ETV Bharat / state

ವರ್ಕೌಟ್ ಆಗದ ಅನುಕಂಪದ ಅಲೆ : ಸಿಂದಗಿ‌ ಕ್ಷೇತ್ರದಲ್ಲಿ ಬಿಜೆಪಿಗೆ ಮತದಾರರ ಆಶೀರ್ವಾದ - BJP candidate win

ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರಮುಖ ನಾಯಕರು ಚುನಾವಣೆ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದರು..

ಸಿಂದಗಿ‌ ಕ್ಷೇತ್ರದಲ್ಲಿ ಬಿಜೆಪಿಗೆ ಆರ್ಶಿವಾದ ಮಾಡಿದ ಮತದಾರ

author img

By

Published : Nov 2, 2021, 6:31 PM IST

Updated : Nov 2, 2021, 7:41 PM IST

ವಿಜಯಪುರ : ಸಿಂದಗಿ ಉಪಚುನಾವಣೆಯ ಜಿದ್ದಾಜಿದ್ದಿನ ಕಣದಲ್ಲಿ ಕೊನೆಗೂ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವಿನ ನಗೆ ಬೀರಿದ್ದಾರೆ.‌ ಈ ಗೆಲುವಿಗಾಗಿ ಬಿಜೆಪಿ ಸರ್ಕಾರ ಟೊಂಕ ಕಟ್ಟಿ ನಿಂತಿದ್ದು ಮಾತ್ರ ಸುಳ್ಳಲ್ಲ.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ್​​ ಸೇರಿದಂತೆ ಹಲವು ಮುಖಂಡರು ಕ್ಷೇತ್ರದಲ್ಲಿಯೇ ಮೊಕ್ಕಾಂ ಹೂಡಿದ್ದರು.‌

ಸಿಂದಗಿ‌ ಕ್ಷೇತ್ರದಲ್ಲಿ ಬಿಜೆಪಿಗೆ ಮತದಾರರ ಆಶೀರ್ವಾದ

ಇದರ ಪರಿಣಾಮವಾಗಿ ಬಿಜೆಪಿ ಅಭ್ಯರ್ಥಿ ರಮೇಶ್​ ಭೂಸನೂರ ದಾಖಲೆಯ 31,185 ಮತಗಳ ಅಂತರದಿಂದ ಜಯಗಳಿಸಲು ಸಾಧ್ಯವಾಯಿತು. ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ದಿ.ಎಂ.ಸಿ.ಮನಗೂಳಿ ವಿರುದ್ಧ 9 ಸಾವಿರಕ್ಕಿಂತ ಅಧಿಕ ಮತಗಳಿಂದ ಸೋಲು ಅನುಭವಿಸಿದ್ದರು.

ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರಮುಖ ನಾಯಕರು ಚುನಾವಣೆ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದರು.

ಜೆಡಿಎಸ್ ಅಭ್ಯರ್ಥಿ ಪರವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸುಮಾರು 10 ದಿನ ಕ್ಷೇತ್ರದಲ್ಲಿ ಉಳಿದು ಪ್ರಚಾರ ನಡೆಸಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ ಸಹ ಹಾನಗಲ್‌ಗಿಂತ ಹೆಚ್ಚು ಪ್ರಚಾರ ಸಿಂದಗಿ‌ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಇನ್ನು ಆಡಳಿತಾರೂಢ ಬಿಜೆಪಿ ಸಿಂದಗಿ‌ ಕ್ಷೇತ್ರದ 7 ಜಿಲ್ಲಾ ಪಂಚಾಯತ್‌ ಕ್ಷೇತ್ರಕ್ಕೆ ಒಬ್ಬ ಸಚಿವರನ್ನು ನೇಮಿಸಿ ಗೆಲುವಿಗಾಗಿ ರಣತಂತ್ರ ರೂಪಿಸಿದ್ದರು.

ಕೈಕೊಟ್ಟ ಜಾತಿ ಸಮಾವೇಶ : ಕಾಂಗ್ರೆಸ್ ಮುಖಂಡರು ಕ್ಷೇತ್ರದಲ್ಲಿ ಪ್ರತಿ ಜಾತಿಯವರನ್ನು ತಲುಪಲು ಕ್ಷೇತ್ರದಲ್ಲಿ ಜಾತಿವಾರು ಸಮಾವೇಶ ನಡೆಸಿದ್ದರು. ಆದರೆ, ಇದು ಗೆಲುವಿಗೆ ಸಹಕಾರಿಯಾಗಲಿಲ್ಲ.

ವರ್ಕೌಟ್ ಆಗದ ಅನುಕಂಪದ ಅಲೆ : ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ನಿಧನದ ನಂತರ ಅವರ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.‌ ತಮ್ಮ ತಂದೆಯ ಸಾವಿನ ಅನುಕಂಪ ಮತದಾರರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಅಶೋಕ ಮನಗೂಳಿ ಮೇಲೆ ಮತದಾರರು ನಿರಾಸಕ್ತಿ ತೋರಲು ಅವರ ತಂದೆ ಸಚಿವರಾಗಿದ್ದ ವೇಳೆ ಸಾರ್ವಜನಿಕರ ಜತೆ ಅವರು ಹೆಚ್ಚು ಬೆರೆಯುತ್ತಿರಲಿಲ್ಲ. ಅದರ ಜತೆ ಜೆಡಿಎಸ್ ಬಿಟ್ಟಿರುವುದು ಸಹ ಅವರ ಸೋಲಿಗೆ ಕಾರಣವಾಯಿತು ಎನ್ನುವುದು ರಾಜಕೀಯ ವಿಶ್ಲೇಶಕರ ಮಾತು.

ಅಲ್ಪಸಂಖ್ಯಾತ ಅಭ್ಯರ್ಥಿಯಿಂದಾಗದ ಎಫೆಕ್ಟ್ : ಸಿಂದಗಿ ಮತಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಅಲ್ಪಸಂಖ್ಯಾತ ಅಭ್ಯರ್ಥಿ ನಾಜಿಯಾ ಅಂಗಡಿ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಇದು ಕಾಂಗ್ರೆಸ್ ಅಭ್ಯರ್ಥಿಗೆ ಮುಳುವಾಗಬಹುದು ಎಂದು‌ ಕಾಂಗ್ರೆಸ್ ಮುಖಂಡರು‌ ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದ್ದರು.

ಆದರೆ, ಜೆಡಿಎಸ್ ಅಭ್ಯರ್ಥಿ ಕೇವಲ 4 ಸಾವಿರ ಮತ ಪಡೆದು ಠೇವಣಿ ಕಳೆದುಕೊಳ್ಳಬೇಕಾಯಿತು. ಇಲ್ಲಿ ಅಲ್ಪಸಂಖ್ಯಾತ ಮತಗಳು ಬಿಜೆಪಿ‌ ಪರವಾಗದಿದ್ದರೂ ಕಾಂಗ್ರೆಸ್‌ಗೂ ಸಹಾಯಕವಾಗಲಿಲ್ಲ.

Last Updated : Nov 2, 2021, 7:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.