ವಿಜಯಪುರ : ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಚಾಲನೆ ನೀಡಿದರು.
ಸೊಲ್ಲಾಪುರ ರಸ್ತೆಯ ಸರ್ಕಾರಿ ಐಟಿಐ ಕಾಲೇಜಿನ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಶೌಚಾಲಯವನ್ನು ಶಾಸಕ ಯತ್ನಾಳ್ ಉದ್ಘಾಟಿಸಿದರು. ವಿಜಯಪುರ ನಗರದ ಅತ್ಯಾಧುನಿಕ ಶೌಚಾಲಯ ಇದಾಗಿದೆ. ಒಳಗೆ ಎಸಿ ಕೂಡ ಅಳವಡಿಕೆ ಮಾಡಲಾಗಿದೆ. ಮಹಾನಗರ ಪಾಲಿಕೆಯಿಂದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ₹18 ಲಕ್ಷ ಅನುದಾನದಲ್ಲಿ ಈ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಸೇರಿ ಹಲವರು ಭಾಗಿಯಾಗಿದ್ದರು.