ವಿಜಯಪುರ: ಕಳೆದ ಒಂದೂವರೆ ವರ್ಷದಿಂದ ಬೈಕ್ ಕಳ್ಳತನ ಮಾಡುತ್ತಿದ್ದ 4 ಆರೋಪಿಗಳನ್ನ ಬಂಧಿಸಿಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ತಿಳಿಸಿದರು.
ನಗರದ ಚಿಂತನ ಹಾಲ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವ್ರು, ಜಿಲ್ಲೆಯಲ್ಲಿ ಪದೆ ಪದೇ ಬೈಕ್ ಕಳವಿನ ಕುರಿತು ಪ್ರಕರಣಗಳು ದಾಖಲಾಗುತ್ತಿದ್ದವು. ಅಕ್ಕೋಬರ್ 19ರಂದು ರ್ಯಾವಣ್ಣ ಹಳ್ಳೂರು ಎಂಬುವರು ಬೈಕ್ ಕಳ್ಳತನವಾಗಿದೆ ಎಂದು ತಾಳಿಕೋಟೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಜಾಡು ಹಿಡಿದು ಡಿವೈಎಸ್ಪಿ ನೇತೃತ್ವದ ತಂಡ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ವಿಜಯಪುರ ಜಿಲ್ಲೆಯ ಬಿಳೆಬಾವಿ ಗ್ರಾಮದ ಬಂಧಿತ ಆರೋಪಿಗಳಾದ ಮೌನೇಶ್ ಗುರಣ್ಣ ಬಡಿಗೇರ್(28), ನಿಂಗಣ್ಣ ಪೂಜಾರಿ(38), ಯಾದಗಿರಿ ಜಿಲ್ಲೆಯ ಕೊಡೇಕಲ್‌ನ ಮೀರಸಾಬ್ ಬಿಳಿಗಾರ (29) ಹಾಗೂ ಮಹಬೂಬ್ ಬಿಳಿಗಾರ (28) ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 30 ಲಕ್ಷ ರೂ. ಮೌಲ್ಯದ 50 ಮೋಟರ್ ಸೈಕಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳು ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡಿ ಕಡಿಮೆ ಬೆಲೆಗೆ ಪಕ್ಕದ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದರು. ವಶಕ್ಕೆ ಪಡೆದ ಬೈಕ್‌ಗಳಲ್ಲಿ 31 ವಿಜಯಪುರ ಜಿಲ್ಲೆಯ ಸಿಂದಗಿ, ಮುದ್ದೇಬಿಹಾಳ ಸೇರಿದಂತೆ ಹಲವು ತಾಲೂಕಿನಲ್ಲಿ ಕಳವು ಮಾಡಿದ್ದಾಗಿದೆ. 19 ಬೈಕ್ ಯಾದಗಿರಿ, ಕಲಬುರಗಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯದ್ದಾಗಿದ್ದು, ಕಳ್ಳತನದ ಹಿಂದೆ ಯಾರು ಶಾಮಿಲಾಗಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ.
ಕೇವಲ ಮೂರು ದಿನಗಳಲ್ಲಿ ಪ್ರಕರಣ ಭೇದಿಸಿ 50 ಬೈಕ್ ಕಳ್ಳತನ ಪತ್ತೆ ಮಾಡಿದ ಪೊಲೀಸ್ ತಂಡಕ್ಕೆ ಎಸ್ಪಿ ಅನುಪಮ್ ಅಗರವಾಲ್ ಅಭಿನಂದಿಸಿ, ನಗದು ನಗದು ಬಹುಮಾನ ಘೋಷಿಸಿದರು.