ವಿಜಯಪುರ: ಜಿಲ್ಲೆಯ ದೇವರ ಹಿಪ್ಪರಗಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ 19 ಕೆ.ಜಿ ಮಾವಾ ಹಾಗೂ ಇದನ್ನು ತಯಾರಿಸಲು ಬಳಸುವ ಕಚ್ಚಾ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ದೇವರ ಹಿಪ್ಪರಗಿ ಪಟ್ಟಣದ ಮುಬಾರಕ ಮಕ್ಬುಲ್ ಬಾಗವಾನ(28), ಬಬಲು ಉರ್ಫ್ದ ದಸ್ತಗೀರ್ ಇಸ್ಮಾಯಿಲ್ ದಫೇದಾರ(22) ಬಂಧಿತ ಆರೋಪಿಗಳು ಎಂದು ವಿಜಯಪುರ ಎಸ್ಪಿ ಅನುಪಮ ಅಗರ್ವಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಡಿಕೆ ಚೂರು ತುಂಬಿದ 360 ಕೆ.ಜಿ ಪ್ಲಾಸ್ಟಿಕ್ ಚೀಲಗಳು, 40 ಕೆ.ಜಿ ತಂಬಾಕು ಮಿಶ್ರಿತ ಅಡಿಕೆ, 12 ಕೆ.ಜಿ ಸುಣ್ಣ, ಒಂದು ಮಿಕ್ಸರ್ ಸೇರಿ ಒಟ್ಟು1,61,420 ರೂ. ಮೌಲ್ಯದ ನಾನಾ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.