ಮುದ್ದೇಬಿಹಾಳ (ವಿಜಯಪುರ): ಕಾರ್ಗಿಲ್ ವಿಜಯದಿಂದ ಸ್ಫೂರ್ತಿಪಡೆದು ಸೇನೆಗೆ ಸೇರಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಕಳೆದ ತಿಂಗಳು ನಿವೃತ್ತರಾಗಿದ್ದ ಯೋಧ ಹೃದಯಾಘಾತದಿಂದ ನಿಧನರಾದರು.
ಮುದ್ದೇಬಿಹಾಳದ ಸೂರೂರು ಗ್ರಾಮದ ಯೋಧ ರೇವಣಯ್ಯ ಕಳೆದ ವರ್ಷ ಆಗಸ್ಟ್ 5ರಂದು ನಿವೃತ್ತಿ ಪಡೆದು ಊರಿಗೆ ಮರಳಿದ್ದರು. ನಿನ್ನೆ ರಾತ್ರಿ ಊಟ ಮುಗಿಸಿ ಮನೆಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ನಾಗೂರು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.
ಯೋಧ ರೇವಣಯ್ಯ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹ: ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಗ್ರಾ.ಪಂ ಅಧ್ಯಕ್ಷೆ!