ವಿಜಯಪುರ: ಬಸ್ ನಿಲ್ಲಿಸದ ಕಾರಣ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಜೋಡಗುಡಿ ಬಳಿ ನಡೆದಿದೆ.
ಹಣುಮಂತ ಕೆಂಬಾವಿ ಥಳಿತಕ್ಕೊಳಗಾದ ಚಾಲಕ ಎಂದು ತಿಳಿದು ಬಂದಿದೆ. ಸೈಫನ್ ಸಾಬ್ ನದಾಫ್ ಸೇರಿದಂತೆ ಇತರರು ಈತನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಗಾಯಗೊಂಡ ಹಣುಮಂತನನ್ನು ಇದೀಗ ತಡವಲಗಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂಡಿಯಿಂದ ಮಹಾರಾಷ್ಟ್ರದ ಸತಾರಾ ಕಡೆಗೆ ಹೊರಟಿದ್ದ ಸರ್ಕಾರಿ ನಾನ್ಸ್ಟಾಪ್ ಬಸ್ಗೂ ಕೈ ಮಾಡಿ ನಿಲ್ಲಿಸುವಂತೆ ಹೇಳಿದ್ದರು. ನಾನ್ಸ್ಟಾಪ್ ಆಗಿದ್ದರಿಂದ ಚಾಲಕ ಬಸ್ಅನ್ನು ನಿಲ್ಲಿಸದೇ ಹಾಗೇ ಹೋಗಿದ್ದ. ಇದರಿಂದ ರೊಚ್ಚಿಗೆದ್ದ ಕಿಡಿಗೇಡಿಗಳು ಬಸ್ಅನ್ನು ಬೆನ್ನಟ್ಟಿದ್ದಲ್ಲದೇ ಅದಕ್ಕೆ ಕಲ್ಲು ಎಸೆದಿದ್ದಾರೆ. ಇದನ್ನು ಪ್ರಶ್ನಿಸಿದ ಬಸ್ ಚಾಲಕನ ಮೇಲೆ ಹಲ್ಲೆ ಸಹ ಮಾಡಿದ್ದಾರೆ ಎನ್ನಲಾಗುತ್ತಿದೆ.
ಈ ಸಂಬಂಧ ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.