ETV Bharat / state

ಪಾಕಿಸ್ತಾನ ಪರ ಪೋಸ್ಟ್​ ಮಾಡಿದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಪೈಲ್ವಾನ್ ಮೇಲೆ ಹಲ್ಲೆ - ಈಟಿವಿ ಭಾರತ್​ ಕರ್ನಾಟಕ

ವಾಟ್ಸಪ್​ನಲ್ಲಿ ಪಾಕಿಸ್ತಾನ ಪರ ಪೊಸ್ಟ್​ ಹಾಕಿದ್ದಕ್ಕೆ ವಿರೋಧಿಸಿದವರನ್ನು ಅಪಹರಿಸಿ ಹಲ್ಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

attack for opposition Pakistan releted post
ಪಾಕಿಸ್ತಾನ ಪರ ಪೋಸ್ಟ್​ ಮಾಡಿದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಪೈಲ್ವಾನ್ ಮೇಲೆ ಹಲ್ಲೆ
author img

By

Published : Aug 27, 2022, 2:47 PM IST

ವಿಜಯಪುರ: ಪಾಕಿಸ್ತಾನದ ಪರ ವಾಟ್ಸಪ್ ಪೈಲಾನ್ ಗ್ರೂಪ್​ನಲ್ಲಿ ಹಾಕಲಾಗಿದ್ದ ವಿವಾದಾತ್ಮಕ ಪೋಸ್ಟ್​ನ್ನು ಪ್ರಶ್ನಿಸಿದ್ದಕ್ಕೆ ಪೈಲ್ವಾನ್​ ಒಬ್ಬರನ್ನು ಅಪಹರಿಸಿ ಮಾರಣಾಂತಿಕ‌ವಾಗಿ ಹಲ್ಲೆ ನಡೆಸಿರುವ ಆರೋಪ ಪ್ರಕರಣ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಡೆದಿರುವದು ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಎರಡು ತಿಂಗಳ ಹಿಂದೆ ಪೈಲ್ವಾನ್ ಗ್ರೂಪ್​ನಲ್ಲಿ ಪಾಕಿಸ್ತಾನ ಹಸಿರು ಸಿಂಹ ಪೋಸ್ಟ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪೈಲ್ವಾನ್ ಉಮೇಶ ಎಂಬವರನ್ನು 20 ಜನರ ತಂಡ ಅಪಹರಿಸಿ ಮನಸೋಇಚ್ಛೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಎರಡು ತಿಂಗಳ ಹಿಂದೆ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ತುರ್ಕ ಆಸಂಗಿ ಗ್ರಾಮದ ಅಪ್ಜಲ್ ಖಾನ್ ಮುಜಾವರ ಎಂಬ ಪೈಲ್ವಾನ್ ಹಸಿರು ಸಿಂಹದ ಫೋಟೋ ಪೋಸ್ಟ್ ಮಾಡಿದ್ದರು ಎನ್ನಲಾಗ್ತಿದೆ.‌

ಪಾಕಿಸ್ತಾನ ಪರ ಪೋಸ್ಟ್​ ಮಾಡಿದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಪೈಲ್ವಾನ್ ಮೇಲೆ ಹಲ್ಲೆ

ಇದನ್ನು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಇನ್ನೊಬ್ಬ ಪೈಲ್ವಾನ ಉಮೇಶ ಹರಗಿ ಪ್ರಶ್ನಿಸಿದ್ದನು. ಆಗ ಇಬ್ಬರಲ್ಲೂ ವಾದ-ವಿವಾದ ನಡೆದಿತ್ತು. ಅದೇ ಕೋಪದಲ್ಲಿ ಉಮೇಶ ಹರಗಿಯನ್ನು ಪೈಲ್ವಾನ್ ಅಫ್ಜಲ್ ಖಾನ್ ಮತ್ತು ಸಹಚರರು ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ದಾರಂತೆ.

ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿ ರಸ್ತೆ ಮೇಲೆ ಎಸೆದು ಪರಾರಿಯಾಗಿದ್ದರು. ಸದ್ಯ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಪೈಲ್ವಾನ್ ಉಮೇಶ ಚಿಕಿತ್ಸೆ ಪಡೆಯುತ್ತಿದ್ದಾರೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಪುಡಿರೌಡಿಗಳ ಹಾವಳಿ: ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.