ETV Bharat / state

ಡಿ.ಸಿಎಂ ಹುದ್ದೆಯಿಂದ ಟ್ರಾಫಿಕ್​ ಜಾಮ್​ ಹೆಚ್ಚಾಗುತ್ತೆ ಅಷ್ಟೇ: ಬಸನಗೌಡ ಯತ್ನಾಳ್​ - Basana Gowda pateel Yatnal Appeal to minister position

ಉಪಚುನಾವಣೆಯಲ್ಲಿ ಅಥಣಿ ಸೇರಿದಂತೆ ಕೆಲವು ಕ್ಷೇತ್ರದಲ್ಲಿ ಮೊದಲು ನಕಾರಾತ್ಮಕ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ನೀರಾವರಿ ವಿಚಾರವಾಗಿ ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ. ಕೆ. ಆರ್ ಪೇಟೆ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಖಾತೆ ತೆರೆದಿರುವುದಕ್ಕೆ ಯಡಿಯೂರಪ್ಪ ಅವರ ಪ್ರಚಾರವೇ ಕಾರಣ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ.

Basana Gowda pateel Yatnal
Basana Gowda pateel Yatnal
author img

By

Published : Dec 12, 2019, 6:08 PM IST

ವಿಜಯಪುರ: ಉಪಚುನಾವಣೆಯಲ್ಲಿ ಅಥಣಿ ಸೇರಿದಂತೆ ಕೆಲವು ಕ್ಷೇತ್ರದಲ್ಲಿ ಮೊದಲು ನಕಾರಾತ್ಮಕ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ನೀರಾವರಿ ವಿಚಾರವಾಗಿ ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ. ಕೆ. ಆರ್ ಪೇಟೆ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಖಾತೆ ತೆರೆದಿರುವುದಕ್ಕೆ ಯಡಿಯೂರಪ್ಪ ಅವರ ಪ್ರಚಾರವೇ ಕಾರಣ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಸನಗೌಡ ಯತ್ನಾಳ್​

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೆ ಸಚಿವ ಸ್ಥಾನ ನೀಡುವುದು, ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ನನಗೆ ಜವಾಬ್ದಾರಿ ಕೊಟ್ಟು ಸಚಿವ ಸ್ಥಾನ ನೀಡಿದ್ರೆ, ಉತ್ತಮವಾಗಿ ಕೆಲಸ ಮಾಡುತ್ತೇನೆ. ಇಲ್ಲದಿದ್ರೆ ಕಾರ್ಯಕರ್ತನಾಗಿ‌ ಕೆಲಸ ಮಾಡುವೆ. ಮೊದಲು ಉಪ ಚುನಾವಣೆಯಲ್ಲಿ ಗೆದ್ದವರಿಗೆ ಅವಕಾಶ ನೀಡಲಿ. ಜನರ ಮನಸ್ಸಿನಲ್ಲಿ ನಾನು‌ ಇದ್ದೇನೆ. ನಾನು ಪ್ರಚಾರ ಮಾಡಿದ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ರು.

ರಾಜ್ಯದಲ್ಲಿ ಡಿಸಿಎಂ ಹುದ್ದೆ ಹೆಚ್ಚಾಗಬಾರದು. ಹೆಚ್ಚು ಡಿಸಿಎಂ ಹುದ್ದೆಗಳಿಂದ ಟ್ರಾಫಿಕ್​ ಸಮಸ್ಯೆ ಉಂಟಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಕಿರುಕುಳವಾಗುತ್ತದೆ. ಸಿಎಂ ಯಡಿಯೂರಪ್ಪನವರಿಗೆ ಎಲ್ಲವನ್ನು ನಿಭಾಯಿಸುವ ಸಾಮರ್ಥ್ಯವಿದೆ. ಜಲ ಸಂಪನ್ಮೂಲ ಖಾತೆ ಉತ್ತರ ಕರ್ನಾಟಕಕ್ಕೆ ಸಿಕ್ಕರೆ ಅನುಕೂಲವಾಗುತ್ತದೆ. ಈ ಭಾಗದ ನೀರಾವರಿ ಕಾಮಗಾರಿಗಳು, ಕೃಷ್ಣ ಮೇಲ್ದಂಡೆ ಯೋಜನೆಗೆ ಅನುಕೂಲವಾಗುತ್ತದೆ. ಹೀಗಾಗಿ ಉತ್ತರ ಕರ್ನಾಟಕಕ್ಕೆ ನೀರಾವರಿ ಖಾತೆ ನೀಡಿದ್ರೆ ಒಳ್ಳೆಯದು ಎಂದರು.

ರಾಷ್ಟ್ರೀಯ ಪೌರತ್ವ ಕಾಯ್ದೆ ಜಾರಿಗೆ ಬೆಂಬಲ ಕುರಿತು ಮಾತನಾಡಿದ ಶಾಸಕ ಬಸನಗೌಡ ಯತ್ನಾಳ, ಪಾಕಿಸ್ತಾನ ಇಬ್ಭಾಗವಾದಾಗ ಲಕ್ಷಾಂತರ ಹಿಂದೂಗಳ ಕಗ್ಗೊಲೆ ಆಯಿತು. ನಂತರ ಅಲ್ಲಿ ಹಿಂದೂಗಳ ಸಂಖ್ಯೆ ಇಳಿಕೆಯಾದೆ. ಇಂತಹ ದೌರ್ಜನ್ಯಕ್ಕೆ ಒಳಗಾದವರಿಗೆ ಈ ಕಾಯ್ದೆ ಅನುಕೂಲವಾಗಲಿದೆ. ಯಾವುದೇ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದರೆ ಈ ಕಾಯ್ದೆ ಅವರಿಗೆ ಅನುಕೂಲವಾಗಲಿದೆ. ಉಪಚುನಾವಣೆಯಲ್ಲಿ ಸೋತ ಕಾರಣಕ್ಕೆ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ಮುಗಿಯುವುದಿಲ್ಲ, ಒಂದು ಚುನಾವಣೆಯಲ್ಲಿ ಸೋತರೆ ರಾಜಕೀಯ ಮುಗಿಯುವುದಿಲ್ಲ ಎಂದು ಭಾವಿಸಿದರು.

Intro:ವಿಜಯಪುರ : ಕೈ ಶಾಸಕಿ ಲಕ್ಷ್ಮೀ ಹೆಬಾಳ್ಕರ್ ಡ್ಯಾಷ್ ಡ್ಯಾಷ್ ಹೇಳಿದ್ರೆ ನಾನು ಕೂಡ‌ ಡ್ಯಾಷ ಡ್ಯಾಷ ಹೇಳುವೆ ಡ್ಯಾಷ ಡ್ಯಾಷ ಪುಲ್ ಪುಲ್ ಮಾಡುವೆ ಉಪ ಚುನಾವಣೆಯಲ್ಲಿ ಜನತೆ ಸ್ಥರ ಸರ್ಕಾರಕ್ಕೆ ನಾಂದಿ ಹಾಡಿದ್ದಾರೆ ಮತದಾರರಿಗೆ ಧನ್ಯವಾದಗಳನ್ನು ಹೇಳುವೆ ಎಂದು ಶಾಸಕ ಬಸನಗೌಡ ಯತ್ನಾಳ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.ಅಥಣಿ ಸೇರಿದಂತೆ ಕೆಲವು ಕ್ಷೇತ್ರದಲ್ಲಿ ಮೊದಲು ನಕಾರಾತ್ಮಕವಾಗಿ ವಾತಾವರಣ ಉಂಟಗಾಗಿತು. ಬಳಿಕ ನೀರಾವರಿ ವಿಚಾರವಾಗಿ ಮತದಾನರು ಬಿಜೆಪಿಗೆ ಮತ ಹಾಕಿದ್ರು,ಕೆ ಆರ್ ಪೇಟೆಯಲ್ಲಿ ಬಿಜೆಪಿ ಖಾತೆ ತೆರೆದಿದೆ ಜೊತೆ ಚಿಕ್ಕ ಬಳ್ಳಾಪುರದಲ್ಲಿ ಜಿಜೆಪಿ ಖಾತೆ ತೆರೆದಿರೋದಕ್ಕೆ ಕಾರಣ ಯಡಿಯೂರಪ್ಪ ಅವರ ಪ್ರಚಾವಿದೆ ಎಂದು ಶಾಸಕ ಬಸನಗೌಡ ಯತ್ನಾಳ ಹೇಳಿದ್ದಾರೆ.

Body:ನಗರದಲ್ಲಿ ಮಾಧ್ಯಮಗಳೊಂದಿಗೆ ಮಾಡನಾಡಿದ ಶಾಸಕ ಬಸನಗೌಡ ಯತ್ನಾಳ, ಪ್ರಪಂಚದಲ್ಲಿ ಭಾರತ ಅತ್ಯಾಚಾರಿಗಳ ದೇಶವಾಗಿದೆ ಎಂದ ರಾಹುಲ್ ಗಾಂಧಿಗೆ ತಿರುಗೆಟ್ಟು ನೀಡಿದ ಶಾಸಕ ಯತ್ನಾಳ, ರಾಹುಲ್ ಗಾಂಧಿಗೆ ಮಾನ ಮರ್ಯಾದೆ ಇಲ್ಲ, ಹಾಗಾಗಿ ಪಾಕಿಸ್ತಾನದ ಏಜೆಂಟ್ ಹಾಗೆ ಮಾಡ್ತಾನೆ. ಅದ್ಕಾಗಿ ರಾಹುಲ್ ಗಾಂಧಿಗೆ ಏನು ಗೌರವ ಉಳಿದಿಲ್ಲ,ರಾಹುಲ್ ಗಾಂಧಿ ತನ್ನ ಮರ್ಯಾದೆ ಕಳೆದುಕೊಂಡು ಕಾಂಗ್ರೆಸ್ ನೆನಸಮ ಮಾಡುದ್ದಾನೆ. ನಿನ್ನೆ ರಾಜ್ಯಸಭೆಯಲ್ಲಿ ಚಿದಂಬರಂ ಗೆ ನಯತಿಕತೆವಿಲ್ಲ ಎರಡು ತಿಂಗಳು‌‌ ಜೈಲಿನಲ್ಲಿ ಬಿಂದು ಮತ್ತೆ ದೇಶ ವಿರುದ್ದವೇ ಮಾಡ್ತಾರೆ. ಕಾಂಗ್ರೆಸ್ ಪಕ್ಷ ಭಾರತದ ಪಾಕಿಸ್ತಾನದ ಕಾಂಗ್ರೆಸ್ ಆಗಿ ಪರಿವರ್ತನೆಯಾಗಿದೆ,ಅದ್ಕೆ ಪಾಕಿಸ್ತಾನದ ಕಾಂಗ್ರೆಸ್ ಎಂದ್ರೆನೆ ಒಳ್ಳೆಯದು ಎಂದು ಶಾಸಕ ಯತ್ನಾಳ ಕಾಂಗ್ರೆಸ್ ಪಕ್ಷದ ವಿರುದ್ದ ಹರಿಹಾಯ್ದರು..

ರಾಜ್ಯದಲ್ಲಿ ಡಿಸಿಎಂ ಹುದ್ದೆ ಹೆಚ್ಚಾಗಬಾರದು,ಹೆಚ್ಚು ಡಿಸಿಎಂ ಹುದ್ದೆಗಳಿಂದ ಟ್ರಾಫಿಕ ಸಮಸ್ಯೆಯಾಗುತ್ತೆ ಪೋಲಿಸ್ ಸಿಬ್ಬಂದಿ ಕೂಡ ಹೆಚ್ಚಾಗಿ ಸೆಕ್ಯೂರಿಟಿ ನಿಯೋಜಿಸಬೇಕಾಗುತ್ತದೆ,ಇದರಿಂದ ಸಾರ್ವಜನಿಕರಿಗೆ ಕಿರುಕುಳವಾಗುತ್ತೆ ಸಿಎಂ ಯಡಿಯೂರಪ್ಪ ಎಲ್ಲವನ್ನು ನಿಭಾಯಿಸುವ ಸಾಮರ್ಥ್ಯವಿದೆ.ಡಿಸಿಎಂ ಬದಲಾಗಿ ಕ್ಯಾಬಿನೆಟ್ ಸಚಿವರಾಗಿ ಉತ್ತಮ ಕೆಲಸ ಮಾಡಿದ್ರೆ ಜನರಿಗೆ ಅನುಕೂಲ ಇನ್ನೂ ಜಲ ಸಂಪನ್ಮೂಲ ಖಾತೆ ಉತ್ತರ ಕರ್ನಾಟಕಕ್ಕೆ ಸಿಕ್ಕರೆ ಅನುಕೂಲವಾಗುತ್ತೆ, ಈ ಭಾಗದ ನೀರಾವರಿ ಕಾಮಗಾರಿಗಳು ಆಗುತ್ತವೆ ಇನ್ನೂ ಕೃಷ್ಣ ಮೇಲ್ದಂಡೆ ಯೋಜನೆಗೆ ಅನುಕೂಲವಾಗುತ್ತೆ ಹೀಗಾಗಿ ಉತ್ತರ ಕರ್ನಾಟಕಕ್ಕೆ ನೀರಾವರಿ ಖಾತೆ ನೀಡಿದ್ರೆ ಒಳ್ಳೆದು ಎಂದು ಶಾಸಕ ಯತ್ನಾಳ ಅಭಿಪ್ರಾಯಸಿದರು.

ಇನ್ನೂ ಉಪಚುನಾವಣಾ ವಿಚಾರವಾಗಿ ಮಾತನಾಡಿದ ಶಾಸಕ ಯತ್ನಾಳ, ಉಪ ಚುನಾವಣೆಯಲ್ಲಿ ಕೇವಲ ಯಡಿಯೂರಪ್ಪ ಬಲದಿಂದ ಗೆದ್ದಿಲ್ಲ, ಬದಲಾಗಿ ಎಲ್ಲರ ಬಲದಿಂದ ಗೆಲವುವಾಗಿದೆ, ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಪಕ್ಷದ ರಾಷ್ಟ್ರೀಯ ಹಿರಿಯರ ಮಾರ್ಗದರ್ಶನದಲ್ಲಿ ‌ಉಪಚುನಾವಣೆಯಲ್ಲಿ ಗೆಲವುವಾಗಿದೆ.ರಾಜ್ಯದಲ್ಲಿ ಯಡಿಯೂರಪ್ಪ ದೊಡ್ಡ ಶಕ್ತಿಯಾಗಿದ್ದಾರೆ. ಉಪ ಚುನಾವಣೆಯಲ್ಲಿ ಗೆಲವು ಸಾಧಿಸದ್ದಕ್ಕಾಗಿ ಪ್ರಧಾನಿಯವರು ಯಡಿಯೂರಪ್ಪ ಅವರಿಗೆ ಗೌರವ ನೀಡಿದ್ದಾರೆ.

ರಾಷ್ಟ್ರೀಯ ಪೌರತ್ವ ಕಾಯ್ದೆ ಜಾರಿಗೆ ಬೆಂಬಲ ಕುರಿತು ಮಾತನಾಡಿದ ಶಾಸಕ ಬಸನಗೌಡ ಯತ್ನಾಳ ಪಾಕಿಸ್ತಾನ ಇಬ್ಬಾಗವಾಗದಾಗ ಲಕ್ಷಾಂತರ ಹಿಂದೂಗಳ ಕಗ್ಗೊಲೆ ಆಯಿತು ನಂತರ ಅಲ್ಲಿ ಹಿಂದೂಗಳ ಸಂಖ್ಯೆ ಇಳಿಕೆಯಾದೆ. ಇಂಥ ದೌರ್ಜನ್ಯ ಒಳಗಾದವರಿಗೆ ಈ ಕಾಯ್ದೆ ಅನುಕೂಲವಾಗಲಿದೆ. ಯಾವುದೇ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದರೆ ಈ ಕಾಯ್ದೆ ಅವರಿಗೆ ಅನುಕೂಲವಾಗಲಿದೆ. ಉಪಚುನಾವಣೆಯಲ್ಲಿ ಪರಾಜಯದ ಕಾರಣ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ಮುಗಿಯುದಿಲ್ಲ,ಒಂದು ಚುನಾವಣೆಯಲ್ಲಿ ಸೋತರೆ ರಾಜಕೀಯ ಮುಗಿಯುದಿಲ್ಲ ಅವರ ಯುಗಾಂತ್ಯವೆಂದು ಎಂದು ಭಾವಿಸುವುದು ಸರಿಯಲ್ಲ

Conclusion:ಇನ್ನೂ ನನಗೆ ಸಚಿವ ಸಂಪುಟದ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡುವುದು ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ನನಗೂ ಜವಬ್ದಾರಿ ಕೊಟ್ಟು ಸಚಿವ ಸ್ಥಾನ ನೀಡಿದ್ರೆ ಉತ್ತಮವಾಗಿ ಕೆಲಸ ಮಾಡುವೆ,ಇಲ್ಲವಾದ್ರೂ ಕಾರ್ಯಕರ್ತನಾಗಿ‌ ಕೆಲಸ ಮಾಡುವೆ. ಮೊದಲು ಉಪ ಚುನಾವಣೆಯಲ್ಲಿ ಗೆದ್ದವರಿಗೆ ಅವಕಾಶ ನೀಡಲಿ,ಜನರ ಮನಸಿನಲ್ಲಿ ನಾನು‌ ಇದ್ದೇನಿ ನಾನು ಪ್ರಚಾರ ಮಾಡಿದ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ‌ ಬಸನಗೌಡ ಯತ್ನಾಳ ಮಾಧ್ಯಮಗಳಿ ಪ್ರತಿಕ್ರಿಯಿಸಿದರು..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.