ್ ವಿಚಾರವಾಗಿ ಸಿಎಂ ಮಾತನಾಡಿದರು. ಇಬ್ರಾಹಿಂ ಹೇಳಿಕೆಗೆ ಟಾಂಗ್ ನೀಡಿ ಇಬ್ರಾಹಿಂ ಬರೀ ಮದುವೆ ಮಾಡೋದು, ಡೈವರ್ಸ್ ಮಾಡಿಸೋದ್ರಲ್ಲೆ ಎಕ್ಸ್​ಪರ್ಟ್​. ಇದು ಗಂಭೀರ ವಿಚಾರ. ಈ ಐದು ವರ್ಷ ಗಮನಿಸಿ ಕೇಂದ್ರ ಕ್ರಮ ಜರುಗಿಸಲಿದೆ ಎಂದರು.

ಕಾಂಗ್ರೆಸ್ ತಮ್ಮ ಶಾಸಕನ ಮೇಲೆ ಕೊಲೆಗೆ ಯತ್ನಿಸಿದ ಸಂಘಟನೆಯ ಕೇಸ್​ಗಳನ್ನೇ ವಾಪಸ್ ತೆಗೆದುಕೊಂಡಿದೆ. ಇದಕ್ಕಿಂತ ಹೆಚ್ಚಿನ ತುಷ್ಟೀಕರಣ ರಾಜಕಾರಣ ಬೇರೆ ಇಲ್ಲ. ತುಷ್ಟೀಕರಣ ರಾಜಕಾರಣದಿಂದ ಪಿಎಫ್ಐ ಹುಟ್ಟು ಹಾಕಿವೆ. ಇಂಥ ಸಂಘಟನೆಗಳ ದಮನ ಮಾಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು
ಸಿಎಂ ಬಸವರಾಜ ಬೊಮ್ಮಾಯಿ

ಭಾರತ್​ ಜೊಡೋ ಯಾತ್ರೆಯ ಬಗ್ಗೆ ಮಾತನಾಡುತ್ತಾ, ಹಿಂದೆ ಕಾಂಗ್ರೆಸ್ ಭಾರತ ತೋಡೋ ಮಾಡಿದೆ. ಎರಡು ದೇಶಗಳನ್ನ ಬೇರ್ಪಡಿಸಿ ಭಾರತ ತೋಡೋ ಮಾಡಿದೆ. ಈಗ ಕಾಂಗ್ರೆಸ್ ಜೋಡೋ ಯಾತ್ರೆ ಮಾಡ್ತಿರೋದು ವಿಪರ್ಯಾಸ. ಸಮಾಜದಲ್ಲಿ ಕಾಂಗ್ರೆಸ್ ಕ್ಷೋಭೆ ಉಂಟು ಮಾಡಿದೆ. ಭಾರತ ಒಡೆದ ಗಾಯದ ಬರೆಯನ್ನು ಯಾರೂ ಮರೆತಿಲ್ಲ. ಅವರೀಗ ಭಾರತ ಜೋಡೋ ಯಾತ್ರೆ ಮಾಡ್ತಿದ್ದಾರೆ. ರಾಜಕಾರಣಕ್ಕಾಗಿ, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಭಾರತ ಜೋಡೋ ಯಾತ್ರೆ ಎಂದು ವಾಗ್ದಾಳಿ ನಡೆಸಿದರು.

ಹೆಚ್ಚಿನ ಅನುದಾನಕ್ಕೆ ಮನವಿ: ಬಳಿಕ ನಗರದ ಸಿಂದಗಿ ಬೈಪಾಸ್ ಬಳಿ ಇರುವ ಸಿದ್ದೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಸಿಎಂ ಬೊಮ್ಮಾಯಿ ಉದ್ಘಾಟಿಸಿದರು. ಬಳಿಕ ವೇದಿಕೆ ಮೇಲೆ ವರ್ಚುವಲ್ ಮೂಲಕ ಪಾಲಿಕೆಯ ನೂತನ ಕಟ್ಟಡ, ಗಾಂಧಿ ಭವನ, ಇತರೆ ಸರ್ಕಾರಿ ಕಚೇರಿಗಳನ್ನು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯತ್ನಾಳ್​, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿ, ನಗರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದರು.

ಆಸ್ಪತ್ರೆ ಲಾಭಕ್ಕಾಗಿ ಅಲ್ಲ ಬಡವರ ಸೇವೆಗೆ: ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಲು ಒತ್ತಾಯ ಮಾಡುತ್ತಾ ಸಿದ್ದೇಶ್ವರ ಸ್ವಾಮೀಜಿ ದೈವಿ ಪುರುಷರು. ಕಿಸೆ ಇಲ್ಲದ ಅಂಗಿ ತೊಟ್ಟ ಸ್ವಾಮೀಜಿ ಇರೋದು ನಮ್ಮ ಸುದೈವ. ಇನ್ನೂ ಸ್ವಾಮೀಜಿ ಅವರ ಹೆಸರಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದ್ದು ನಮ್ಮ ಸೌಭಾಗ್ಯ. ಆಸ್ಪತ್ರೆ ಲಾಭಕ್ಕಾಗಿ ಅಲ್ಲ ಬಡವರ ಸೇವೆಗೆ ಎಂದು ಹೇಳಿದರು.

ಈ ಹಿಂದೆ ಅನಂತ್​ ಕುಮಾರ್​ ಹಿಂದೆ ನಾವು ಇರುತ್ತಿದ್ದೆವು. ಈಗ ಪ್ರಹ್ಲಾದ್ ಜೋಷಿ ಅವರ ಹಿಂದೆ ಇರುತ್ತೇವೆ ಎಂದು ಹೇಳಿಕೆ ನೀಡುವ ಮೂಲಕ‌ ಪ್ರಹ್ಲಾದ್​ ಜೋಶಿ ಅವರ ಬೆಂಬಲ ನನಗೆ ಬೇಕು ಎಂದು ಪರೋಕ್ಷವಾಗಿ ಯತ್ನಾಳ ಹೇಳಿದರು.

ವೈಮನಸ್ಸು ಎದ್ದು ಕಾಣುತ್ತಿದೆ: ಸಿಎಂ ವಿಜಯಪುರ ಜಿಲ್ಲಾ ಪ್ರವಾಸ ಈ ಹಿಂದೆಯೇ ನಿಶ್ಚಯವಾಗಿತ್ತು. ಆದರೆ, ಅಕಾಲಿಕವಾಗಿ ಸಚಿವ ಉಮೇಶ್​ ಕತ್ತಿ ಅವರ ನಿಧನದಿಂದ‌ ಕಾರ್ಯಕ್ರಮ ಮುಂದೂಡಲಾಗಿತ್ತು. ಆದರೆ, ಇಂದು‌ ಸಚಿವ ಉಮೇಶ್​ ಕತ್ತಿ‌ ಅವರಿಗೆ ಶೃದ್ದಾಂಜಲಿ ಸಲ್ಲಿಸಿ‌, ಮೌನಾಚರಣೆ ಮಾಡಿ ಕಾರ್ಯಕ್ರಮ ನಡೆಸಿದರು. ಇನ್ನು ಕಾರ್ಯಕ್ರಮದ ವೇಳೆ ಭಾರೀ ಮಳೆ ಬಂದರೂ ಸಹಿತ ಜನರು ತಲೆಯ ಮೇಲೆ ಕುರ್ಚಿ ಹಿಡಿದುಕೊಂಡು ನಿಂತು ಕಾರ್ಯಕ್ರಮದಲ್ಲಿ‌ ಪಾಲ್ಗೊಂಡರು. ಇನ್ನೂ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಸಂಸದ ರಮೇಶ್​ ಜಿಗಜಿಣಗಿ ಪಾಲ್ಗೊಳದೆ ಇರುವುದು ಇವರ ನಡುವಿನ ವೈ ಮನಸ್ಸು ಎದ್ದು ಕಾಣುತ್ತಿದೆ.

ಓದಿ: ಎಸ್​ಡಿಪಿಐ ಕಚೇರಿ ಮೇಲೆ ಪೊಲೀಸರ ದಾಳಿ: ಕಚೇರಿ ಸೀಲ್ ಮಾಡಿದ ಸಿಬ್ಬಂದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.