ETV Bharat / state

ಜೋಶಿ, ಶೆಟ್ಟರ್ ನೆರೆ ಪರಿಹಾರದ ಜವಾಬ್ದಾರಿ ತೆಗೆದುಕೊಳ್ಳಲಿ: ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್‌

ನೆರೆ ಪರಿಹಾರದ ವಿಚಾರವಾಗಿ ಕೇಳಿದ ಪ್ರಶ್ನೆಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ,ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗು ರಾಜ್ಯ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ
author img

By

Published : Oct 3, 2019, 11:55 PM IST

ವಿಜಯಪುರ : ಅನಂತ ಕುಮಾರ್ ಅವರ ಜಾಗದಲ್ಲಿ ಪ್ರಹ್ಲಾದ್ ಜೋಶಿಯವರು ಇದ್ದಾರೆ, ಅವರಿಗೆ ಇವತ್ತು ತುಂಬಾ ಜವಾಬ್ದಾರಿ ಇದೆ. ಅಲ್ಲದೇ ಅವರು ಉತ್ತರ ಕರ್ನಾಟಕದವರಾಗಿದ್ದಾರೆ. ಹಾಗೆಯೇ ಅವರೊಂದಿಗೆ ಜಗದೀಶ ಶೆಟ್ಟರ್ ಕೂಡಾ ಜವಾಬ್ದಾರಿ ತೆಗೆದುಕೊಳ್ಳಬೇಕು. ಅವರಿಬ್ಬರೂ ನೇತೃತ್ವ ವಹಿಸಿದರೆ ನಾವು ಹಿಂಬಾಲಿಸುತ್ತೇವೆ ಎಂದು ನೆರೆ ಪರಿಹಾರದ ವಿಚಾರವಾಗಿ ಕೇಳಿದ ಪ್ರಶ್ನೆಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಟಾಂಗ್ ನೀಡಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ

ವಿಜಯಪುರದಲ್ಲಿ ಮಾತನಾಡಿದ ಯತ್ನಾಳ, ಪ್ರವಾಹ ಸಂತ್ರಸ್ತರಿಗೆ ಕೇಂದ್ರದ ಪರಿಹಾರ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಪ್ರಧಾನಿಯನ್ನು ಭೇಟಿಯಾಗುತ್ತಾನೆ. ವಿಜಯಪುರದ ಶಾಸಕನಾಗಿ, ಉತ್ತರ ಕನ್ನಡ ಜನರ ಭಾವನೆಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ಪತ್ರವನ್ನು ಇಂದೇ ಬರೆಯುತ್ತೇನೆ. ಆಸಕ್ತಿ ಇರುವವರು ಬರಬಹುದು ಎಂದರು.

Intro:ವಿಜಯಪುರ Body:ವಿಜಯಪುರ : ಪ್ರವಾಹ ಸಂತ್ರಸ್ತರಿಗೆ ಕೇಂದ್ರದಿಂದ‌ ೧೦ಸಾವಿರ ಕೋಟಿ ಪರಿಹಾರ ತರಬೇಕು.‌ ನಮ್ಮ ಕೇಂದ್ರ ಸಚಿವರು ಪ್ರಧಾನಿ ಬಳಿ ಹೋಗಿ ಪರಿಹಾರ ಕೇಳಬೇಕು ಅದನ್ನು ಬಿಟ್ಟು
ಒಬ್ಬರು ಹುಬ್ಬಳ್ಳಿಯಲ್ಲಿದ್ದರೆ ಇನ್ನೊಬ್ಬರು ಬೆಂಗಳೂರಿನಲ್ಲಿ ಕುಳಿತು ಏನ್ ಮಾಡ್ತಿದ್ದಾರೆ.
ನಾವು ಪಕ್ಷ ಕಟ್ಟಿದ್ದೀವಿ, ನಾನು 10 ವರ್ಷ ಎಂಪಿ ಆಗಿದ್ದೇ‌, ಹೋಗಿ ಹಠ ಹಿಡಿದು ಹಣ ತೆಗೆಕೊಂಡು ಬನ್ನಿ.
ಅನಂತ ಕುಮಾರ್ ಇದ್ದಿದ್ರೆ ನಮಗೆ ಇಂತಹ ಗತಿ ಬರ್ತಿರಲಿಲ್ಲ.
ಅವರನ್ನ ಕಳೆದುಕೊಂಡಿದ್ದು ನಮ್ಮ ದುರ್ದೈವ, ಅವರು ಕೇಂದ್ರಕ್ಕೂ ರಾಜ್ಯಕ್ಕೂ ಸೇತುವೆಯಾಗಿದ್ರು.
ನೀವು ಮೂವರಲ್ಲಿ ಒಬ್ಬರಾದರು ಸೇತುವೆ ಆಗಿ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸದಾನಂದಗೌಡ ಹಾಗೂ ಸುರೇಶ ಅಂಗಡಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಟಾಂಗ ನೀಡಿದರು.
ವಿಜಯಪುರ ದಲ್ಲಿ ಇಂದು ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಯತ್ನಾಳ,
ಪ್ರವಾಹ ಸಂತ್ರಸ್ತರಿಗೆ ಕೇಂದ್ರದ ಪರಿಹಾರ ವಿಚಾರವಾಗಿ ಚಕ್ರವರ್ತಿ ಸುಲಿಬೆಲೆ ಪರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭರ್ಜರಿ ಬ್ಯಾಟಿಂಗ್ ನಡೆಸಿದರು. ಚಕ್ರವರ್ತಿ ಕೇಳುವುದರಲ್ಲಿ ತಪ್ಪೇನಿಲ್ಲ.
ಚಕ್ರವರ್ತಿ ಮೋದಿ ಪ್ರಧಾನಿಯಾಗಲಿ ಎಂದು ತಪಸ್ಸು ಮಾಡಿದ ವ್ಯಕ್ತಿ
ನಿಮ್ಮ ವೈಫಲ್ಯಗಳನ್ನ ಅವರ ಮೇಲೆ ಯಾಕೆ ಹಾಕ್ತಿರಿ. ಅವರ ವಿರುದ್ಧ ಟೀಕೆ ಮಾಡುವ ನೈತಿಕತೆ ನಿಮಗೆ ಇಲ್ಲ ಎಂದು ಸ್ವಪಕ್ಷೀಯ ಸಂಸದರು, ಮಂತ್ರಿಗಳ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಕೇಂದ್ರ ಸಚಿವರು ಪ್ರಧಾನಿ ಬಳಿ ಹೋಗಿ ಪರಿಹಾರ ಕೇಳಿ ತರಬೇಕು.
ಒಬ್ಬರು ಹುಬ್ಬಳ್ಳಿಯಲ್ಲಿ, ಇನ್ನೊಬ್ಬರು ಬೆಂಗಳೂರಿನಲ್ಲಿ ಕುಳಿತು ಏನ್ ಮಾಡ್ತಿದ್ದರೀ.
ಕರ್ನಾಟಕಕ್ಕೆ ೧೦ ಸಾವಿರ ಕೋಟಿ ತನ್ನಿ ಹೋಗಿ. ಇಲ್ಲೆ ಕುಳಿತು ಯಾರ್ಯಾರಿಗೋ ದೇಶದ್ರೋಹಿ ಎಂದು ಟೀಕೆ ಮಾಡ್ತೀರಿ ಎಂದು ಕೆಂದ್ರ ಸಚಿವರನ್ನ ಹಿಗ್ಗಾ ಮುಗ್ಗಾ ಜಾಡಿಸಿದರು.
ಇನ್ನು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ವಿರುದ್ಧವು ಯತ್ನಾಳ್ ವಾಗ್ದಾಳಿ ನಡೆಸಿದ ಅವರು, ದಕ್ಷಿಣ ಭಾರತದಲ್ಲಿ ಸಂಘಟನಾತ್ಮಕ ಚತುರರು, ವೀರರು, ಧೀರರು ಎಂದು ಹೇಳಿಕೊಳ್ಳುವವರು ಕೇರಳ, ಆಂಧ್ರ ಇನ್ ಚಾರ್ಜ್ ಇದ್ದಾಗ ಎಷ್ಟು ಸೀಟು ಗೆದ್ದು ತಂದ್ರು. ಒಂದೆ ಒಂದು ಎಂಪಿ ಗೆದ್ದು ಬರಲಿಲ್ಲ, ಬರೀ ಕಥೆ ಹೇಳಿ ಭಾಷಣ ಮಾಡಿದ್ರು. ಅಯ್ಯಪ್ಪ ಇಶ್ಯೂ ಇದ್ದಾಗಲು ಗೆಲ್ಲಲಿಲ್ಲ.. ಮಾಧ್ಯಮಗಳು ಜಾತಿ ಅಭಿಮಾನದಿಂದ ಅವರನ್ನೆ ಹೊಗಳಿದ್ದೀರಿ. ರಾಜ್ಯದಲ್ಲಿ ಯಡಿಯೂರಪ್ಪ, ಅನಂತಕುಮಾರ್ ಕಟ್ಟಿದ ಮನೆ ಇತ್ತು. ಮಕ್ಕಳು-ಮನೆ ಬಿಟ್ಟು ಇಬ್ಬರು ನಾಯಕರು ಪಕ್ಷ ಕಟ್ಟಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಬಿ ಎಸ್ ಸಂತೋಷ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಉದ್ದೇಶ ಇಟ್ಟುಕೊಂಡು ಯತ್ನಾಳ ಪಕ್ಷದ ವಿರುದ್ಧ ಮಾತನಾಡ್ತಾರೆ ಅಂತಾ ಹೇಳಿದ್ದ ಸಚಿವ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ನಾನೇ ಮಂತ್ರಿಯಾಗಬೇಕು ಅಂತ ಯಾರ ಕಾಲು ಹಿಡಿದಿಲ್ಲ. ಇದೇ ಖಾತೆ ಬೇಕು ಅಂತ ಸರ್ಕಾರಿ ಕಾರು ಬಿಟ್ಟು ಓಡಿ ಮನೆಗೆ ಹೋಗಿ ಮಕ್ಕೊಂಡಿಲ್ಲ.
ಅರ್ಹತೆ ಇದ್ರೆ ಸಚಿವ ಸ್ಥಾನ‌ ನೀಡ್ತಾರೆ. ವಾಜಪೇಯಿವರು ಅರ್ಹತೆ ಯಿಂದಲೇ ನನ್ನ ಮಂತ್ರಿ ಮಾಡಿದ್ದರು. ನೀವೆ ಮಾಧ್ಯಮಗಳಲ್ಲಿ ತೋರಿಸಿದ್ದರೀ ಎಂದು ಪರೋಕ್ಷವಾಗಿ ಸಿ ಟಿ ರವಿಗೆ ಟಾಂಗ್ ನೀಡಿದರು.
ಬೈಟ್ : ಬಸನಗೌಡ ಪಾಟೀಲ್ ಯತ್ನಾಳ, ವಿಜಯಪುರ ನಗರ ಶಾಸಕ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.