ETV Bharat / state

ವಿಜಯಪುರ: ಪಕ್ಷಕ್ಕೆ ದ್ರೋಹವೆಸಗಿದ ಸದಸ್ಯರ ಭಾವಚಿತ್ರ ಸುಟ್ಟು ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು... - vijayapura news

ನಮ್ಮ ಸದಸ್ಯರಿಗೆ ಕಾಂಗ್ರೆಸ್ ಪಕ್ಷ ಆಮಿಷ ಒಡ್ಡಿದೆ. ಹಣ ನೀಡಿ ಕುದುರೆ ವ್ಯಾಪಾರ ಮಾಡಿದೆ. ಹೀಗಾಗಿ ಅನ್ಯಾಯ ಮಾಡಿದವರ ಮೇಲೆ ಪಕ್ಷ ಶಿಸ್ತು ಕ್ರಮ ಜರುಗಿಸಿದೆ. ನಮ್ಮ ಬಳಿ ಸಂಖ್ಯಾ ಬಲವಿದ್ದರೂ ಕಾಂಗ್ರೆಸ್ ಮೋಸದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ತಿಳಿಸಿದ್ದಾರೆ.

Bjp activists protest in vijayapura
ಭಾವಚಿತ್ರ ಸುಟ್ಟು ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತ
author img

By

Published : Jul 2, 2020, 11:35 PM IST

ವಿಜಯಪುರ: ಜಿಲ್ಲಾ ಪಂಚಾಯತ್​​ ಅಧ್ಯಕ್ಷೀಯ ಚುನಾವಣೆಯಲ್ಲಿ ಬೇರೆ​ ಪಕ್ಷಕ್ಕೆ ಬೆಂಬಲ ಘೋಷಿಸಿದ ಜಿಲ್ಲಾ ಪಂಚಾಯತ್​​​ ಸದಸ್ಯರ ಭಾವಚಿತ್ರಗಳನ್ನು ದಹಿಸಿ ನಗರದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು‌.

ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ನಗರದ ಶಿವಾಜಿ ವೃತ್ತದಲ್ಲಿ ಬೇರೆ ಪಕ್ಷದ ಪರ ಮತ ಚಲಾಯಿಸಿದ ಜ್ಯೋತಿ ಆಸ್ಕಿ, ಕಲ್ಲಪ್ಪ ಮಟ್ಟಿ, ಬಿಂದುರಾಯಗೌಡ ಪಾಟೀಲ ಹಾಗೂ ಮಾಹಾಂತಗೌಡ ಪಾಟೀಲ ವಿರುದ್ಧ ಕಾರ್ಯಕರ್ತರು ಕಿಡಿಕಾರಿದರು. ಪಕ್ಷಕ್ಕೆ ಬಹುಮತವಿದ್ದರೂ ಸ್ವ ಪಕ್ಷದ ಸದಸ್ಯರು ದ್ರೋಹ ಮಾಡಿದ್ದಾರೆ ಅಲ್ಲದೆ ಅವರನ್ನು ಈಗಾಗಲೇ ಪಕ್ಷ ಉಚ್ಚಾಟನೆ ಮಾಡಿದೆ ಎಂದ ಅವರು, ಮತ ಹಾಕುವಂತೆ ವಿಪ್ ಜಾರಿ ಮಾಡಲಾಗಿತ್ತು. ಆದ್ರೂ ಹಣದಾಸೆಗೆ ಬಿಜೆಪಿಯ ನಾಲ್ವರು ಸದಸ್ಯರು ಬೇರೆ ಪಕ್ಷಕ್ಕೆ ಕೈ ಜೋಡಿಸಿದ ಪರಿಣಾಮ ಇಂದು ಅಧ್ಯಕ್ಷ ಸ್ಥಾನ ಕೈ ತಪ್ಪಿದೆ ಎಂದು ಆಕ್ರೋಶ ಹೊರ ಹಾಕಿದರು‌.ಬಳಿಕ ಮಾತಾಡಿದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ನಮ್ಮ ಸದಸ್ಯರಿಗೆ ಕಾಂಗ್ರೆಸ್ ಪಕ್ಷ ಆಮಿಷ ಒಡ್ಡಿದೆ. ಹಣ ನೀಡಿ ಕುದುರೆ ವ್ಯಾಪಾರ ಮಾಡಿದ್ದಾರೆ. ಅನ್ಯಾಯ ಮಾಡಿದವರ ಮೇಲೆ ಪಕ್ಷ ಶಿಸ್ತು ಕ್ರಮ ಜರುಗಿಸಿದೆ. ನಮ್ಮ ಬಳಿ ಸಂಖ್ಯಾ ಬಲವಿದ್ದರೂ ಕಾಂಗ್ರೆಸ್ ಮೋಸದ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.