ETV Bharat / state

ವರುಣ ದೇವನ ಕೃಪೆಗಾಗಿ ಮಕ್ಕಳ ಮದುವೆ.. ಆದರಿದು ಬಾಲ್ಯ ವಿವಾಹವಲ್ಲ - worship for rain

ವರುಣ ದೇವನ ಕೃಪೆಗಾಗಿ ಹೆಣ್ಣು ಮಕ್ಕಳನ್ನೇ ವಧು ವರನ ವೇಷದಲ್ಲಿ ಶೃಂಗರಿಸಿ ಮದುವೆ ಮಾಡಿಸಿದ್ದಾರೆ.

Children Marriage for rain in vijayapura
ವರುಣನ ಕೃಪೆಗಾಗಿ ಮಕ್ಕಳ ಮದುವೆ
author img

By

Published : Jun 16, 2022, 1:21 PM IST

Updated : Jun 16, 2022, 2:14 PM IST

ಮುದ್ದೇಬಿಹಾಳ (ವಿಜಯಪುರ): ಉತ್ತಮ ಮಳೆಯಾಗಲಿ ಎಂದು ಕೋರಿ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವಿಶೇಷ ಸಂಪ್ರದಾಯವೊಂದನ್ನು ಆಚರಿಸಿದ್ದಾರೆ. ಹೆಣ್ಣು ಮಕ್ಕಳನ್ನೇ ವಧು - ವರನ ವೇಷದಲ್ಲಿ ಶೃಂಗರಿಸಿ ಮದುವೆ ಮಾಡಿಸಿದ್ದಾರೆ. ವರುಣ ದೇವನ ಕೃಪೆಗಾಗಿ ಗ್ರಾಮೀಣ ಭಾಗದಲ್ಲಿ ನಡೆಯುವ ವಿಶೇಷ ಕಲ್ಯಾಣವಿದು.

ಕಾರಹುಣ್ಣಿಮೆ ಮರು ದಿನದಂದು ಸಸಿ ಹಬ್ಬ ಮಾಡುವ ಪದ್ಧತಿ ಇದೆ. ಆ ನಿಮಿತ್ತ ಹೆಣ್ಣು ಮಕ್ಕಳಿಬ್ಬರನ್ನು ವಧು ವರರನ್ನಾಗಿ ತಯಾರಿ ಮಾಡಿ ಅವರಿಗೆ ಮದುವೆ ಶಾಸ್ತ್ರ ಮಾಡುವ ರೂಢಿ ಇದೆ. ಮದುವೆ ಸಂಪ್ರದಾಯದಂತೆ ಅರಿಷಿಣ ಶಾಸ್ತ್ರ ಮಾಡಿ ಮಾಂಗಲ್ಯಧಾರಣೆ ಮಾಡಿಸಿದರು.

ವರುಣನ ಕೃಪೆಗಾಗಿ ಮಕ್ಕಳ ಮದುವೆ

ಈ ಆಚರಣೆಯಲ್ಲಿ ಮಕ್ಕಳು - ಸಾಕ್ಷಿ ವಾಲಿ ವರನಾಗಿ ಭಾಗಿಯಾದರೆ, ರಂಜಿತ ಭೋವಿ ವಧುವಿನ ವೇಷ ಧರಿಸಿದ್ದರು. ಸ್ಥಳೀಯರು ಈ ಇಬ್ಬರಿಗೆ ಮದುವೆ ಮಾಡಿಸಿದರು. ಬೀಗರಾಗಿ ಮಂಜುಳಾ ವಾಲಿ, ಶಿವಲೀಲಾ ಬಸರಕೋಡ, ಹುಲಗಮ್ಮ ಭೋವಿ, ಕವಿತಾ ಭೋವಿ, ಲಕ್ಷ್ಮೀ ತಾಳಿಕೋಟಿ, ಗೀತಾ ವಾಲಿ, ರುದ್ರಮ್ಮ ನವಲಿ, ಸಿದ್ದಮ್ಮ ಕವಡಿಮಟ್ಟಿ ಹಾಗೂ ಮಕ್ಕಳು ಇದ್ದರು.

ಇದನ್ನೂ ಓದಿ: ಬಳ್ಳಾರಿಯಲ್ಲಿ ಹೋರಿ ಸ್ಪರ್ಧೆ.. ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ!

Last Updated : Jun 16, 2022, 2:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.