ETV Bharat / state

ಬೆಂಕಿಗಾಹುತಿಯಾದ ಬಸ್​​​​​ನಲ್ಲಿ ಒಂದೇ ಕುಟುಂಬದ ಐವರು ಬಲಿ..! - ಚಿತ್ರದುರ್ಗ ಬಸ್ ಅಪಘಾತ

ಚಿತ್ರದುರ್ಗದ ಬಳಿ ಖಾಸಗಿ ಬಸ್ ಬೆಂಕಿಗಾಹುತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಮೃತಪಟ್ಟವರ ಗುರುತು ಪತ್ತೆಯಾಗಿದ್ದು, ಎಸ್​ಪಿ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ.

kukkeshri travels
ಕುಕ್ಕೆಶ್ರೀ ಟ್ರಾವೆಲ್ಸ್
author img

By

Published : Aug 12, 2020, 10:35 AM IST

ವಿಜಯಪುರ: ನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಚಿತ್ರದುರ್ಗ ಜಿಲ್ಲೆಯ ಕೆ.ಆರ್​.ಹಳ್ಳಿ ಬೆಂಕಿಗಾಹುತಿಯಾಗಿ ಐವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಮೃತಪಟ್ಟವರ ಗುರುತು ಪತ್ತೆಯಾಗಿದೆ.

ಗಣೇಶನಗರದ ನಿವಾಸಿಗಳಾದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, ಶೀಲಾ ರವಿ (33), ಸ್ಪರ್ಶ (8), ಸಮೃದ್ಧ (5), ಕವಿತಾ ವಿನಾಯಕ (29 )ಹಾಗೂ ನಿಶ್ಚಿತಾ (3) ಮೃತರು ಎಂದು ಎಸ್ಪಿ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ.

ಟಿಕೆಟ್​ ಬುಕ್ಕಿಂಗ್ ಏಜೆನ್ಸಿ ಪ್ರಕಾರ ಬಸ್​ನಲ್ಲಿ 32 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇವರ ಜೊತೆಗೆ ಇಬ್ಬರು ಚಾಲಕರು ಹಾಗೂ ಓರ್ವ ಕ್ಲೀನರ್ ಕೂಡಾ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಬೆಂಕಿಗಾಹುತಿಗೊಳಗಾದ ಕುಕ್ಕೆಶ್ರೀ ಟ್ರಾವೆಲ್ಸ್​ ಬೆಂಗಳೂರು ಮೂಲದ ದೇವರಾಜ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ನಿನ್ನೆ ರಾತ್ರಿ 9 ಗಂಟೆಗೆ ಬಸ್ ವಿಜಯಪುರದಿಂದ ಹೊರಟಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.