ETV Bharat / state

ವಿಜಯಪುರ: ಮಹಾನಗರ ಪಾಲಿಕೆಯ ಇಬ್ಬರು ಸದಸ್ಯರನ್ನು ಪಕ್ಷದಿಂದ ಉಚ್ಛಾಟಿಸಿದ ಎಐಎಂಐಎಂ - AIMIM members expelled

ಮಹಾನಗರ ಪಾಲಿಕೆಯ ಇಬ್ಬರು ಸದಸ್ಯರನ್ನು ಎಐಎಂಐಎಂ ಪಕ್ಷ ಉಚ್ಛಾಟನೆ ಮಾಡಿದೆ.

AIMIM has expelled two members of Municipal Corporation from the party

author img

By ETV Bharat Karnataka Team

Published : Oct 28, 2023, 4:28 PM IST

ರಾಜ್ಯಾಧ್ಯಕ್ಷ ಲತೀಫ್ ಖಾನ ಪಠಾಣ

ವಿಜಯಪುರ: ಎಐಎಂಐಎಂ ಪಾರ್ಟಿಯ ಇಬ್ಬರು ಮಹಾನಗರ ಪಾಲಿಕೆ ಸದಸ್ಯರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಎಐಎಂಐಎಂ ರಾಜ್ಯಾಧ್ಯಕ್ಷ ಲತೀಫ್ ಖಾನ್​ ಪಠಾಣ ಹೇಳಿದ್ದಾರೆ. ನಗರದಲ್ಲಿಂದು ಈ ವಿಚಾರವಾಗಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಜಯಪುರದ ವಾರ್ಡ್​ ನಂ. 25ರ ಸದಸ್ಯೆ ಸುಫಿಯಾ ವಾಟಿ ಹಾಗೂ ವಾರ್ಡ್​ ನಂ. 28ರ ಸದಸ್ಯೆ ರಿಜ್ವಾನಾ ಕೈಸರ್ ಹುಸೇನ್ ಇನಾಮದಾರ್​​ ಅವರನ್ನು ಪಕ್ಷದ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಎಐಎಂಐಎಂ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ತಿಳಿಸಿದರು.

ಇನ್ನು ಕಳೆದ ಅಕ್ಟೋಬರ್ 11 ರಂದು ಬೃಹತ್ ಮತ್ತು ಮಾಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್​ ಅವರ ಬೆಂಗಳೂರಿನ ನಿವಾಸದಲ್ಲಿ 7 ಜನ ಪಾಲಿಕೆ ಸದಸ್ಯರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿರುವುದರ ಕುರಿತು ಸ್ವತಃ ಎಂ ಬಿ ಪಾಟೀಲ್​ ಅವರೇ ಅವರ ಅಧಿಕೃತ ಜಾಲತಾಣಗಳಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದರು. ಅವರು ಹಂಚಿಕೊಂಡಿದ್ದ ಫೋಟೊಗಳಲ್ಲಿ ನಮ್ಮ ಪಕ್ಷದಿಂದ ಆಯ್ಕೆಯಾದ ಸುಫಿಯಾ ವಾಟಿ ಹಾಗೂ ರಿಜ್ವಾನಾ ಇನಾಮದಾರ್ ಇದ್ದರು. ಈ ಕುರಿತು ನಮ್ಮ ಪಕ್ಷದ ಮುಖಂಡರು ಮೌಖಿಕವಾಗಿ ಅವರಿಗೆ ಮಾತನಾಡಿದಾಗ ತಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದರು.

ಈ ಇಬ್ಬರು ಸದಸ್ಯರು ನಮ್ಮ ಪಕ್ಷಕ್ಕೆ ಮಾತ್ರವಲ್ಲ, ಅವರಿಗೆ ಮತ ನೀಡಿದ ಜನತೆಗೂ ಮೋಸ ಮಾಡಿದ್ದಾರೆ. ಹೀಗಾಗಿ ರಾಷ್ಟ್ರೀಯ ಅಧ್ಯಕ್ಷ ಅಸದುದ್ದಿನ್ ಓವೈಸಿ ಅವರ ಆದೇಶದ ಮೇರೆಗೆ ಈ ಇಬ್ಬರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ನಾವು ಸ್ಪರ್ಧಿಸಬೇಕು ಎನ್ನುವ ವಿಚಾರವನ್ನು ನಮ್ಮ ಅಧ್ಯಕ್ಷರಿಗೆ ತಿಳಿಸಿದ್ದೇವೆ. ಯಾವ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕೆಂಬುದರ ಕುರಿತಂತೆ ರಾಷ್ಟ್ರೀಯ ಅಧ್ಯಕ್ಷರು ನಿರ್ಣಯಮಾಡುತ್ತಾರೆ. ಈಗಾಗಲೇ ಸಾಕಷ್ಟು ಜನ ನಮ್ಮ ಪಕ್ಷದಿಂದ ಸ್ಪರ್ಧಿಸಲು ನಮಗೆ ಅಪ್ರೋಚ್ ಆಗುತ್ತಿದ್ದಾರೆ ಎಂದು ಇದೇ ವೇಳೆ ಅವರು ಹೇಳಿದರು.

ಇನ್ನು, ರಾಷ್ಟ್ರೀಯ ಪಕ್ಷಗಳೇ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದಾರೆ. ನಾವು ಕೂಡ ಕಾದುನೋಡುತ್ತಿದ್ದೇವೆ. ಸದ್ಯ ನಾವು ಯಾವುದೇ ಅಲೈನ್ಸ್​ನಲ್ಲಿ ಇಲ್ಲ. ತೃತಿಯ ರಂಗ ಆಗುವ ಸಾಧ್ಯತೆ ಇದೆ. ಅದರಲ್ಲಿ ಏನುಗಾಗುತ್ತೋ ನೋಡಿ ನಿರ್ಧಾರ ಕೈಗೊಳ್ಳಲಾಗುವುದು. ನಮಗೆ ಯಾರೇ ಅಹ್ವಾನ ನೀಡಿದರು ದೇಶದ ಹಿತದೃಷ್ಟಿಯಿಂದ ನಾವು ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಈಗಾಗಲೇ ನಾವು ಕೂಡ ನಮ್ಮ ಪಕ್ಷದ ಮುಖಂಡರಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತ ಎಂದು ಸಹ ಸಲಹೆ ನೀಡಿದ್ದೇವೆ. ಅಂತಿಮವಾಗಿ ರಾಷ್ಟ್ರೀಯ ಅಧ್ಯಕ್ಷರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

ಎಐಎಂಐಎಂ ಜಿಲ್ಲಾ ಕಾರ್ಯದರ್ಶಿ ಸಾದಿಕ್ ಬೇಪಾರಿ, ನಗರ ಘಟಕ ಅಧ್ಯಕ್ಷ ಮುನ್ನಾ ಬಾಂಗಿ, ಶಾರುಕ್ ಪಟೇಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಹೆಚ್​ಡಿಕೆ, ನಿಖಿಲ್​ ಉಚ್ಛಾಟನೆ ನಕಲಿ ಪತ್ರ ವೈರಲ್​; ಇಬ್ರಾಹಿಂ ಬಂಡಾಯದ ಹಿಂದೆ ಕಾಂಗ್ರೆಸ್ ಕೈವಾಡ ಎಂದ ಜಿಟಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.