ETV Bharat / state

ನಮ್ಮ ಧರ್ಮಾಚರಣೆಗಳ ವಿರುದ್ಧ ಬುದ್ಧಿಜೀವಿಗಳ ಷಡ್ಯಂತ್ರ; ಬೆಳ್ಳುಬ್ಬಿ

ಧರ್ಮ ದೇಶದಿಂದ ಹೋಗಬೇಕು ಎನ್ನುವುದು ಕೆಲವು ಬುದ್ಧಿಜೀವಿಗಳ ಷಡ್ಯಂತ್ರ. ಕಾವಿಯನ್ನು ಟೀಕೆ ಮಾಡುತ್ತೀರಾ, ನಿಮ್ಮನ್ನು ಯಾವುದರಿಂದ ಹೊಡೆಯಬೇಕು. ನಮ್ಮ ಊಟ, ಉಡುಗೆ ತೊಡುಗೆ, ಸಂಸ್ಕೃತಿಯ, ಆಚಾರ ವಿಚಾರ, ಹಬ್ಬ, ಜಾತ್ರೆಗಳ ಕುರಿತು ಹೆಮ್ಮೆ ಪಡಬೇಕು. ಹನ್ನೆರಡನೇ ಶತಮಾನದಿಂದ ಬೇರೆಯವರಿಂದಲೇ ಆಳಿಸಿಕೊಂಡಿದ್ದೇವೆ. ನಿಮ್ಮ ಸ್ವಾರ್ಥದ ಸಲುವಾಗಿ ಧರ್ಮ ಹೋಗಬೇಕು ಎಂದು ದೇಶದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿರುವುದನ್ನು ಬಿಡಬೇಕು ಎಂದು ಹರಿಹಾಯ್ದರು.

Bellubbi Reaction about Chandrashekar Patil at Muddebihala
ಸಾಹಿತಿ ಚಂಪಾ ವಿರುದ್ಧ ಮಾಜಿ ಸಚಿವ ಬೆಳ್ಳುಬ್ಬಿ ವಾಗ್ದಾಳಿ
author img

By

Published : Nov 16, 2020, 11:05 PM IST

ಮುದ್ದೇಬಿಹಾಳ : ಚಂದ್ರಶೇಖರ ಪಾಟೀಲ ಅವರು ಹುಟ್ಟಿದ್ದು ಇಲ್ಲೇ, ಆದರೆ ಆ ಸಿದ್ಧಾಂತ ಈ ಸಿದ್ಧಾಂತ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಧರ್ಮ, ಆಚರಣೆಗಳ ವಿರುದ್ಧ ಕೆಲವು ಬುದ್ದಿಜೀವಿಗಳ ಷಡ್ಯಂತ್ರ ದೇಶದಲ್ಲಿ ನಡೆದಿದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಆರೋಪಿಸಿದರು.

ತಾಲೂಕಿನ ಅಡವಿ ಹುಲಗಬಾಳ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡ ಬೀರಲಿಂಗೇಶ್ವರ, ಮಾಳಿಂಗರಾಯ ಹಾಗೂ ಸಿಡಿಯಾನ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಹಿತಿ ಚಂಪಾ ವಿರುದ್ಧ ಮಾಜಿ ಸಚಿವ ಬೆಳ್ಳುಬ್ಬಿ ವಾಗ್ದಾಳಿ

ಧರ್ಮ ದೇಶದಿಂದ ಹೋಗಬೇಕು ಎನ್ನುವುದು ಕೆಲವು ಬುದ್ಧಿಜೀವಿಗಳ ಷಡ್ಯಂತ್ರ. ಕಾವಿಯನ್ನು ಟೀಕೆ ಮಾಡುತ್ತೀರಾ, ನಿಮ್ಮನ್ನು ಯಾವುದರಿಂದ ಹೊಡೆಯಬೇಕು. ನಮ್ಮ ಊಟ, ಉಡುಗೆ ತೊಡುಗೆ, ಸಂಸ್ಕೃತಿಯ, ಆಚಾರ ವಿಚಾರ, ಹಬ್ಬ, ಜಾತ್ರೆಗಳ ಕುರಿತು ಹೆಮ್ಮೆ ಪಡಬೇಕು. ಹನ್ನೆರಡನೇ ಶತಮಾನದಿಂದ ಬೇರೆಯವರಿಂದಲೇ ಆಳಿಸಿಕೊಂಡಿದ್ದೇವೆ. ನಿಮ್ಮ ಸ್ವಾರ್ಥದ ಸಲುವಾಗಿ ಧರ್ಮ ಹೋಗಬೇಕು ಎಂದು ದೇಶದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿರುವುದನ್ನು ಬಿಡಬೇಕು ಎಂದು ಹರಿಹಾಯ್ದರು.

ಸುಂಟಿ, ಬೆಳ್ಳುಳ್ಳಿ, ಅರಿಶಿಣ ನಮ್ಮ ದೇಶಕ್ಕೆ ದೇವರು ಕೊಟ್ಟಿರುವ ಆಯುರ್ವೇದ ಔಷಧಿ ಆಗಿದೆ. ಕೊರೊನಾ ಭಂಡಾರದಿಂದಲೇ ಅಂಜಿ ಹೋಗಿದೆ. ಅರಿಶಿಣ ಔಷಧಿ ಗುಣ ಹೊಂದಿದ್ದು, ಆರೋಗ್ಯವನ್ನು ಮೂಡಿಸುವ ವಸ್ತುವಾಗಿದೆ ಎಂದು ಹೇಳಿದರು.

ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮಾತನಾಡಿ, ಬಡವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ಆಚರಿಸಿಕೊಂಡು ಬರುತ್ತಿರುವ ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ ಅವರ ಕಾರ್ಯ ಶ್ಲಾಘನೀಯವಾಗಿದೆ. ಕೊರೊನಾ ಹಾವಳಿಯ ಮಧ್ಯೆ ಸರಳವಾಗಿ ಜಾತ್ರೆಯ ಆಚರಣೆ ಮಾಡಿರುವುದು ಮೆಚ್ಚುವ ಸಂಗತಿ. ಜನತೆ ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆಯ ಸಲಹೆಗಳನ್ನು ಪಾಲಿಸಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.