ವಿಜಯಪುರ : ಜಿಲ್ಲೆಯ ಬಸವನ ಬಾಗೇವಾಡಿಯ ಶ್ರೀ ಮುರುಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ ನಿಯಮಿತ ಶಾಖೆಗಳಲ್ಲಿ ಹಣ ವಂಚನೆ ಆರೋಪ ಕೇಳಿ ಬರುತ್ತಿದೆ. ಜನರು ಬ್ಯಾಂಕಿಗೆ ಹೋಗಿ ತಮ್ಮ ಹಣ ಕೇಳಿದರೆ ಒಬ್ಬರ ಮೇಲೆ ಒಬ್ಬರು ಹಾಕುತ್ತಿದ್ದಾರಂತೆ. ಬ್ಯಾಂಕ್ ನಂಬಿ ಇಟ್ಟ ಹಣವನ್ನು ಲಪಾಟಾಯಿಸಿದ್ದಾರೆ ಎಂದು ಜನ ಆರೋಪ ಮಾಡುತ್ತಿದ್ದಾರೆ.
ಕಳೆದ 10 ವರ್ಷಗಳ ಹಿಂದೆ ಬ್ಯಾಂಕ್ ಆರಂಭಿಸಲಾಗಿತ್ತಂತೆ. ಬ್ಯಾಂಕ್‌ನಲ್ಲಿ ಠೇವಣಿ ಮಾಡಿದ ಹಣ ಬ್ಯಾಂಕ್ ಆಡಳಿತ ಮಂಡಳಿ ಕೊಳ್ಳೆ ಹೊಡೆದಿದ್ದಾರೆ. ಪಿಗ್ಮಿ ಹಾಗೂ ಠೇವಣಿ 12 ಕೋಟಿ ಹಣ ಆಡಳಿತ ಮಂಡಳಿ ಲೂಟಿ ಮಾಡಿ 9 ತಿಂಗಳಿಂದ ಬ್ಯಾಂಕ್ ಬೀಗ ಹಾಕಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.
ಒಟ್ಟು 1500 ಕ್ಕೂ ಅಧಿಕ ಗ್ರಾಹಕರಿಗೆ ಬ್ಯಾಂಕ್ ಮೋಸ ಮಾಡಿರುವುದಾಗಿ ಹೇಳಲಾಗುತ್ತಿದೆ. ಶ್ರೀ ಮುರುಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ ನಿಯಮಿತದ ಒಟ್ಟು 21 ಬ್ಯಾಂಕ್‌ಗಳಿದ್ದು 19 ಬ್ಯಾಂಕ್‌ಗಳಲ್ಲಿ ವಂಚನೆ ಮಾಡಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಬ್ಯಾಂಕ್ ನಂಬಿಕೊಂಡು ಠೇವಣೆಯಿಟ್ಟ ಗ್ರಾಹಕರು ತಮ್ಮ ಹಣಕ್ಕಾಗಿ ಪರಡಾಡುವಂತಾಗಿದೆ