ETV Bharat / state

ಮುದ್ದೇಬಿಹಾಳ: ಡಿಸಿಎಂ ಕಾರಜೋಳಗೆ ಧಿಕ್ಕಾರ ಕೂಗಿದ ಬಂಜಾರ ಸಮುದಾಯದ ಮುಖಂಡರು - ಬಂಜಾರ ಸಮಾಜದ ಮುಖಂಡ ಎಸ್.ಪಿ.ಸೇವಾಲಾಲ್

ಡಿಸಿಎಂ ಗೋವಿಂದ ಕಾರಜೋಳ ಅವರು ಬಂಜಾರರನ್ನು ಎಸ್​​ಸಿ ಪಟ್ಟಿಯಿಂದ ಕೈ ಬಿಡುವಂತೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಬಂಜಾರ ಸಮಾಜದ ಮುಖಂಡ ಎಸ್.ಪಿ.ಸೇವಾಲಾಲ್ ಆರೋಪಿಸಿದ್ದಾರೆ.

Banjara community people strike against Govinda karjola
ಡಿಸಿಎಂ ಕಾರಜೋಳಗೆ ಧಿಕ್ಕಾರ ಕೂಗಿದ ಬಂಜಾರ ಜನಾಂಗ..
author img

By

Published : Jun 10, 2020, 6:47 PM IST

Updated : Jun 10, 2020, 10:12 PM IST

ಮುದ್ದೇಬಿಹಾಳ(ವಿಜಯಪುರ): ತಾಲೂಕಿನ ರೂಢಗಿ ತಾಂಡಾದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಬಂಜಾರ ಸಮುದಾಯದವರ ವಿರುದ್ಧ ಸಂವಿಧಾನ ವಿರೋಧಿ ನಿಲುವು ಅನುಸರಿಸುತ್ತಿದ್ದಾರೆ ಎಂದು ತಾಂಡದ ಜನ ಆರೋಪಿಸಿದ್ದಾರೆ.

ಲಂಬಾಣಿ ಜನಾಂಗವನ್ನು ಎಸ್​​ಸಿ ಪಟ್ಟಿಯಿಂದ ಕೈಬಿಡದಂತೆ ಸರ್ಕಾರ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿ ಹಮ್ಮಿಕೊಂಡಿದ್ದ ಪತ್ರ ಚಳವಳಿ ಪ್ರತಿಭಟನೆಯಲ್ಲಿ ಬಂಜಾರ ಸಮಾಜದ ಮುಖಂಡ ಎಸ್.ಪಿ.ಸೇವಾಲಾಲ್ ಮಾತನಾಡಿದರು. ಡಿಸಿಎಂ ಗೋವಿಂದ ಕಾರಜೋಳ ಅವರು ಬಂಜಾರರನ್ನು ಎಸ್​​ಸಿ ಪಟ್ಟಿಯಿಂದ ಕೈ ಬಿಡುವಂತೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಡಿಸಿಎಂ ವಿರುದ್ಧ ಧಿಕ್ಕಾರ ಕೂಗಿದರು.

ಡಿಸಿಎಂ ಕಾರಜೋಳಗೆ ಧಿಕ್ಕಾರ ಕೂಗಿದ ಬಂಜಾರ ಸಮುದಾಯದ ಮುಖಂಡರು

ಮುದ್ದೇಬಿಹಾಳದಿಂದ ಸಿಎಂಗೆ 6500 ಪತ್ರ ಪೋಸ್ಟ್: ಲಂಬಾಣಿ ಜನಾಂಗವನ್ನು ಎಸ್​​ಸಿ ಪಟ್ಟಿಯಿಂದ ಕೈ ಬಿಡದಂತೆ ಆಗ್ರಹಿಸಿ ಬಂಜಾರ ಜನಾಂಗದವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ 6500 ಪತ್ರಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡ ಲಕ್ಷಣ ಲಮಾಣಿ, ಕೆಲವರ ಹುನ್ನಾರದಿಂದ ಎಲ್ಲಾ ರಂಗಗಳಲ್ಲೂ ಹಿಂದುಳಿದಿರುವ ಬಂಜಾರ, ಕೊರಮ, ಭೋವಿ ಜನಾಂಗದವರನ್ನು ಮೀಸಲಾತಿ ಪಟ್ಟಿಯಿಂದ ತೆಗೆಯುವ ಕುತಂತ್ರ ನಡೆದಿದೆ. ಇದನ್ನು ಪರಿಗಣಿಸದೆ ಎಸ್​​​ಸಿ ಪಟ್ಟಿಯಲ್ಲಿ ಮುಂದುವರೆಸಬೇಕು ಎಂದು ಹೇಳಿದರು.

Last Updated : Jun 10, 2020, 10:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.