ವಿಜಯಪುರ: ಮಂಗಳವಾರ ರಾತ್ರಿ ಮದ್ಯದಂಗಡಿಗೆ ನುಗ್ಗಿದ ಖದೀಮರು ಶೆಟರ್ ಮುರಿದು, ಸಿ.ಸಿ. ಕ್ಯಾಮರಾ ಧ್ವಂಸಗೊಳಿಸಿ ಸಾವಿರಾರು ರೂ. ಮೌಲ್ಯದ ಮದ್ಯದ ಬಾಟಲಿ ಕದ್ದೊಯ್ದಿರುವ ಘಟನೆ ಜಿಲ್ಲೆಯ ಇಂಡಿಯಲ್ಲಿ ನಡೆದಿದೆ.
ಇಂಡಿ ಪಟ್ಟಣದ ಹುಡ್ಕೊದಲ್ಲಿರುವ ಎಂಎಸ್ಐಎಲ್ ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಗೆ ನುಗ್ಗಿರುವ ಕಳ್ಳರು, ಮೊದಲು ಅಂಗಡಿಯಲ್ಲಿನ ಸಿಸಿ ಕ್ಯಾಮರಾ ಒಡೆದು ನಂತರ ಸುಮಾರು 50 ಸಾವಿರ ರೂ. ಮೌಲ್ಯದ ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಿದ್ದಾರೆ.
ಕಳ್ಳರಿಗೆ ಈ ಮದ್ಯದಂಗಡಿಯೇ ಫೇವರಿಟ್: ಈ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು ಇದು ನಾಲ್ಕನೇ ಬಾರಿಯಾಗಿದೆ. ಎಂಎಸ್ಐಎಲ್ ಮದ್ಯದಂಗಡಿಯಾಗಿರುವ ಕಾರಣಕ್ಕೆ ಕಳ್ಳರಿಗೆ ಯಾವುದೇ ನಗದು, ಇನ್ನಿತರ ವಸ್ತುಗಳು ದೊರೆಯದಿದ್ದರೂ ಕಳ್ಳರು ಮದ್ಯದ ಬಾಟಲಿಗಳನ್ನು ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಇಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ : ರಸ್ತೆಯಲ್ಲಿ ಚಿತ್ರ ಬಿಡಿಸಿ ಕೊರೊನಾ ಜಾಗೃತಿ: ವಿಜಯಪುರ ಜಿಲ್ಲಾಡಳಿತದ ವಿನೂತನ ಪ್ರಯೋಗ