ETV Bharat / state

ಹಳ್ಳ ತುಂಬಿಸುವ ಯೋಜನೆಗೆ ಅಸ್ತು: ಮಾಜಿ ಸಚಿವರ ಹುಟ್ಟುಹಬ್ಬಕ್ಕೆ ರಾಜ್ಯ ಸರ್ಕಾರದ ಗಿಫ್ಟ್​

ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಖುದ್ದು ಭೇಟಿಯಾಗಿ ಯೋಜನೆಯ‌ ಮಹತ್ವವನ್ನು ವಿವರಿಸಿದ್ದೆ. ಅದರ ಪರಿಣಾಮವಾಗಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಳ್ಳ ತುಂಬುವ ಯೋಜನೆಗೆ ಅನುಮೂದನೆ ದೊರೆತಿದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್​ ಹೇಳಿದ್ದಾರೆ.

Approval for ditch filling project
ಮಾಜಿ ಸಚಿವ ಎಂ.ಬಿ.ಪಾಟೀಲ್
author img

By

Published : Oct 7, 2020, 7:50 PM IST

ವಿಜಯಪುರ: ಜಿಲ್ಲೆಯನ್ನು ಪೂರ್ಣ ನೀರಾವರಿಗೆ ಒಳಪಡಿಸುವ ಉದ್ದೇಶದಿಂದ ನನ್ನ ಕನಸಿನ ಹಳ್ಳ ತುಂಬುವ ಯೋಜನೆ ಕುರಿತು ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅಸ್ತು ಎಂದಿದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್​ ಸಂತಸ ವ್ಯಕ್ತಪಡಿಸಿದರು.

ತಮ್ಮ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಕಾಲುವೆ ಜಾಲಗಳಿಗೆ ಹೊಂದಿಕೊಂಡಿರುವ 59 ಹಳ್ಳಗಳನ್ನು ತುಂಬಿಸಲು 59 ಕೋಟಿ ರೂ. ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದರು.

Approval for ditch filling project
ಮಾಜಿ ಸಚಿವ ಎಂ.ಬಿ.ಪಾಟೀಲ್

ಈ ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಪಕ್ಷಾತೀತವಾಗಿ ಬೆಂಬಲ ಸೂಚಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದರ ಜತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಖುದ್ದು ಭೇಟಿಯಾಗಿ ಯೋಜನೆಯ‌ ಮಹತ್ವವನ್ನು ವಿವರಿಸಿದ್ದೆ. ಅದರ ಪರಿಣಾಮವಾಗಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಳ್ಳ ತುಂಬುವ ಯೋಜನೆಗೆ ಅನುಮೋದನೆ ದೊರೆತಿದೆ. ಇದು ತಮಗೆ ಸಂತಸದ ಕ್ಷಣವಾಗಿದೆ ಎಂದರು.

ಮುಳವಾಡ, ಗುತ್ತಿ ಬಸವಣ್ಣ, ಚಿಮ್ಮಲಗಿ ಏತನೀರಾವರಿ ಯೋಜನೆಗಳ ಕಾಲುವೆ ಅಡಿಯಲ್ಲಿ 159 ಹಳ್ಳಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಇದರಿಂದ ಎಲ್ಲೆಡೆ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಾಯಕಾರಿಯಾಗಲಿದೆ ಎಂದು ಎಂ ಬಿ ಪಾಟೀಲ್​ ಹೇಳಿದರು.

ಮಾಜಿ ಸಚಿವ ಎಂ.ಬಿ.ಪಾಟೀಲ್ ಗೆ ಸಂತಸ

ಆಲಮಟ್ಟಿ ಜಲಾಶಯದ ಎತ್ತರ 524ಮೀಟರ್​ಗೆ ಏರಿಕೆಯಾಗುವವರೆಗೆ ಇಂಥ ಹಳ್ಳಗಳು ರೈತರನ್ನು ಬದುಕಿಸುವ ಕೆಲಸ ಮಾಡಲಿವೆ. ಈಗಾಗಲೇ ರಾಜ್ಯ ಸರ್ಕಾರ ಹಳ್ಳ ತುಂಬುವ ಯೋಜನೆಗೆ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ. ಅತಿ ಕಡಿಮೆ 59 ಕೋಟಿ ರೂ. ವೆಚ್ಚದಲ್ಲಿ ಹಳ್ಳ ತುಂಬಿಸಬಹುದಾಗಿದೆ. ಸರ್ಕಾರ ಸಹ ಯೋಜನೆಯ ಖರ್ಚು ವೆಚ್ಚದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಶೀಘ್ರ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದ್ದು, ಕೆಲವೇ ತಿಂಗಳುಗಳಲ್ಲಿ ಕಾಮಗಾರಿ ಶುರುವಾಗಲಿದೆ. ಹಳ್ಳಗಳನ್ನು ತುಂಬಿಸಲು ಮುಖ್ಯವಾಗಿ ಒತ್ತುವರಿ ಸಮಸ್ಯೆ ಇದೆ. ಅವುಗಳನ್ನು ತೆರವುಗೊಳಿಸಿ ಸರ್ವೇ ಕಾರ್ಯ ಅರಂಭಿಸಬೇಕಾಗಿದೆ. ನಂತರ ಹಳ್ಳ ತುಂಬಿಸುವ ಕಾರ್ಯಕ್ಕೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್​ ಸಂತಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.