ETV Bharat / state

ವಿಜಯಪುರ ಮಹಿಳಾ ವಿವಿ ಘಟಿಕೋತ್ಸವ: ವೈದೇಹಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ - Akka mahadevi Women's VV

ಮಹಿಳಾ ವಿಶ್ವವಿದ್ಯಾನಿಲಯದ 12ನೇ ಘಟಿಕೋತ್ಸವದಲ್ಲಿ ಮೂವರಿಗೆ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಇನ್ಫೋಸಿಸ್ ಫೌಂಡೇಶನ್​ ಅಧ್ಯಕ್ಷೆ ಡಾ.ಸುಧಾಮೂರ್ತಿ, ಬಹಳಷ್ಟು ವಿದ್ಯಾರ್ಥಿನಿಯರು ತಮ್ಮ ಅವಿರತ ಕಠಿಣ ಪರಿಶ್ರಮದ ಫಲವಾಗಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪದವಿಯು ಕೇವಲ ಶೈಕ್ಷಣಿಕ ಪ್ರತಿಫಲವಾಗಿರದೇ ಜವಾಬ್ದಾರಿಯೂ ಹೌದು ಎಂದು ಅಭಿಪ್ರಾಯಪಟ್ಟರು.

Akka mahadevi Women's VV 12th Convention in vijayapura
ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ
author img

By

Published : Nov 9, 2021, 7:08 PM IST

Updated : Nov 9, 2021, 8:23 PM IST

ವಿಜಯಪುರ : ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 12ನೇ ಘಟಿಕೋತ್ಸವದಲ್ಲಿ ವಿವಿಯ ಕುಲಾಧಿಪತಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಸಂಗೀತ ಕ್ಷೇತ್ರದ ಸಾಧನೆಗಾಗಿ ಡಾ.ಸುಮಾ ಸುಧೀಂದ್ರ ಮತ್ತು ಉದ್ಯಮಶೀಲತೆ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿನ ಸಾಧನೆಗಾಗಿ ಕಲ್ಪನಾ ಸರೋಜ್ ಅವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ವೈದೇಹಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಗೌರವ ಡಾಕ್ಟರೇಟ್ ಪ್ರದಾನ
ಗೌರವ ಡಾಕ್ಟರೇಟ್ ಪ್ರದಾನ

ಈ ವೇಳೆ ವರ್ಚುವಲ್​ ಮೂಲಕ ಘಟಿಕೋತ್ಸವ ಭಾಷಣ ಮಾಡಿದ ಇನ್ಫೋಸಿಸ್ ಫೌಂಡೇಶನ್​ ಅಧ್ಯಕ್ಷೆ ಡಾ.ಸುಧಾಮೂರ್ತಿ, ನಮ್ಮಲ್ಲಿರುವ ಕುಂದು-ಕೊರತೆಗಳನ್ನೇ ನಮ್ಮ ಬಲವನ್ನಾಗಿ ಮಾಡಿಕೊಂಡು, ಆತ್ಮಸ್ಥೈರ್ಯದಿಂದ ಕಠಿಣ ಪರಿಶ್ರಮದ ಮೂಲಕ ಮುನ್ನಡೆದಾಗ ಮಾತ್ರ ನಾವು ಜೀವನದಲ್ಲಿ ಸರಿಯಾದ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.

ಬಹಳಷ್ಟು ವಿದ್ಯಾರ್ಥಿನಿಯರು ತಮ್ಮ ಅವಿರತ ಕಠಿಣ ಪರಿಶ್ರಮದ ಫಲವಾಗಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪದವಿಯು ಕೇವಲ ಶೈಕ್ಷಣಿಕ ಪ್ರತಿಫಲವಾಗಿರದೇ ಜವಾಬ್ದಾರಿಯೂ ಹೌದು. ಪದವಿ ಎನ್ನುವುದು ನಮ್ಮ ಸಂಸ್ಕತಿಯನ್ನು ಬಿಂಬಿಸುತ್ತದೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.

ವಿಶ್ವವಿದ್ಯಾನಿಲಯದ ಯೂಟೂಬ್​ ಚಾಲನ್​​

ಇಲಿಯಾಗಿ ನೂರು ವರ್ಷ ಬಾಳುವುದಕ್ಕಿಂತ, ಹುಲಿಯಾಗಿ ಮೂರು ವರ್ಷ ಧೈರ್ಯವಾಗಿ ಬಾಳುವುದು ಲೇಸು. ಜೀವನದಲ್ಲಿ ಹೆದರಿ ಬದುಕುವ ಅವಶ್ಯಕತೆಯಿಲ್ಲ. ಗೌರವಯುತ ಬದುಕು ನಡೆಸಬೇಕು. ತಪ್ಪನ್ನು ಒಪ್ಪಿಕೊಳ್ಳುವ ನಡೆ ನಮ್ಮದಾಗಿರಬೇಕು ಎಂದ ಅವರು, ಹಿರಿಯರಿಗೆ ಗೌರವ ಕೊಡುವ, ಕಿರಿಯರಿಗೆ ಪ್ರೀತಿ ಆದರ ತೋರಿಸುವ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.

ಗೌರವ ಡಾಕ್ಟರೇಟ್ ಪ್ರದಾನ
ಗೌರವ ಡಾಕ್ಟರೇಟ್ ಪ್ರದಾನ

ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ಹೊಸ ಮಹಾವಿದ್ಯಾಲಯಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಬೀದರ್​ ಜಿಲ್ಲೆಯಲ್ಲಿ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಇದೇ ವೇಳೆ ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 12ನೆಯ ಘಟಿಕೋತ್ಸವದಲ್ಲಿ ವಿವಿಯ ಸಾಧನೆಗಳು ಮತ್ತು ಮುನ್ನೋಟ ವರದಿ ಮಂಡಿಸಿದ ಅವರು, ರಾಜ್ಯ ಸರ್ಕಾರವು ಬೆಂಗಳೂರು ಸಮೀಪ ಅದ್ದಿಗಾನಹಳ್ಳಿಯಲ್ಲಿ 4 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದು, ವಿಶ್ವವಿದ್ಯಾನಿಲಯವು ಅಲ್ಲಿ ಮಹಿಳೆಯರಿಗಾಗಿ ಕೆಎಎಸ್/ಐಎಎಸ್ ಪರೀಕ್ಷೆಗಳಿಗೆ ತರಬೇತಿ ಕೇಂದ್ರವನ್ನು ಮತ್ತು ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರವನ್ನು ಆರಂಭಿಸಲು ಯೋಜನೆ ರೂಪಿಸುತ್ತಿದೆ ಎಂದು ಮಾಹಿತಿ ನೀಡಿದರು.

ಗೌರವ ಡಾಕ್ಟರೇಟ್ ಪ್ರದಾನ
ಗೌರವ ಡಾಕ್ಟರೇಟ್ ಪ್ರದಾನ

ಮಹಿಳಾ ವಿಶ್ವವಿದ್ಯಾನಿಲಯ ಸಮುದಾಯದೊಂದಿಗೆ ಸಹಭಾಗಿತ್ವ ಹೊಂದುವ ನೆಲೆಯಲ್ಲಿ 5 ಗ್ರಾಮಗಳನ್ನು ದತ್ತು ಪಡೆದಿದ್ದು, ಅಲ್ಲಿ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಪೌರತ್ವ ತರಬೇತಿ ಶಿಬಿರ, ಎನ್.ಎಸ್.ಎಸ್ ಶಿಬಿರಗಳು, ಕ್ರೀಡೆ ಮತ್ತು ಮನೋಲ್ಲಾಸ ಶಿಬಿರಗಳು ನಿರಂತರವಾಗಿ ನಡೆಯುತ್ತಿವೆ. ಕೋವಿಡ್ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಕೂಡ ಹಮ್ಮಿ ಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಆವರಣದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಚಾರ ಸೊಸೈಟಿ ಸಂಸ್ಥೆಯ ಅನುದಾನದಲ್ಲಿ ವಿಜ್ಞಾನ ಕೇಂದ್ರ ಹಾಗೂ ಕಿರು ತಾರಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕಾಮಗಾರಿಗೆ ರೂ. 9.52 ಕೋಟಿ ಅನುದಾನ ಲಭ್ಯವಾಗಿದೆ ಹಾಗೂ ಕಾಮಗಾರಿಯು ಪ್ರಗತಿಯ ಹಂತದಲ್ಲಿದೆ ಎಂದು ಹೇಳಿದರು.

ಸಂಸದ ರಮೇಶ ಜಿಗಜಿಣಗಿ ಗರಂ:

ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿವಿ ಅಧಿಕಾರಿಗಳು ನಗರದಲ್ಲಿ ಹಮ್ಮಿಕೊಂಡ, ರಾಜ್ಯಪಾಲರು ಭಾಗವಹಿಸುವ ಘಟಿಕೋತ್ಸವಕ್ಕೆ ತಮ್ಮನ್ನು ಆಮಂತ್ರಿಸದೆ ಶಿಷ್ಠಾಚಾರ ಉಲ್ಲಂಘಿಸಿದ್ದಾರೆಂದು ಸಂಸದ ರಮೇಶ ಜಿಗಜಿಣಗಿ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಸಂಸದ ಜಿಗಜಿಣಗಿ, ಸೋಮವಾರ ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್ ಅವರು ವಿಜಯಪುರ ತಲುಪುತ್ತಿದ್ದಂತೆ ನನಗೆ ದೂರವಾಣಿ ಕರೆ ಮಾಡಿದಾಗಲೇ ಅವರ ವಿಜಯಪುರ ಕಾರ್ಯಕ್ರಮ ಮತ್ತು ವಿವಿ ಘಟಿಕೋತ್ಸವ ಕುರಿತು ಗೊತ್ತಾಯಿತೆಂದು ಅವರು ಹೇಳಿದ್ದಾರೆ. ವಿಶ್ವವಿದ್ಯಾಲಯ ರಾಜ್ಯಪಾಲರನ್ನು ಆಮಂತ್ರಿಸಿದ್ದರಿಂದ ನನ್ನನ್ನು ಆಮಂತ್ರಿಸುವುದು ಸರ್ಕಾರದ ಶಿಷ್ಠಾಚಾರವಾಗಿದೆ. ಇದನ್ನು ವಿವಿ ಕುಲಪತಿಗಳು ಉಲ್ಲಂಘಿಸಿದ್ದಾರೆ. ತಡವಾಗಿದ್ದರೆ ದೂರವಾಣಿ ಮೂಲಕ ತಿಳಿಸಬಹುದಾಗಿತ್ತು. ಆದರೆ ನನಗೆ ಯಾವ ಮಾಹಿತಿ ಇಲ್ಲದ್ದರಿಂದ ನಾನು ದೆಹಲಿಗೆ ಬಂದಿದ್ದೇನೆ. ಇಲ್ಲಿರುವಾಗ ರಾಜ್ಯಪಾಲರು ಖುದ್ದು ನನ್ನನ್ನು ಸಂಪರ್ಕಿಸಿ ನಿಮ್ಮ ನಗರಕ್ಕೆ ಬಂದಿದ್ದೇನೆ ನೀವು ಎಲ್ಲಿ ಎಂದು ಪ್ರಶ್ನಿಸಿದಾಗಲೆ ನನಗೆ ಎಲ್ಲ ವಿಷಯ ಗೊತ್ತಾಯಿಗಿದೆ. ಇದರಿಂದ ನನಗೆ ಮುಜುಗುರವಾಯಿತೆಂದು ಹೇಳಿಕೊಂಡಿದ್ದಾರೆ.

ಮಹಿಳಾ ವಿಶ್ವವಿದ್ಯಾಲಯದ ಲೋಪ ಕುರಿತು ಸರ್ಕಾರ, ರಾಜ್ಯಪಾಲ ಮತ್ತು ಲೋಕಸಭಾ ಸ್ಪೀಕರ್ ಅವರಿಗೆ ಪತ್ರ ಬರೆಯುವದಾಗಿ ಹೇಳಿರುವ ಅವರು ಇದೊಂದು ಗಂಭೀರ ಲೋಪ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Last Updated : Nov 9, 2021, 8:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.