ಮುದ್ದೇಬಿಹಾಳ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ತಾಲೂಕಿನ ಕ್ವಾರಂಟೈನ್ ಕೇಂದ್ರಗಳಲ್ಲಿ ಅನ್ಯ ರಾಜ್ಯದಿಂದ ಬಂದವರಿಗೆ ಕಲ್ಪಿಸಿರುವ ವ್ಯವಸ್ಥೆ ಕುರಿತು ಸಿವಿಲ್ ನ್ಯಾಯಾಧೀಶ ಸುರೇಶ್ ಸವದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ನಾಲತವಾಡದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ತೆರೆದಿದ್ದು, ಅಲ್ಲಿರುವ ಜನರಿಗೆ ಯಾವ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬುದರ ಕುರಿತು ನ್ಯಾಯಧೀಶರು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ತಹಶೀಲ್ದಾರ್ ಜಿ.ಎಸ್.ಮಳಗಿ, ಎಸ್ಐ ಟಿ.ಜೆ.ನೆಲವಾಸಿ, ಡಾ. ಸತೀಶ್ ಭಗವಾನ್(ತಿವಾರಿ), ಪುರಸಭೆ ಯೋಜನಾಧಿಕಾರಿ ರಮೇಶ್ ಮಾಡಬಾಳ, ಆರೋಗ್ಯ ಸಹಾಯಕ ಎಂ.ಎಸ್.ಗೌಡರ ಮತ್ತಿತರರು ಇದ್ದರು.
ಕ್ವಾರಂಟೈನ್ ಕೇಂದ್ರಗಳಲ್ಲಿ ಸಿಗುತ್ತಿರುವ ಸೌಲಭ್ಯಗಳ ಕುರಿತು ಅಲ್ಲಿರುವ ಜನರು ನ್ಯಾಯಾಧೀಶರಿಗೆ ಅಹವಾಲು ಸಲ್ಲಿಸಿದರು.