ETV Bharat / state

ಸಿಎಂ ಮೇಲೆ ಮುಂದುವರಿದ ಮುನಿಸು: ಬಿಎಸ್​ವೈ ಅಧಿಕಾರಾವಧಿ ಕುರಿತು ಯತ್ನಾಳ್​ಗೆ ಇನ್ನೂ ಅನುಮಾನ! - ವಿಜಯಪುರ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕಾರಾವಧಿ ಕುರಿತಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ತುಪ್ಪ ಸುರಿದಿದ್ದಾರೆ. ಬೇರೆ ಸಚಿವರಂತೆ ಸೂರ್ಯ, ಚಂದ್ರರಿರುವಷ್ಟು ದಿನ ಯಡಿಯೂರಪ್ಪ ಸಿಎಂ ಆಗಿರ್ತಾರೆ ಎಂದು ಹೇಳಲ್ಲ ಎನ್ನುವ ಮೂಲಕ ಸಿಎಂ ಬದಲಾವಣೆ ವಿಚಾರವನ್ನು ಪುನರುಚ್ಛರಿಸಿದ್ದಾರೆ.

Basanagowda Patil Yatnal
ಶಾಸಕ ಬಸನಗೌಡ ಪಾಟೀಲ ಯತ್ನಾಳ
author img

By

Published : Oct 30, 2020, 7:30 PM IST

Updated : Oct 30, 2020, 7:55 PM IST

ವಿಜಯಪುರ: ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿನ 3 ವರ್ಷಗಳ ಕಾಲ ಸಿಎಂ ಆಗಿರ್ತಾರೆ ಎಂದು ನಾನೇನೂ ಹೇಳುವುದಿಲ್ಲ ಎನ್ನುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಸಿಎಂ ಜತೆಗಿನ ತಮ್ಮ ಮುನಿಸನ್ನು ಮುಂದುವರೆಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ಸಚಿವರಂತೆ ಸೂರ್ಯ, ಚಂದ್ರರಿರುವಷ್ಟು ದಿನ ಸಿಎಂ ಆಗಿರ್ತಾರೆ ಎಂದು ಹೇಳಲ್ಲ ಎನ್ನುವ ಮೂಲಕ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಯತ್ನಾಳ್​ ತುಪ್ಪ ಸುರಿದಿದ್ದಾರೆ. ನಾನ್ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ, ಅನುದಾನ ಬಿಡುಗಡೆ ಮಾಡದಿರುವದನ್ನು ಪ್ರಶ್ನಿಸಿದ್ದೇನೆಯೇ ಹೊರತು, ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಸಿಎಂ ಅಧಿಕಾರಾವಧಿ ಕುರಿತು ಮುಂದುವರಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅನುಮಾನ

ಹೀಗಾಗಿ ಇಂದು ರಾಜ್ಯದ ಬಹುತೇಕ ಮಹಾನಗರ ಪಾಲಿಕೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಮಗು ಅಳದಿದ್ದರೆ ತಾಯಿ ಹಾಲು ಕುಡಿಸುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ತಮ್ಮ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಬಿಎಸ್​ವೈ ಬೆಂಬಲಿಗರಿಗೆ ಮಾತಿನಲ್ಲಿಯೇ ತಿವಿದರು.

ಮೊನ್ನೆ ನಾನು ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ್ದೆ. ನಾನು ಇನ್ನೂ ಸಚಿವನೇ ಆಗಿಲ್ಲ, ಸಿಎಂ ಸ್ಥಾನದ ಆಕಾಂಕ್ಷಿಯಂತೂ ಅಲ್ಲವೇ ಅಲ್ಲ. ಯಾರ ಹಣೆಯಲ್ಲಿ ಏನು ಬರೆದಿದೆ ಯಾರಿಗೆ ಗೊತ್ತು ಎಂದು ಯತ್ನಾಳ್​ ಮಾರ್ಮಿಕವಾಗಿ ನುಡಿದರು.

Last Updated : Oct 30, 2020, 7:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.