ವಿಜಯಪುರ: ಭೀಮಾತೀರದ ಚಡಚಣ ಸಹೋದರರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಬೈರಗೊಂಡಗೆ ಜಾಮೀನು ದೊರೆತ ಕಾರಣ, ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಇದು ಚಡಚಣ ಸಹೋದರರ ಸಹಚನಲ್ಲಿ ನಡುಕವುಂಟು ಮಾಡಿದೆ. ಇದರ ಮಧ್ಯೆ ತಮಗೆ ಜೀವ ಭಯವಿದ್ದು, ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕೆಂದು ಆತ ಆಗ್ರಹಿಸಿದ್ದಾನೆ.
ಪ್ರಕರಣದ ಇನ್ನೋರ್ವ ಆರೋಪಿ ಭೀಮು ಪೂಜಾರಿಯಿಂದ ಜೀವ ಭಯವಿದೆ ಎಂದು ಪೊಲೀಸರಿಗೆ ಸಚಿನ್ ದೂರು ನೀಡಿದ್ದಾನೆ. ಪ್ರಕರಣದ ಆರೋಪಿಗಳಿಗೆ ನೀಡಿದ ಜಾಮೀನು ವಿರೋಧಿಸಿ ಸುಪ್ರೀಂಕೋರ್ಟ್ಗೆ ಹೋಗ್ತೀವಿ ಎಂದು ಹೇಳಿರುವ ಆತ ಜಾಮೀನು ಹೇಗೆ ನೀಡಲಾಗಿದೆ ಎಂಬುದರ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಿರುವೆ ಎಂದು ತಿಳಿಸಿದ್ದಾನೆ. ಧರ್ಮರಾಜ್ ಬದುಕಿದ್ದಾಗ ಆತನ ಡ್ರೈವರ್ ಆಗಿ ಸಚಿನ್ ಚವ್ಹಾಣ ಕೆಲಸ ಮಾಡಿದ್ದನು. ಧರ್ಮರಾಜ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಸಚಿನ ಚವ್ಹಾಣ ಪ್ರಮುಖ ಸಾಕ್ಷಿಯಾಗಿದ್ದಾನೆ.