ETV Bharat / state

ಬಿಎಲ್​ಡಿಇ ಡೀಮ್ಡ್ ವಿವಿಗೆ ನೂತನ ಉಪಕುಲಪತಿ ನೇಮಕ - ಡಾ.ಆರ್.ಎಸ್.ಮುಧೋಳ

ವಿಜಯಪುರದ ಬಿಎಲ್​ಡಿಇ ಡೀಮ್ಡ್ ವಿಶ್ವವಿದ್ಯಾಲಯದ ನೂತನ ಉಪಕುಲಪತಿಯಾಗಿ ಡಾ.ಆರ್.ಎಸ್.ಮುಧೋಳ ನೇಮಕಗೊಂಡಿದ್ದಾರೆ.

Appointment of new Vice Chancellor of the BLDE Deemed University
ಬಿಎಲ್​ಡಿಇ ಡೀಮ್ಡ್ ವಿವಿಗೆ ನೂತನ ಉಪಕುಲಪತಿ ನೇಮಕ
author img

By

Published : Feb 9, 2021, 2:23 PM IST

ವಿಜಯಪುರ: ನಗರದ ಬಿಎಲ್​ಡಿಇ ಡೀಮ್ಡ್ ವಿಶ್ವವಿದ್ಯಾಲಯ ಉಪಕುಲಪತಿಯಾಗಿ ಡಾ.ಆರ್.ಎಸ್.ಮುಧೋಳ ನೇಮಕಗೊಂಡಿದ್ದಾರೆ.

ಮೂಲತಃ ಅಥಣಿ ತಾಲೂಕಿನ ಕೊವಳ್ಳಿ ಗ್ರಾಮದವರಾದ ಮುಧೋಳ ಅವರು, ವಿಜಯಪುರದ ಕೆಸಿಪಿ ಸೈನ್ಸ್ ಕಾಲೇಜಿನಲ್ಲಿ ಪಿಯು ಮುಗಿಸಿದ್ದರು. ವೈದ್ಯಕೀಯ ಸ್ನಾತಕೋತ್ತರ ಪದವಿ ನಂತರ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಸೇವೆಗೆ ಸೇರಿ, ಸದ್ಯ ಅದೇ ಕಾಲೇಜಿನಲ್ಲಿ ಉಪ ಪ್ರಾಚಾರ್ಯರಾಗಿದ್ದಾರೆ.

ಕಿವಿ, ಮೂಗು ಮತ್ತು ಗಂಟಲು ತಜ್ಞರು ಆಗಿರುವ ಡಾ.ಆರ್.ಎಸ್.ಮುಧೋಳ 18 ವರ್ಷಗಳ ಕಾಲ ಕೆಎಲ್​ಇ ಆಸ್ಪತ್ರೆಯ ಸುಪರಿಟೆಂಡೆಂಟ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಸದ್ಯ ಬಿಎಲ್​ಡಿಇ ಡೀಮ್ಡ್ ವಿಶ್ವವಿದ್ಯಾಲಯ ಉಪಕುಲಪತಿಯಾಗಿ ನೇಮಕಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.