ETV Bharat / state

ಮುದ್ದೇಬಿಹಾಳದಲ್ಲಿ ಕೊರೊನಾಗೆ ದಾರಿ ಮಾಡಿ ಕೊಡುತ್ತಿರುವ ವ್ಯಾಪಾರಸ್ಥರು - Corona in Vijayapura

ವಿಜಯಪುರದ ಮುದ್ದೇಬಿಹಾಳದ ವ್ಯಾಪಾರಸ್ಥರು ಸರ್ಕಾರ, ಜಿಲ್ಲಾಡಳಿತದ ಸೂಚನೆಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದಾರೆ.

ಕೊರೊನಾಗೆ ದಾರಿ ಮಾಡಿಕೊಡುತ್ತಿರುವ ವ್ಯಾಪಾರಸ್ಥರು

author img

By

Published : May 11, 2020, 4:55 PM IST

Updated : May 11, 2020, 6:20 PM IST

ಮುದ್ದೇಬಿಹಾಳ (ವಿಜಯಪುರ): ನಗರದ ವ್ಯಾಪಾರಸ್ಥರಿಗೆ ಕೊರೊನಾ ಭಯ ಇದ್ದಂತಿಲ್ಲ. ಸರ್ಕಾರದ ನಿರ್ದೇಶನಗಳನ್ನು ಪಾಲಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಬೇಕಿದ್ದ ವ್ಯಾಪಾರಸ್ಥರು ಎಲ್ಲವನ್ನೂ ಗಾಳಿಗೆ ತೂರಿದ್ದಾರೆ. ಪಟ್ಟಣದ ಬಹುತೇಕ ಅಂಗಡಿಗಳ ಮುಂದೆ ಜನಜಂಗುಳಿ ಕಂಡುಬಂದಿದೆ.

ಕೊರೊನಾಗೆ ದಾರಿ ಮಾಡಿಕೊಡುತ್ತಿರುವ ವ್ಯಾಪಾರಸ್ಥರು
ಕೊರೊನಾಗೆ ದಾರಿ ಮಾಡಿಕೊಡುತ್ತಿರುವ ವ್ಯಾಪಾರಸ್ಥರು

ಗ್ರಾಮೀಣ ಪ್ರದೇಶಗಳಲ್ಲಿ ಅನ್ಯ ರಾಜ್ಯದ ಜನರು ಬರುತ್ತಿದ್ದಾರೆ. ಅದರಲ್ಲೂ ಹಳ್ಳಿಗಾಡಿನ ಜನರೇ ಮದುವೆ ಕಾರ್ಯಕ್ರಮಗಳನ್ನು ಮಾಡಲು ಪಟ್ಟಣಕ್ಕೆ ಕಾಲಿಡುತ್ತಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಐವತ್ತರ ಗಡಿ ತಲುಪಿದ್ರೂ, ಮುದ್ದೇಬಿಹಾಳದ ಜನರಲ್ಲಿ ಕೊರೊನಾ ವೈರಸ್ ಭಯವೇ ಇದ್ದಂತೆ ಕಾಣುತ್ತಿಲ್ಲ.

ಅಧಿಕಾರಿಗಳು ಸಾಕಷ್ಟು ಬಾರಿ ತಿಳಿ ಹೇಳಿದ್ದರೂ ಕಿವಿಗೊಡದೆ ವ್ಯಾಪಾರಸ್ಥರು ತಮ್ಮ ದಿನನಿತ್ಯದ ವಹಿವಾಟಿನಲ್ಲಿ ತೊಡಗಿದ್ದಾರೆ‌. ಈಚೆಗೆ ಅಧಿಕಾರಿಗಳಿಗೆ ಪುಷ್ಪಾರ್ಚನೆ ಮಾಡಿದ್ದ, ಅಂಗಡಿಕಾರರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ಸೂಚನೆಗಳನ್ನು ಪಾಲಿಸುವುದಾಗಿ ಹೇಳಿದ್ದರು. ಆದರೆ ಇವತ್ತು ಅವರ ಅಂಗಡಿಯಲ್ಲೂ ಜನರು ಗುಂಪುಗೂಡಿದ್ದು ಕಂಡುಬಂತು.

Last Updated : May 11, 2020, 6:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.