ETV Bharat / state

ಕೊರೊನಾ ವಾರಿಯರ್ಸ್‌ ಮೇಲೆ ಹಲ್ಲೆ ಮಾಡುವವರು ಮನುಷ್ಯರೇ ಅಲ್ಲ: ಎಂ.ಬಿ ಪಾಟೀಲ್​​ ಕಿಡಿ

ಎಲ್ಲದಕ್ಕೂ ಒಂದು ಇತಿ-ಮಿತಿ ಇದೆ, ಇದನ್ನ ಸಹಿಸಿಕೊಳ್ಳಲು ಆಗಲ್ಲ. ಅನಕ್ಷರಸ್ಥ, ಮುಗ್ದ ಜನರಿಗೆ ಅಲ್ಲಿನ ಮುಖಂಡರು, ಕಾರ್ಪೋರೇಟರ್​​ಗಳು ತಿಳಿ ಹೇಳಬೇಕು ಎಂದು ಬೆಂಗಳೂರಿನ ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಂ.ಬಿ. ಪಾಟೀಲ್​ ಪ್ರತಿಕ್ರಿಯಿಸಿದ್ದಾರೆ.

MB Patil
ಎಂ.ಬಿ ಪಾಟೀಲ್​​
author img

By

Published : Apr 20, 2020, 5:28 PM IST

ವಿಜಯಪುರ: ಬೆಂಗಳೂರಿನ ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್​ ಪ್ರತಿಕ್ರಿಯೆ ನೀಡಿದ್ದು, ಕೊರೊನಾ ವಾರಿಯರ್ಸ್‌ ಮೇಲೆ ಹಲ್ಲೆ ಮಾಡುವವರು ಮನುಷ್ಯರೇ ಅಲ್ಲ.ಇದೊಂದು ಅಸಹ್ಯ ಹಾಗೂ ಹೇಸಿಗೆ ಕೆಲಸ ಎಂದಿದ್ದಾರೆ.

ಎಂ.ಬಿ. ಪಾಟೀಲ್

ನಂತರ ಮಾತು ಮುಂದುವರೆಸಿದ ಅವರು, ಜನರು ಕೂಡ ಇಂತವರನ್ನ ಕ್ಷಮಿಸಬಾರದು. ಕಾನೂನಾತ್ಮಕ ಅತಿ ಕಠಿಣವಾದ ಶಿಕ್ಷೆ ನೀಡಬೇಕು, ಎಲ್ಲದಕ್ಕೂ ಒಂದು ಇತಿ-ಮಿತಿ ಇದೆ, ಇದನ್ನ ಸಹಿಸಿಕೊಳ್ಳಲು ಆಗಲ್ಲ. ಅನಕ್ಷರಸ್ಥ, ಮುಗ್ದ ಜನರಿಗೆ ಅಲ್ಲಿನ ಮುಖಂಡರು, ಕಾರ್ಪೊರೇಟರ್​ಗಳು ತಿಳಿ ಹೇಳಬೇಕು ಎಂದು ಸಲಹೆ ನೀಡಿದರು.

ಇಂಥ ಘಟನೆಗಳು ಮರುಕಳಿಸಬಾರದು. ಜೀವ ಒತ್ತೆ ಇಟ್ಟು ವಾರಿಯರ್ಸ್ ಕೆಲಸ ಮಾಡ್ತಿದ್ದಾರೆ ಎಂದ ಅವರು, ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಕೊರೊನಾ ಸೋಂಕು ತಗಲುತ್ತಿದ್ದು, ದಿನದಿಂದ ದಿನಕ್ಕೆ ವೈದ್ಯರ ಸಂಖ್ಯೆ ಕಡಿಮೆ ಆಗ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಾಳೆ ವೈದ್ಯರೇ ಹಿಂದೆ ಸರಿದರೆ ಏನ್ ಮಾಡ್ತೀರಿ? ವೈದ್ಯರು ಚಿಕಿತ್ಸೆ ನೀಡಲ್ಲ ಎಂದು ಹಿಂದೆ ಸರಿದರೆ ಅದೊಂದು ದೊಡ್ಡ ಅನಾಹುತವಾಗಲಿದೆ ಎಂದ ಎಚ್ಚರಿಸಿದ ಅವರು, ತಪ್ಪು ಮಾಡಿದವರು ಯಾವುದೇ ಧರ್ಮದವರು ಆಗಿದ್ರೂ ಕಠಿಣ ಕ್ರಮವಾಗಲೇಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.