ETV Bharat / state

ವಿಜಯಪುರ: ಕುಡಿದ ಮತ್ತಿನಲ್ಲಿ ರಸ್ತೆ ಬದಿ ಹೋಟೆ‌ಲ್​​ಗಳಿಗೆ ಕಾರು ನುಗ್ಗಿಸಿದ ಚಾಲಕ - ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮ

ಮದ್ಯ ಸೇವಿಸಿದ ಅಮಲಿನಲ್ಲಿ ರಸ್ತೆ ಬದಿಯ ಹೋಟೆ‌ಲ್​​ಗಳಿಗೆ ಕಾರು ನುಗ್ಗಿಸಿದ ಚಾಲಕ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಘಟನೆ.

car crashes into roadside hotels
ರಸ್ತೆ ಬದಿಯ ಹೋಟೆ‌ಲ್​​ಗಳಿಗೆ ಕಾರು ನುಗ್ಗಿಸಿದ ಚಾಲಕ
author img

By

Published : Nov 22, 2022, 9:12 AM IST

Updated : Nov 22, 2022, 9:53 AM IST

ವಿಜಯಪುರ: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ರಸ್ತೆ ಬದಿಯ ಹೋಟೆ‌ಲ್​​ಗಳಿಗೆ ನುಗ್ಗಿಸಿದ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆದಿದೆ. ಸುಮಾರು 5ಕ್ಕೂ ಅಧಿಕ ಹೋಟೆಲ್​​‌ಗಳ ಪೀಠೋಪಕರಣಗಳಿಗೆ ಸಂಪೂರ್ಣ ಹಾನಿಯಾಗಿದೆ. ಹೊರಗಡೆ ನಿಲ್ಲಿಸಿದ್ದ ಬೈಕ್​ಗಳು ಜಖಂಗೊಂಡಿವೆ. ಹೋಟೆಲ್​​‌ನಲ್ಲಿ ಮಲಗಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಡಿದ ಅಮಲಿನಲ್ಲಿ ರಸ್ತೆ ಬದಿಯ ಹೋಟೆ‌ಲ್​​ಗಳಿಗೆ ಕಾರು ನುಗ್ಗಿಸಿದ ಚಾಲಕ

ವಿಜಯಪುರ ನಗರದ ವಿಠ್ಠಲ ಗೂಗ್ಯಾಳ್ ಎಂಬವರಿಗೆ ಸೇರಿದ KA28 M 9169 ನೋಂದಣಿ ಸಂಖ್ಯೆಯ ಮಹೀಂದ್ರಾ ಕಾರು ಇದಾಗಿದೆ. ಚಾಲಕನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.‌ ಬಬಲೇಶ್ವರ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಪಾದಚಾರಿಗೆ ಡಿಕ್ಕಿ: ಚಾಲಕನ ಬಂಧನ

Last Updated : Nov 22, 2022, 9:53 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.