ಮುದ್ದೇಬಿಹಾಳ (ವಿಜಯಪುರ): 9 ವರ್ಷಗಳ ಬಳಿಕ ಸರ್ಕಾರಿ ಶಾಲೆಯೊಂದರಲ್ಲಿ ಎಸ್ಡಿಎಂಸಿ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಪುನರ್ವಸತಿ ಕೇಂದ್ರವಾಗಿರುವ ತಾಲೂಕಿನ ಕಾನಿಕೇರಿ-ಬಿಜ್ಜೂರ ಎರಡೂ ಗ್ರಾಮಗಳಿಗೂ ಒಂದೇ ಶಾಲೆ ಇರುವುದರಿಂದ ಎಸ್ಡಿಎಂಸಿ ರಚನೆಗೆ ಹಲವು ಬಾರಿ ವಿರೋಧ ವ್ಯಕ್ತವಾಗಿತ್ತು.
ಕಾನಿಕೇರಿ ಗ್ರಾಮದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿತ್ತಲ್ಲದೆ, ಗೊಂದಲಕ್ಕೆ ಕಾರಣವಾಗಿತ್ತು. ಇದೀಗ ಚೀಟಿ ಎತ್ತುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕ ಮಾಡಲಾಗಿದೆ.
ಎಸ್ಡಿಎಂಸಿಯ ನೂತನ ಅಧ್ಯಕ್ಷರಾಗಿ ಕಾನಿಕೇರಿ ಗ್ರಾಮದ ಮಲ್ಲಪ್ಪ ಬಸಪ್ಪ ಹೊಸಗೌಡ್ರ ಹಾಗೂ ಉಪಾಧ್ಯಕ್ಷರಾಗಿ ಬಿಜ್ಜೂರದ ನೀಲಮ್ಮ ಭೀಮಪ್ಪ ಚಲವಾದಿ ಆಯ್ಕೆಯಾಗಿದ್ದು, 16 ಜನ ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಎಸ್.ಸಿ.ಗಡೇದ ತಿಳಿಸಿದ್ದಾರೆ.
ಇದನ್ನೂ ಓದಿ: ಟಂಟಂ ಹಾಗೂ ಕಾರಿನ ನಡುವೆ ಡಿಕ್ಕಿ: ಇಬ್ಬರ ಸಾವು