ETV Bharat / state

ವಿಜಯಪುರ ನಗರ ಕ್ಷೇತ್ರಕ್ಕೆ ಯತ್ನಾಳ್​​.. ಪಟ್ಟಣಶೆಟ್ಟಿಗೆ ಕೈ ತಪ್ಪಿದ ಟಿಕೆಟ್ - ಅಪ್ಪಾ ಸಾಹೇಬ್​ ಪಟ್ಟಣ ಶೆಟ್ಟಿ

ಮುದ್ದೇಬಿಹಾಳ ಕ್ಷೇತ್ರಕ್ಕೆ ಹಾಲಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಸಿಂದಗಿ‌ ಕ್ಷೇತ್ರಕ್ಕೆ ಸ್ಥಳೀಯ ಶಾಸಕ ರಮೇಶ ಭೂಸನೂರ ಹಾಗೂ ಬಬಲೇಶ್ವರ ಕ್ಷೇತ್ರದಲ್ಲಿ ಕಳೆದ ಬಾರಿ ಸೋಲು ಅನುಭವಿಸಿದ್ದ ವಿಜುಗೌಡ ಪಾಟೀಲ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

vijayapur
ಬಸನಗೌಡ ಪಾಟೀಲ‌ ಯತ್ನಾಳ್, ಅಪ್ಪಾ ಸಾಹೇಬ್​ ಪಟ್ಟಣಶೆಟ್ಟಿ
author img

By

Published : Apr 12, 2023, 11:33 AM IST

ವಿಜಯಪುರ: ವಿಜಯಪುರ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಅಪ್ಪಾ ಸಾಹೇಬ್​ ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ನಿರೀಕ್ಷೆಯಂತೆ ಸ್ಥಳೀಯ ಶಾಸಕ ಬಸನಗೌಡ ಪಾಟೀಲ‌ ಯತ್ನಾಳ್​ ಅವರಿಗೆ ಬಿಜೆಪಿ ಹೈ ಕಮಾಂಡ್​​ ಮಣೆ ಹಾಕಿದೆ. ಇದರ ಜತೆಗೆ ಇನ್ನೂ ಮೂರು ಕ್ಷೇತ್ರ ಗಳ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಮುದ್ದೇಬಿಹಾಳ ಕ್ಷೇತ್ರಕ್ಕೆ ಹಾಲಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಸಿಂದಗಿ‌ ಕ್ಷೇತ್ರಕ್ಕೆ ಸ್ಥಳೀಯ ಶಾಸಕ ರಮೇಶ ಭೂಸನೂರ ಹಾಗೂ ಬಬಲೇಶ್ವರ ಕ್ಷೇತ್ರದಲ್ಲಿ ಕಳೆದ ಬಾರಿ ಸೋಲು ಅನುಭವಿಸಿದ್ದ ವಿಜುಗೌಡ ಪಾಟೀಲ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

4 ಕ್ಷೇತ್ರದಲ್ಲಿ ಟಿಕೆಟ್​ ಘೋಷಣೆ ಬಾಕಿ: ದೇವರಹಿಪ್ಪರಗಿ‌ ಕ್ಷೇತ್ರದಲ್ಲಿ ಹೆಚ್ಚು ಕೇಳಿ ಬರುತ್ತಿದ್ದ ಹೆಸರು ಶಾಸಕ ಸೋಮನಗೌಡ ಪಾಟೀಲ, ಇಂಡಿ ಕ್ಷೇತ್ರದಲ್ಲಿ ಹಲವು ಅಭ್ಯರ್ಥಿಗಳು ಆಕಾಂಕ್ಷಿಯಾಗಿರುವ ಕಾರಣ ಕಾಯ್ದಿರಿಸಲಾಗಿದೆ.‌ ಇನ್ನುಳಿದ ಘೋಷಣೆ ಮಾಡಲಾಗದ ನಾಗಠಾಣ ಮೀಸಲು ಕ್ಷೇತ್ರದಲ್ಲಿ ಗೋವಿಂದ ಕಾರಜೋಳ ಪುತ್ರ ಗೋಪಾಲ‌ ಕಾರಜೋಳ ಹಾಗೂ ಸಂಸದ ರಮೇಶ ಜಿಗಜಿಣಗಿ ಹೆಸರು ಕೇಳಿ ಬಂದಿತ್ತು. ಬಸವನ ಬಾಗೇವಾಡಿಯಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹಾಗೂ ರಾಜುಗೌಡ ಪಾಟೀಲ ನಡುವೆ ಟಿಕೆಟ್ ಫೈಟ್ ಇರುವ ಕಾರಣ ಬಿಜೆಪಿ ಹೈಕಮಾಂಡ್​​ ನಾಲ್ಕು ಕ್ಷೇತ್ರದಲ್ಲಿ ಟಿಕೆಟ್​ ಕಾಯ್ದಿರಿಸಿದೆ. ಹೀಗಾಗಿ ವಿಜಯಪುರ ಜಿಲ್ಲೆಗೆ ಬಿಜೆಪಿ ಎರಡನೇ ಪಟ್ಟಿ ಹೆಚ್ಚು ಕೂತೂಹಲ ಕೆರಳಿಸಿದೆ.

vijayapur
ವಿಜಯಪುರದ ಮೂರು ಕ್ಷೇತ್ರ ಗಳ ಅಭ್ಯರ್ಥಿಗಳು

ಇದನ್ನೂ ಓದಿ: ಯತ್ನಾಳ್ ಬದಲು ಅಪ್ಪಾಸಾಹೇಬ ಪಟ್ಟಣಶೆಟ್ಟಿಗೆ ಟಿಕೆಟ್‌‌‌ ನೀಡುವಂತೆ ಒತ್ತಾಯ

ವಿಜಯಪುರ ಕ್ಷೇತ್ರ ನೋಟ: ರಾಜ್ಯದ ಹೈವೋಲ್ಟೇಜ್ ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯಪುರ ನಗರವೂ ಒಂದು. ಐತಿಹಾಸಿಕ ಸ್ಮಾರಕಗಳ ನಗರದ ಕದನ ಕಣವೇ ಬಲು ರೋಚಕ. ರಾಜ್ಯದಲ್ಲಿ ಬೇರೆ ಬೇರೆ ಕಾರಣದಿಂದಾಗಿ ಚುನಾವಣೆ ನಡೆದರೆ, ಇಲ್ಲಿ ಮಾತ್ರ ವಿಭಿನ್ನ ರಾಜಕಾರಣ ನಡೆಯುತ್ತಿರುತ್ತದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಅವರಿಂದಾಗಿ ಈ ಕ್ಷೇತ್ರ ಹೆಚ್ಚು ಗಮನ ಸೆಳೆಯುತ್ತಿರುತ್ತದೆ. ಈ ಹಿಂದೆ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಯತ್ನಾಳ್, 2018ರಲ್ಲಿ ಬಿಜೆಪಿ ಟಿಕೆಟ್ ಪಡೆದು ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸುಮಾರು 7 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ವಿರುದ್ಧ ಗೆಲುವು ಸಾಧಿಸಿದ್ದರು. ಇದೀಗ ಮತ್ತೆ ಚುನಾವಣೆ ಅಖಾಡ ರೆಡಿಯಾಗಿದೆ.

ವಿಜಯಪುರ ನಗರದಲ್ಲಿ ಸದ್ಯ ಬಿಜೆಪಿಯ ಪ್ರಾಬಲ್ಯವಿದ್ದರೂ ಪಕ್ಷ ಸಂಘಟನೆ ಅಚ್ಚುಕಟ್ಟಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್​ಗಾಗಿ ಮಾಜಿ ಸಚಿವ ಅಪ್ಪಾ ಸಾಹೇಬ್ ಪಟ್ಟಣಶೆಟ್ಟಿ, ಸುರೇಶ ಬಿರಾದಾರ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್​ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಕೊನೆಯಲ್ಲಿ ಟಿಕೆಟ್​ ದಕ್ಕಿಸಿಕೊಂಡ ಯತ್ನಾಳ್, ಗೆದ್ದು ಬಂದರು. ಈ ಬಾರಿ ಕೂಡ ಪಕ್ಷದ ಟಿಕೆಟ್​ಗಾಗಿ ಹಾಲಿ ಶಾಸಕ ಯತ್ನಾಳ್​ ಸೇರಿದಂತೆ ಅಪ್ಪಾ ಸಾಹೇಬ್ ಪಟ್ಟಣಶೆಟ್ಟಿ, ಸುರೇಶ್ ಬಿರಾದಾರ ಬೇಡಿಕೆ ಇಟ್ಟಿದ್ದರು. ಕೊನೆಗೂ ಯತ್ನಾಳ್​ ಟಿಕೆಟ್​ ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿಜಯಪುರ ನಗರ ಕ್ಷೇತ್ರದ ಟಿಕೆಟ್‌ಗಾಗಿ ಬಿಜೆಪಿ, ಕಾಂಗ್ರೆಸ್‌ನಲ್ಲಿ ಪೈಪೋಟಿ; ಜೆಡಿಎಸ್‌ನಿಂದ ಕಾದು ನೋಡುವ ತಂತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.